• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೃತ್ಯ ರೂಪಕ

|

ಬೆಂಗಳೂರು ಜನವರಿ 27: ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶಗಳನ್ನು ಪ್ರಸ್ತುತಪಡಿಸಲಿರುವ ಶ್ರೀ ರಾಮ ಯಾನ ಕುರಿತ ನೃತ್ಯ ರೂಪಕವನ್ನು ದೇಶದಲ್ಲೇ ಮೊದಲ ಬಾರಿಗೆ ಫೆಬ್ರವರಿ 5 ರಂದು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಖ್ಯಾತ ನಿರ್ದೇಶಕ ಹಾಗೂ ರಂಗಕರ್ಮಿ ಟಿ ಎಸ್‌ ನಾಗಾಭರಣ ಅವರು ಹೇಳಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಾಯಣದ ಪಾತ್ರಧಾರಿಗಳು ಪ್ರದರ್ಶಿಸಿದ ನಂತರ ಅವರು ಮಾತನಾಡಿದ, ರಾಜ್ಯದ ಹೆಸರಾಂತ ಸಂಗೀತಗಾರ್ತಿ ಪಿ. ರಮಾ ಮತ್ತು ಪ್ರಖ್ಯಾತ ನೃತ್ಯ ಕಲಾವಿದೆ ಡಾ.ವೀಣಾ ಮೂರ್ತಿ ವಿಜಯರ್‌ ರವರು ಇದೇ ಫೆಬ್ರವರಿ 3,4 ಮತ್ತು 5 ನೇ ತಾರೀಖುಗಳಂದು ಮೂರು ದಿನಗಳ ಕಾಲ ಸಂಗೀತ ಸಂಭ್ರಮ ಟ್ರಸ್ಟ್‌ ವತಿಯಿಂದ ನಮ್ಮ ಪವಿತ್ರ ಗ್ರಂಥ ರಾಮಾಯಣಕ್ಕೆ ಸಂಬಂಧಿಸದಂತೆ ವಿವಿಧ ಕಲಾ ಪ್ರಕಾರಗಳ ಕಲಾ ಉತ್ಸವವನ್ನು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸುತ್ತಾರೆ. ಈ ಕಲಾ ಉತ್ಸವವರು ಪ್ರಸ್ತುತ ನಮ್ಮ ಕಲೆ ಮತ್ತು ಸಂಸ್ಕೃತಿಯ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪನವರು ನಡೆಸಿಕೊಡಲಿದ್ದು, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಜಿ ಅವರು ಪಾಲ್ಗೊಳ್ಳಿದ್ದಾರೆ ಎಂದು ಹೇಳಿದರು.

 ನೃತ್ಯ ರೂಪಕದಲ್ಲಿ ರಾಮಾಯಣ

ನೃತ್ಯ ರೂಪಕದಲ್ಲಿ ರಾಮಾಯಣ

ಶ್ರೀ ರಾಮಾಯಣವನ್ನು ನೃತ್ಯ ರೂಪಕದಲ್ಲಿ ಪ್ರಸ್ತುತುಪಡಿಸುತ್ತಿರುವುದು ಇದೇ ಮೊದಲ ಪ್ರಯತ್ನವಾಗಿದೆ. ಅಂತಹ ಅಮೂಲಾಗ್ರ ಸಂಪುಟವನ್ನು ಈ ನೃತ್ಯ ರೂಪಕದಲ್ಲಿ ಸಂಗೀತ ಸಂಭ್ರಮ ಟ್ರಸ್ಟ್‌ ನ ಶ್ರೀಮತಿ ಪಿ.ರಮಾ ಹಾಗೂ ಡಾ. ವೀಣಾಮೂರ್ತಿ ವಿಜಯ್‌ ರವರು ಪ್ರಸ್ತುತಪಡಿಸುತ್ತಿದ್ದಾರೆ. ಈ ಟ್ರಸ್ಟ್‌ ಅಡಿಯಲ್ಲಿ ಕಳೆದ 2 ತಿಂಗಳಿನಿಂದ ರಾಮಾಯಣದ ಬಗ್ಗೆ 24 ಶಾಲೆಗಳಲ್ಲಿ ಕಾಳಜಿ ಹಾಗೂ ಗೌರವ ಮೂಡಿಸುವ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ಪ್ರಚಾರ/ಅಭಿಯಾವನು ಚಿತ್ರಕಲೆ, ಕಥೆ ಹೇಳುವುದುದ, ಶ್ಲೋಕ ಪಠಣ ಮತ್ತು ಹಾಡುವುದನ್ನೊಳಗೊಂಡಿದ್ದು ಉತ್ಸಾಹಿ ಮಾರ್ಗದರ್ಶಕರಿಂದ ಯಶಸ್ವಿಯಾಗಿದೆ.

 ಸಂಗೀತ ಸಂಭ್ರಮ ಟ್ರಸ್ಟಿನ ಅಧ್ಯಕ್ಷೆ ಡಾ.ಪಿ ರಮಾ

ಸಂಗೀತ ಸಂಭ್ರಮ ಟ್ರಸ್ಟಿನ ಅಧ್ಯಕ್ಷೆ ಡಾ.ಪಿ ರಮಾ

ಸಂಗೀತ ಸಂಭ್ರಮ ಟ್ರಸ್ಟಿನ ಅಧ್ಯಕ್ಷೆ ಡಾ.ಪಿ ರಮಾ ಅವರು ಮಾತನಾಡಿ, ಫೆಬ್ರವರಿ 3, 4 ಮತ್ತು 5 ಮೂರು ದಿನಗಳ ಕಾಲ ನಡೆಯಲಿರುವ ಸಂಗೀತ ಸಂಭ್ರಮ ನಡೆಯಲಿದೆ. ಫೆಬ್ರವರಿ 3 ರಂದು ಸೊಮವಾರ ಬೆಳಿಗ್ಗೆ ಶ್ರೀ ರಾಮ ಯಾನ - ನಡಿಗೆ ಮತ್ತು ಗಿಡನೆಡುವ ಕಾರ್ಯಕ್ರಮ ನಡೆಯಲಿದೆ. 24 ಶಾಲೆಯ 2000 ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ಸಂಜೆ ಯದುಗಿರಿ ಯತಿರಾಜ ನಾರಾಯಣ ಜೀಯರ್‌ ಸ್ವಾಮೀಜಿ ಹಿರಿಯ ಮಹೋನ್ನತ ಕಲಾವಿದರಿಗೆ/ವಿದ್ವಾಂಸರಿಗೆ "ಸಂಭ್ರಮ ಪುರಸ್ಕಾರ" ನೀಡಿ ಗೌರವಿಸಲಾಗುವುದು. ಪ್ರಸಿದ್ದ ರಂಗಕರ್ಮಿ ಹಾಗೂ ನಿರ್ದೇಶಕರಾದ ಟಿ ಎಸ್‌ ನಾಗಾಭರಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಭ್ರಮ ಪುರಸ್ಕಾರ ಸ್ವೀಕರಿಸಲಿರುವ ಶತಾವಧಾನಿ ಆರ್‌. ಗಣೇಶ್‌ ನಂತರ ಸಂಜೆ 6:45ಕ್ಕೆ ಪ್ರಾಚೀನ ಭಾರತ ಹಾಗೂ ಪ್ರಸ್ತುತ ನವ ಭಾರತದಲ್ಲಿ ರಾಮಾಯಣದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

 ಬೆಂಗಳೂರು ನಾಗರತ್ನಮ್ಮ ನಾಟಕ

ಬೆಂಗಳೂರು ನಾಗರತ್ನಮ್ಮ ನಾಟಕ

ಫೆಬ್ರವರಿ 04-02-2020 ಮಂಗಳವಾರದಂದು ಶ್ರೀರಾಮನ ಭಕ್ತೆ, ಹೆಸರಾಂತ ಸಂಗೀತಗಾರ್ತಿ ಬೆಂಗಳೂರು ನಾಗರತ್ನಮ್ಮನವರ ಜೀವನದ ಸತ್ಯ ಕಥೆಯನ್ನಾಧರಿಸಿದ ನಾಟಕದ ಪ್ರದರ್ಶನ ಆಯೋಜಿಸಲಾಗಿದೆ. ಇದರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶವನ್ನು ಟಿ.ಎಸ್‌ ನಾಗಾಭರಣ ಅವರದ್ದಾಗಿದೆ ಎಂದು ಹೇಳಿದರು. ಈ ಅಭಿಯಾನವು ರಾಮಾಯಣ ಕುರಿತಂತೆ ಅಂತರ್‌ ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಫೆಬ್ರವರಿ 3 ನೇ ತಾರೀಖ ಬೆಳಿಗ್ಗೆ ಸ್ಪರ್ಧಾ ವಿಜೇತರಿಂದ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.

 ಡಿಸಿಎಂ ಡಾ ಸಿ.ಎನ್‌ ಅಶ್ವಥ್‌ ನಾರಾಯಣ ನೆರವು

ಡಿಸಿಎಂ ಡಾ ಸಿ.ಎನ್‌ ಅಶ್ವಥ್‌ ನಾರಾಯಣ ನೆರವು

ಫೆಬ್ರವರಿ 05-02-2020 ಬುಧವಾರದಂದು ಶ್ರೀ ರಾಮ ಯಾನ - ರಾಮಾಯಣ ಗ್ರಂಥ ಕುರಿತು ನೃತ್ಯ ರೂಪಕ ವನ್ನು ಆಯೋಜಿಸಲಾಗಿದೆ. ಶ್ರೀ ರಾಮಾಯಣ ಸಮಗ್ರತೆಯನ್ನು ಸುಂದರ ಕಾವ್ಯದ ರೂಪದಲ್ಲಿ ಹಿರಿಯ ಕಲಾವಿದರುಗಳು ವೇದಿಕೆಯ ಮೇಲೆ ಪ್ರಸ್ತುತಪಡಿಸಲಿದ್ದಾರೆ. ಪ್ರಶಾಂತ್‌ ಗೋಪಾಲ ಶಾಸ್ತ್ರಿ ಶ್ರೀ ರಾಮನ ಪಾತ್ರದಲ್ಲಿ ಹಾಗೂ ಸೌಂದರ್ಯ ಶ್ರೀವತ್ಸ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂರುದಿನಗಳ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ ಸಿ.ಎನ್‌ ಅಶ್ವಥ್‌ ನಾರಾಯಣ ಅವರು ಬಹಳ ಸಹಯೋಗವನ್ನು ನೀಡಿದ್ದಾರೆ ಎಂದು ತಿಳಿಸಿದರು.

English summary
Sangeetha Sambhrama has conceptualised a three-day unique festival from February 3 to 5 at Chowdaiah Memorial Hall. The festival based on the theme and character of Sri Rama, a complete man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more