ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟ್ರೀಂ ರೆಸ್ಟೋರೆಂಟ್‌ ನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಆತಿಥ್ಯ ನೀಡಿ ಸತ್ಕಾರ

|
Google Oneindia Kannada News

ಬೆಂಗಳೂರು ನವೆಂಬರ್‌ 14: ಈ ಬಾರಿಯ ಮಕ್ಕಳ ದಿನಾಚರಣೆಯನ್ನು ದೇಶದ ಮೊದಲ ಸ್ಟ್ರೀ ರೆಸ್ಟೊರೆಂಟ್‌ ಎಂದೇ ಖ್ಯಾತಿ ಪಡೆದಿರುವ ಸ್ಟೋನಿ ಬ್ರೂಕ್‌ ನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಸರಕಾರಿ ಶಾಲೆಯ ಹಾಗೂ ಹಿಂದುಳಿದ ಪ್ರದೇಶದ 50 ಕ್ಕೂ ಹೆಚ್ಚು ಮಕ್ಕಳು ಈ ನೂತನ ಹೋಟೇಲ್‌ ನ ಆತಿಥ್ಯ ಸವಿದು ಸಂತಸ ವ್ಯಕ್ತಪಡಿಸಿದರು.

ಪ್ರಸಿದ್ದ ಹೋಟೆಲ್‌ ಗಳ ಮುಂದೆ ಹಾದು ಹೋಗುವಾಗ ಈ ಹೋಟೇಲ್‌ ನಲ್ಲಿ ಒಮ್ಮೆ ಖಾದ್ಯಗಳನ್ನು ಸವಿಯಬೇಕು ಎನ್ನುವ ಸಹಜ ಆಸೆ ಎಲ್ಲರಿಗೂ ಮೂಡಿರುವುದು ಸಹಜ. ಅದರಲ್ಲೂ ಮುಗ್ದ ಮನಸ್ಸಿನ ಮಕ್ಕಳಂತೂ ಅಲ್ಲಿ ಝಗಮಗಿಸುವ ಲೈಟ್‌ಗಳು, ಖಾದ್ಯಗಳನ್ನು ನೋಡಿ ಅಸೆಪಟ್ಟಿರುತ್ತಾರೆ. ನಗರದ ಬಹಳಷ್ಟು ಮಕ್ಕಳಿಗೆ ಅಂತಹ ಹೋಟೇಲ್‌ ಗಳಿಗೆ ಹೋಗಿ ಅಲ್ಲಿನ ಅನುಭವ ಪಡೆಯುವುದು ಸಾಧ್ಯವಾಗುವುದಿಲ್ಲ. ಇಂತಹ ಕೆಲವಷ್ಟು ಮಕ್ಕಳ ಸಹಜ ಕುತೂಹಲವನ್ನು ತೀರಿಸುವ ಉದ್ದೇಶದಿಂದ ವಿರೌಡ್ ವೆಂಚರ್ಸ್‌ ನ ಮಾಲೀಕರಾದ ವಿನಯ್‌ ವಿ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು.

ಮತ್ತೆ ಬಾಲ್ಯದ ನೆನಪುಗಳ ಸುತ್ತ ಗಿರಕಿಹೊಡೆಸಿದ ಗೂಗಲ್ ಡೂಡಲ್ಮತ್ತೆ ಬಾಲ್ಯದ ನೆನಪುಗಳ ಸುತ್ತ ಗಿರಕಿಹೊಡೆಸಿದ ಗೂಗಲ್ ಡೂಡಲ್

ಝುಳು ಝುಳು ಹರಿಯುವ ನೀರಿನ ಮಧ್ಯೆ ಕುಳಿತು ಖಾದ್ಯಗಳನ್ನು ಸವಿಯುವ ಹಾಗೂ ನೂತನ ಹೋಟೇಲ್‌ ನ ಅನುಭವ ಪಡೆದ ಮಕ್ಕಳ ಸಂತಸ ಬಣ್ಣಿಸಲಾರದಂತಿತ್ತು.

ಸ್ಟೋನಿ ಬ್ರೂಕ್‌ ನ ಮಾಲೀಕರಾದ ವಿನಯ್‌ ವಿ

ಸ್ಟೋನಿ ಬ್ರೂಕ್‌ ನ ಮಾಲೀಕರಾದ ವಿನಯ್‌ ವಿ

ಈ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದ ಸ್ಟೋನಿ ಬ್ರೂಕ್‌ ನ ಮಾಲೀಕರಾದ ವಿನಯ್‌ ವಿ, ಬೆಂಗಳೂರು ನಗರದ ಜನರಿಗೆ ಒಂದು ಒಳ್ಳೆಯ ಅನುಭವ ನೀಡುವ ಉದ್ದೇಶ ನಮ್ಮ ದಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸ್ಟ್ರೀಂ ರೆಸ್ಟೋರೆಂಟನ್ನು ಪ್ರಾರಂಭಿಸಲಾಯಿತು. ಇದುವರೆಗೂ ಈ ರೆಸ್ಟೋರೆಂಟ್‌ ಗೆ ಬಹಳಷ್ಟು ಜನರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಕೆಳ ವರ್ಗದ ಹಾಗೂ ಸರಕಾರಿ ಶಾಲೆಯ ಮಕ್ಕಳೂ ಈ ನೂತನ ಅನುಭವ ಪಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.

ಇಂಥ ಕಾರ್ಯಕ್ರಮದ ಆಲೋಚನೆ ಹುಟ್ಟಿದ್ದು ಹೇಗೆ?

ಇಂಥ ಕಾರ್ಯಕ್ರಮದ ಆಲೋಚನೆ ಹುಟ್ಟಿದ್ದು ಹೇಗೆ?

ಹಲವಾರು ಮಕ್ಕಳು ರೆಸ್ಟೋರೆಂಟ್‌ ಪ್ರತಿನಿತ್ಯ ಈ ದಾರಿಯಲ್ಲಿ ಸಂಚರಿಸುವಾಗ ಹೊರಗಿನಿಂದ ನೋಡಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿ, ಇಂಥದ್ದೊಂದು ಕಾರ್ಯಕ್ರಮ ರೂಪಿಸಬೇಕು ಎನ್ನುವ ಆಲೋಚನೆ ಹುಟ್ಟಿತು ಎಂದು ಸ್ಟೋನಿ ಬ್ರೂಕ್‌ ನ ಮಾಲೀಕರಾದ ವಿನಯ್‌ ವಿ ಹೇಳಿದರು.

ಮಕ್ಕಳ ದಿನ: ನೆಹರು ಜನ್ಮದಿನದಂದು ಗಣ್ಯರ ಶುಭ ಹಾರೈಕೆಮಕ್ಕಳ ದಿನ: ನೆಹರು ಜನ್ಮದಿನದಂದು ಗಣ್ಯರ ಶುಭ ಹಾರೈಕೆ

ಆತಿಥ್ಯ ಸ್ವೀಕರಿಸಿದ ಸರಕಾರಿ ಶಾಲೆಯ ಮಗು

ಆತಿಥ್ಯ ಸ್ವೀಕರಿಸಿದ ಸರಕಾರಿ ಶಾಲೆಯ ಮಗು

ಸ್ಟೋನಿ ಬ್ರೂಕ್‌ ನ ಆತಿಥ್ಯ ಸ್ವೀಕರಿಸಿದ ಸರಕಾರಿ ಶಾಲೆಯ ಮಗು ಮಂಜುನಾಥ್‌ ಮಾತನಾಡಿ, ಹಲವು ಬಾರಿ ಈ ದಾರಿಯಲ್ಲಿ ಹೋಗುತ್ತಿದ್ದಾಗ ಈ ರೆಸ್ಟೋರೆಂಟ್‌ ನಲ್ಲಿ ಊಟ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಹೋಟೇಲ್‌ ನೀರನ ಮಧ್ಯೆ ಕುಳಿತು ನನಗೆ ಇಷ್ಟವಾದ ಆಹಾರ ಸೇವಿಸಿರುವುದು ಬಹಳ ಸಂತಸ ತಂದಿದೆ ಎಂದರು.

ಬರಿಗಾಲಿನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತ ಮಕ್ಕಳು

ಬರಿಗಾಲಿನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತ ಮಕ್ಕಳು

50 ಕ್ಕೂ ಹೆಚ್ಚು ಮಕ್ಕಳು ಬರಿಗಾಲಿನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತು ತಮಗಿಷ್ಟವಾದ ಖಾದ್ಯಗಳನ್ನು ಸೇವಿಸಿ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಸ್ಟೋನಿ ಬ್ರೂಕ್‌ ನ ಮಾಲೀಕರಾದ ವಿನಯ್‌ ವಿ ಅವರು ನೋಟ್‌ ಬುಕ್‌ ಗಳು, ಆಟಿಕೆಗಳು ಹಾಗೂ ಪೆನ್ನುಗಳನ್ನೂ ನೀಡಿ ಸತ್ಕರಿಸಿದರು.

English summary
India’s first Stream Restaurant Stonny Brook, celebrated children’s day in a unique way. They hosted underprivileged and government school children at the restaurant to give them an opportunity to experience the restaurant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X