ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪನ ಆರೋಗ್ಯ ಸ್ಥಿರವಾಗಿದೆ: ಡಿವಿಎಸ್ ಪುತ್ರ ಕಾರ್ತಿಕ್ ಗೌಡ

|
Google Oneindia Kannada News

ಬೆಂಗಳೂರು, ಜನವರಿ 03: ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಡಿ. ವಿ ಸದಾನಂದ ಗೌಡ ಅವರು ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದರಿಂದ ಸಹಜವಾಗಿ ಆಪ್ತರು, ಅಭಿಮಾನಿಗಳಿಗೆ ಆತಂಕ ಮೂಡಿದೆ. ಆದರೆ, ಸದಾನಂದ ಗೌಡರ ಆರೋಗ್ಯ ಸ್ಥಿರವಾಗಿದೆ, ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರದುರ್ಗದ ಬಿಜೆಪಿ ಮುಖಂಡ ನವೀನ್ ಮಾಲೀಕತ್ವದ ನವೀನ್ ರೆಸಿಡೆನ್ಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಪಿಟ್ಸ್ ನಿಂದಾಗಿ ಮೂರ್ಛೆ ಹೋದ ಘಟನೆ ನಡೆದಿತ್ತು. ತಕ್ಷಣವೇ ಪೊಲೀಸ್ ಎಸ್ಕಾರ್ಟ್ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.

ಪ್ರಜ್ಞೆ ತಪ್ಪಿ ಕುಸಿದ ಸಂಸದ ಸದಾನಂದ ಗೌಡ, ಆಸ್ಪತ್ರೆಗೆ ದಾಖಲುಪ್ರಜ್ಞೆ ತಪ್ಪಿ ಕುಸಿದ ಸಂಸದ ಸದಾನಂದ ಗೌಡ, ಆಸ್ಪತ್ರೆಗೆ ದಾಖಲು

ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿತ್ತು ಎಂದು ವೈದ್ಯರು ತಿಳಿಸಿದರು. ನಂತರ ಜೀರೋ ಟ್ರಾಫಿಕ್ ನಲ್ಲಿ ಚಿತ್ರದುರ್ಗದಿಂದ ಬೆಂಗಳೂರಿನ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Union Minister DV Sadananda Gowda treatment at Bengaluru Hospital

ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಹೇಳಿಕೆ: ಇದೇ ಮೊದಲ ಬಾರಿಗೆ ಅಪ್ಪನಿಗೆ ಲೋ ಶುಗರ್ ಆಗಿದೆ, ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆ ದಾಖಲಿಸಲಾಗಿದೆ. ಇದೇ ಆಸ್ಪತ್ರೆಗೆ ಚೆಕಪ್ ಗೆ ಅಪ್ಪ‌ ಬರ್ತಿದ್ರು, ಇದೇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಪ್ಪ ಕ್ಷೇಮವಾಗಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ, ಆತಂಕ ಪಡುವ ಯಾವುದೇ ಆಗತ್ಯವಿಲ್ಲ ಎಂದು ಪುತ್ರ ಕಾರ್ತಿಕ್ ಗೌಡ ಹೇಳಿದರು.

Recommended Video

ಜನವರಿ 8 ರವರೆಗೆ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ-ಹವಾಮಾನ ಇಲಾಖೆ | Oneindia Kannada

''ಡಿವಿಎಸ್ ಕ್ಷೇಮವಾಗಿದ್ದಾರೆ, ಯಾರೂ ಆತಂಕ ಪಡುವ ಹಾಗಿಲ್ಲ, ಶುಗರ್ ಲೆವೆಲ್ ಸರಿ ಇದೆ ಅಂತ ವೈದ್ಯರು ಹೇಳಿದ್ದಾರೆ, ಕುಟುಂಬಸ್ಥರು ಡಿವಿಎಸ್ ಜತೆ ಇದ್ದಾರೆ''ಎಂದು ಪರಿಷತ್ ಸದಸ್ಯ ವೈ ಎ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

English summary
Union Minister DV Sadananda Gowda shifted to private hospital in Bengaluru from Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X