ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡಾನ್ ಯೋಜನೆಯಡಿ ಬೆಂಗಳೂರು-ಜಾಮ್ ನಗರ ನೇರ ವಿಮಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 27; ಉಡಾನ್ ಯೋಜನೆಯಡಿ ಬೆಂಗಳೂರು ಮತ್ತು ಗುಜರಾತ್‌ ರಾಜ್ಯದ ಜಾಮ್ ನಗರ ನಡುವೆ ನೇರ ವಿಮಾನ ಸೌಕರ್ಯ ಆರಂಭವಾಗಿದೆ. ವಾರದಲ್ಲಿ ಮೂರು ದಿನಗಳ ಕಾಲ ಉಭಯ ನಗರಗಳ ನಡುವೆ ವಿಮಾನ ಸಂಚಾರ ನಡೆಸಲಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿಮಾನಯಾನ ಖಾತೆ ರಾಜ್ಯ ಸಚಿವರು ಜನರಲ್ ಡಾ. ವಿ. ಕೆ. ಸಿಂಗ್ ವರ್ಚುವಲ್ ಆಗಿ ಈ ವಿಮಾನ ಸೇವೆಗೆ ಚಾಲನೆ ನೀಡಿದರು.

ಅಂಕೋಲಾ; ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಪ್ಪಿಗೆ ಅಂಕೋಲಾ; ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಪ್ಪಿಗೆ

ಉಡಾನ್ ಯೋಜನೆಯಡಿ ಜಾಮ್ ನಗರ (ಗುಜರಾತ್), ಬೆಂಗಳೂರು (ಕರ್ನಾಟಕ) ಮತ್ತು ಹೈದರಾಬಾದ್ (ತೆಲಂಗಾಣ) ನಡುವಿನ ಮೊದಲ ನೇರ ವಿಮಾನ ಸೇವೆಗೆ ಚಾಲನೆ ನೀಡಿದರು. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಒಳಗೊಂಡಂತೆ 3 ಪ್ರಮುಖ ನಗರಗಳಿಗೆ ಜಾಮ್ ನಗರ ವೈಮಾನಿಕ ಸಂಪರ್ಕವನ್ನು ಕಲ್ಪಿಸುತ್ತಿದೆ.

ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್ ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್

 Under UDAN Star Air To Connect Jamnagar Bengaluru

ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, "ಉಡಾನ್ ಅಡಿಯಲ್ಲಿ ಜಾಮ್ ನಗರದಿಂದ ಪ್ರಾದೇಶಿಕ ಸಂಪರ್ಕಕ್ಕೆ ಚಾಲನೆ ನೀಡಲು ನನಗೆ ಸಂತೋಷವಾಗುತ್ತಿದೆ. ಇಂದಿನಿಂದ ಸ್ಟಾರ್ ಏರ್ ಮೊದಲ ಬಾರಿಗೆ ಜಾಮ್‌ ನಗರ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಜೊತೆಗೆ ಜಾಮ್‌ ನಗರ ಮತ್ತು ಹೈದರಾಬಾದ್ ನಡುವಿನ ಸೇವೆಯನ್ನು ಆರಂಭಿಸಲಿದೆ" ಎಂದರು.

ಎನ್‌ಎಂಪಿಗೆ ಹುಬ್ಬಳ್ಳಿ ಏರ್‌ಪೋರ್ಟ್‌ ಆಯ್ಕೆ; ಹೇಗಿರಲಿದೆ ಖಾಸಗೀಕರಣ?ಎನ್‌ಎಂಪಿಗೆ ಹುಬ್ಬಳ್ಳಿ ಏರ್‌ಪೋರ್ಟ್‌ ಆಯ್ಕೆ; ಹೇಗಿರಲಿದೆ ಖಾಸಗೀಕರಣ?

ಗುಜರಾತ್ ರಾಜ್ಯದ ಜಾಮ್ ನಗರವು ವ್ಯಾಪಾರ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳ ಪರಿಪೂರ್ಣ ಮಿಶ್ರಣವಾಗಿದೆ. ಉಡಾನ್ ಅಡಿಯಲ್ಲಿ ಗುಜರಾತ್‌ನಿಂದ 10 ಹೆಚ್ಚುವರಿ ವಿಮಾನಗಳನ್ನು ಆರಂಭಿಸಲು ವಿಮಾನಯಾನ ಸಚಿವಾಲಯ ಚಿಂತನೆಯಲ್ಲಿದೆ. ಜಾಮ್ ನಗರವನ್ನು 'ಛೋಟಿ ಕಾಶಿ' ಎಂದೂ ಕರೆಯುತ್ತಾರೆ. ಏಕೆಂದರೆ ಇಲ್ಲಿ 100ಕ್ಕೂ ಹೆಚ್ಚು ದೇವಾಲಯಗಳಿವೆ.

ಜಾಮ್ ನಗರವು ನಾಲ್ಕು ಅಮೃತಶಿಲೆಯ ಜೈನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ವರ್ಧಮಾನ್ ಶಾ ದೇವಾಲಯ, ರೈಸಿ ಶಾ ದೇವಾಲಯ, ಶೇತ್ ದೇವಾಲಯ ಮತ್ತು ವಸುಪೂಜ್ಯ ಸ್ವಾಮಿ ದೇವಾಲಯವಿದೆ. ಎಲ್ಲವನ್ನೂ 1574 ಮತ್ತು 1622 ರ ನಡುವೆ ನಿರ್ಮಿಸಲಾಗಿದೆ. ಇದಲ್ಲದೆ, ಜಾಮ್‌ ನಗರವನ್ನು ಚಾರ್ ಧಾಮಗಳಲ್ಲಿ ಒಂದಾದ ಮೋಕ್ಷಪುರಿ ನಗರ, ದ್ವಾರಕಾದ ಗೇಟ್‌ವೇ ನಗರ ಎಂದೂ ಕರೆಯುತ್ತಾರೆ.

ಮೋತಿ ಖವಡಿ ಹಳ್ಳಿಯ ಬಳಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ಕಾಂಪ್ಲೆಕ್ಸ್ ಮತ್ತು ಹತ್ತಿರದ ವಾಡಿನಾರ್‌ನಲ್ಲಿರುವ ಭಾರತದ ಎರಡನೇ ಅತಿದೊಡ್ಡ ಖಾಸಗಿ ಸಂಸ್ಕರಣಾಗಾರದಿಂದಾಗಿ ಜಾಮ್‌ ನಗರವನ್ನು ವಿಶ್ವದ ತೈಲ ನಗರ ಎಂದೂ ಕರೆಯುತ್ತಾರೆ. 5,000 ಕ್ಕಿಂತಲೂ ಹೆಚ್ಚಿನ ದೊಡ್ಡ ಪ್ರಮಾಣದ ಮತ್ತು 10,000 ಸಣ್ಣ ಪ್ರಮಾಣದ ವರ್ಕ್ ಶಾಪ್ ಗಳು ಹಿತ್ತಾಳೆಯ ವಸ್ತುಗಳನ್ನು ತಯಾರಿಸುವುದರಿಂದ ಜಾಮ್‌ ನಗರವನ್ನು ಹಿಂದೆ ದೇಶದ 'ಬ್ರಾಸ್ ಸಿಟಿ' ಎಂದು ಕರೆಯಲಾಗುತ್ತಿತ್ತು.

ಯಾವುದೇ ನೇರ ವಿಮಾನ ಅಥವಾ ರೈಲು ಸಂಪರ್ಕ ಲಭ್ಯವಿಲ್ಲದ ಕಾರಣ ಜನರು ಈ ನಗರಗಳನ್ನು ತಲುಪಲು ದೀರ್ಘ ಪ್ರಯಾಣದ ಸಮಯವನ್ನು ತೆಗೆದುಕೊಳ್ಳುತ್ತಿದ್ದರು. ಜಾಮ್‌ ನಗರ ಮತ್ತು ಬೆಂಗಳೂರು ನಡುವೆ ನೇರ ವಿಮಾನದ ಲಭ್ಯತೆಯು ಮುಂಬೈ ಮೂಲಕ ಸಂಪರ್ಕಿಸುವ ವಿಮಾನಗಳನ್ನು ಬಳಸಿಕೊಂಡು ವಿಮಾನ ಪ್ರಯಾಣಕ್ಕೆ ತೆಗೆದುಕೊಳ್ಳುವ 7 ಗಂಟೆಗಳ ಹಿಂದಿನ ಪ್ರಯಾಣದ ಸಮಯವನ್ನು 135 ನಿಮಿಷಗಳಿಗೆ ಕಡಿತಗೊಳಿಸುತ್ತದೆ. ಈ ಎರಡು ನಗರಗಳ ನಡುವಿನ ರಸ್ತೆ ಪ್ರಯಾಣದ ಅವಧಿ 30 ಗಂಟೆಗಳಿಗಿಂತ ಹೆಚ್ಚು.

ಜಾಮ್ ನಗರದಿಂದ ಹೋಗಲು ಮತ್ತು ಬರಲು ರೈಲು ಮತ್ತು ರಸ್ತೆ ಪ್ರಯಾಣ ಅಥವಾ ಹೈದರಾಬಾದ್ ತಲುಪಲು 1 ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈ ಎರಡು ನಗರಗಳ ನಡುವೆ ನೇರ ವಿಮಾನಗಳ ಸಂಪರ್ಕವಿಲ್ಲದ ಕಾರಣ, ಸಂಪರ್ಕಿಸುವ ವಿಮಾನಗಳನ್ನು ಬಳಸಿಕೊಂಡು ವಿಮಾನ ಪ್ರಯಾಣಕ್ಕೆ 6 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ, ಸ್ಥಳೀಯರು ಕೇವಲ 130 ನಿಮಿಷಗಳಲ್ಲಿ ಎರಡು ನಗರಗಳ ನಡುವೆ ಸುಲಭವಾಗಿ ಪ್ರಯಾಣಿಸಬಹುದು.

Recommended Video

ನಿಮ್ ಮಕ್ಳಿಗೆಲ್ಲಾ ಒಳ್ಳೆದಾಗಲ್ಲಾ ಎಂದು ಪೊಲೀಸರ ಮೇಲೆ ರಮೇಶ್ ಕುಮಾರ್ ಫುಲ್ ಗರಂ | Oneindia Kannada

ಸ್ಟಾರ್ ಏರ್ ಈ ಮಾರ್ಗದಲ್ಲಿ ವಾರಕ್ಕೆ ಮೂರು ಬಾರಿ (ಮಂಗಳವಾರ, ಗುರುವಾರ, ಶನಿವಾರ) ಹಾರಾಟ ನಡೆಸಲಿದೆ ಮತ್ತು ತನ್ನ 50 ಆಸನಗಳ ಎಂಬ್ರೇರ್ ಇಆರ್‌ಜೆ -145 ವಿಮಾನಗಳನ್ನು ಈ ಮಾರ್ಗಕ್ಕೆ ನಿಯೋಜನೆ ಮಾಡಿದೆ. ಉಡಾನ್ ಯೋಜನೆಯಡಿ ಇಲ್ಲಿಯವರೆಗೆ 369 ಮಾರ್ಗಗಳು ಮತ್ತು 60 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ.

English summary
Under UDAN scheme Star Air will connect Jamnagar and Bengaluru. Direct flight will run 3 days in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X