ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿತ, 3 ಸಾವು

|
Google Oneindia Kannada News

ಬೆಂಗಳೂರು, ಜೂನ್ 17 : ಬೆಂಗಳೂರಿನಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಿದ್ದಿದೆ. ಅವಶೇಷಗಳಡಿ ನಾಲ್ವರು ಸಿಲುಕಿರುವ ಶಂಕೆ ಇದೆ. ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್‌ನಲ್ಲಿ ನಿರ್ಮಾಣ ಹಂತದ ವಾಟರ್ ಟ್ಯಾಂಕ್‌ನ ಸೆಂಟ್ರಿಂಗ್ ಕುಸಿದಿದೆ. ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಇಬ್ಬರ ಸಾವುಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಇಬ್ಬರ ಸಾವು

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ನಾಲ್ಕಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿವೆ. ಅವಶೇಷಗಳಡಿ ಸಿಲುಕಿ ಕೃಷ್ಣ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಉಳಿದವರ ವಿವರ ತಿಳಿದು ಬಂದಿಲ್ಲ.

ತ್ಯಾಗರಾಜನಗರ ಅಪಾರ್ಟ್‌ಮೆಂಟ್ ಕುಸಿತ, ಎಫ್‌ಐಆರ್ ದಾಖಲುತ್ಯಾಗರಾಜನಗರ ಅಪಾರ್ಟ್‌ಮೆಂಟ್ ಕುಸಿತ, ಎಫ್‌ಐಆರ್ ದಾಖಲು

Under construction water tank collapse in Bengaluru

ಬೆಂಗಳೂರು ಜಲಮಂಡಳಿಯ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಕಳೆದ ಆರು ತಿಂಗಳಿನಿಂದ ನಡೆಯುತ್ತಿತ್ತು. ಸುಮಾರು 60 ಜನರು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

Under construction water tank collapse in Bengaluru

ಚಿತ್ರಗಳು : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತಚಿತ್ರಗಳು : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ

110 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸೆಂಟ್ರಿಂಗ್‌ಗೆ ಅಳವಡಿಕೆ ಮಾಡಿದ್ದ ಕಂಬ ಸಡಿಲಗೊಂಡು ಕುಸಿದುಬಿದ್ದಿದೆ.

English summary
Under construction water tank collapsed in Bengaluru Jogappa layout near Lumbini Garden. 4 trapped under debris, fire dept number officials reached the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X