ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಯುವತಿಯನ್ನು ಮದುವೆಯಾಗಿ ನ್ಯಾಯಾಲಯದ ಮೆಟ್ಟಲೇರಿದ್ದ ಉಗಾಂಡ ಭೂಪ!

|
Google Oneindia Kannada News

ಬೆಂಗಳೂರು, ಜುಲೈ 29: ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆಗಳ ವೀಸಾ ಹಾಗೂ ಪಾಸ್ ಪೋರ್ಟ್ ನವೀಕರಿಸಲು ಸಹಕರಿಸಿ ಭಾರತದಲ್ಲಿ ಸುಮಾರು 17 ವರ್ಷಗಳಿಂದ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಉಗಾಂಡ ದೇಶದ ಪ್ರಜೆಯನ್ನು ಗಡಿಪಾರು ಮಾಡಲಾಗಿದೆ‌ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಉಂಗಾಂಡ, ನೈಜಿರಿಯಾ, ಆಫ್ರಿಕಾ ಮೂಲದ ಹಲವಾರು ಜನ ಸ್ಟೂಡೆಂಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ. ಭಾರತದಲ್ಲಿ ವಿದ್ಯಾಭ್ಯಾಸ ಮುಗಿದರೂ ಸ್ವದೇಶಕ್ಕೆ ಹಿಂದಿರುಗದೆ ಇಲ್ಲೇ ನೆಲೆಸಿದ್ದಾರೆ. ಅಂಥವರಲ್ಲಿ ಬೋಸ್ಕೋ ಕಾವೇಸಿ ಎಂಬಾತನನ್ನು ಪತ್ತೆ ಮಾಡಿ ಗಡಿಪಾರು ಮಾಡಲಾಗಿದೆ.

ಬೋಸ್ಕೋ ಕಾವೇಸಿ ಗಡಿಪಾರಾದ ಉಗಾಂಡ ಮೂಲದ ಆರೋಪಿಯಾಗಿದ್ದಾನೆ‌. ಈತನ ವೀಸಾ ಅವಧಿ 2005ರಲ್ಲಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದ. ಭಾರತೀಯ ಯುವತಿಯನ್ನು ಮದುವೆಯಾಗಿದ್ದ. ದೇಶದಲ್ಲಿ ನೆಲೆಸಲು ಅವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಈತನ ಅರ್ಜಿಯನ್ನ 2022ರಲ್ಲಿ ಅರ್ಜಿ ತಿರಸ್ಕರಿಸಿತ್ತು. ಈ ಸಂಬಂಧ ವಿದೇಶಿ ನೋಂದಣಿ‌ ಕೇಂದ್ರ(ಎಫ್ಐಆರ್‌ಓ) ಕೇಂದ್ರ ಗೃಹ ಸಚಿವಾಲಯಕ್ಕೆ‌ ನೀಡಿದ ಮಾಹಿತಿ ಮೇರೆಗೆ ದೆಹಲಿ ಇಮಿಗ್ರೇಷನ್‌ ಅಧಿಕಾರಿಗಳು ಜುಲೈ19ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಬಾಣಸವಾಡಿ ಪೊಲೀಸರ ಸಹಾಯದಿಂದ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲಿಸಿದಾಗ 26 ವಿದೇಶಿಯರ ಪಾಸ್ ಪೋರ್ಟ್ ಗಳನ್ನ ಜಪ್ತಿ ಮಾಡಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಮಾಹಿತಿಯನ್ನು ನೀಡಿದ್ದಾರೆ.

 ಭಾರತದದ ಯುವತಿಯನ್ನು ಮದುವೆಯಾಗಿದ್ದ ಉಗಾಂಡ ನಿವಾಸಿ

ಭಾರತದದ ಯುವತಿಯನ್ನು ಮದುವೆಯಾಗಿದ್ದ ಉಗಾಂಡ ನಿವಾಸಿ

ಬೋಸ್ಕೋ ಕಾವೇಸಿ 1995ರಲ್ಲಿ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬೋಸ್ಕೋ ಕಾವೇಸಿ ಬಂದಿದ್ದ. ಈತನ ವೀಸಾ ಅವಧಿ 2005ರಲ್ಲಿ ಮುಗಿದಿತ್ತು‌ 2006 ರಲ್ಲಿ ಅನಧಿಕೃತ ವಾಸ ಹಿನ್ನೆಲೆಯಲ್ಲಿ ಆರು ತಿಂಗಳ ಸಜೆಯಾಗಿತ್ತು. ದೇಶ ಬಿಟ್ಟು ಹೋಗುವಂತೆ ನೋಟಿಸ್ ಜಾರಿ ಮಾಡಿದ್ದರೂ‌ ಅಕ್ರಮವಾಗಿ ಇಲ್ಲೇ‌ ಉಳಿದುಕೊಂಡಿದ್ದ. ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ. ಭಾರತೀಯ ಯುವತಿ‌ಯನ್ನು ಮದುವೆಯಾಗಿದ್ದು ದೇಶದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದ. ವಿಚಾರಣೆ ನಡೆಸಿದ್ದ ಕೋರ್ಟ್ 2022 ರಲ್ಲಿ ಈತನ ಅರ್ಜಿ ತಿರಸ್ಕೃತಗೊಳಿಸಿತ್ತು ಎಂದು‌ ಪೊಲೀಸರು ತಿಳಿಸಿದ್ದಾರೆ. ಇನ್ನು ಬೋಸ್ಕೋ ಕಾವೇಸಿ ಭಾರತದ ಯುವತಿಯನ್ನು ಮದುವೆಯಾಗಿದ್ದ ಎಂದು ತಿಳಿದು ಬಂದಿದೆ.

 ಮಾನವ ಕಳ್ಳಸಾಗಣೆಯ ಆರೋಪ

ಮಾನವ ಕಳ್ಳಸಾಗಣೆಯ ಆರೋಪ

ವೈಯಕ್ತಿಕ ಲಾಭಕ್ಕಾಗಿ ವಿದೇಶಿಯರಿಗೆ ಅನುಕೂಲ‌ ಮಾಡಿಕೊಡುವುದಾಗಿ ನಟಿಸಿ ಅನಗತ್ಯವಾಗಿ ಅವರಿಂದ ಹಣ ಪಡೆಯುತ್ತಿದ್ದ. ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ನಕಲಿ ದಾಖಲಾತಿ ನೀಡುತ್ತಿದ್ದ‌. ಮಾನವ ಕಳ್ಳಸಾಗಣೆ, ಬಲವಂತವಾಗಿ ಹಣ‌ ಪಡೆಯುವುದು, ವಂಚನೆ ಸೇರಿದಂತೆ ಕಾನೂನುಬಾಹಿರವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಎಂದು‌ ಪೊಲೀಸರು ಮಾಹಿತಿ ನೀಡಿದ್ದಾರೆ.

 ವಿದೇಶಿಯ ಪಾಸ್ ಪೋರ್ಟ್ ಜೆರಾಕ್ಸ್ ಪ್ರತಿ ಪತ್ತೆ

ವಿದೇಶಿಯ ಪಾಸ್ ಪೋರ್ಟ್ ಜೆರಾಕ್ಸ್ ಪ್ರತಿ ಪತ್ತೆ

ಬಾಸ್ಕೋ ಕಾವೇಸಿಯಿಂದ ಡಿಎಲ್, ಡೆಲ್ ಕಂಪನಿಯ ಲ್ಯಾಪ್ ಟಾಪ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್ ಪಾಸ್ ಬುಕ್, ಕಂಪ್ಯೂಟರ್ ಸೆಟ್, ಪ್ರಿಂಟರ್ , ವಿದೇಶಿ ವ್ಯಕ್ತಿಗಳ ಪಾಸ್ ಪೋರ್ಟ್ ಮತ್ತು ವೀಸಾ ಜೆರಾಕ್ಸ್ ಪ್ರತಿಗಳು ಸಹ ಬಾಸ್ಕೋ ಮನೆಯಲ್ಲಿ ಪತ್ತೆಯಾಗಿದೆ. ಈತ ಅಕ್ರಮ ಎಸಗುವ ಉದ್ದೇಶದಿಂದ ಇದನ್ನೆಲ್ಲಾ ಸಂಗ್ರಹಿಸಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

 ವಿದೇಶಿಯರಿಗೆ ಬಾಡಿಗೆ ನೀಡುವ ಮುನ್ನ ಎಚ್ಚರ

ವಿದೇಶಿಯರಿಗೆ ಬಾಡಿಗೆ ನೀಡುವ ಮುನ್ನ ಎಚ್ಚರ

ವಿದೇಶಿ ಕಾಯಿದೆ ಕಲಂ 14ರ ಪ್ರಕಾರ ಕಡ್ಡಾಯವಾಗಿ ಯಾವುದೇ ಒಬ್ಬ ವಿದೇಶಿಗೆ ತಮ್ಮ ಮನೆಯನ್ನು ಬಾಡಿಗೆ ನೀಡುವ ಸಮಯದಲ್ಲಿ ಯಾವ ಕ್ರಮವನ್ನು ವಹಿಸಿಬೇಕೆಂದು ತಿಳಿದುಕೊಳ್ಳಬೇಕು.

* ಒಬ್ಬ ವಿದೇಶಿ ಪ್ರಜೆಗೆ ಮನೆ ಬಾಡಿಗೆ ನೀಡುವ ಸಮಯದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು.

*ವಿದೇಶಿ ಪ್ರಜೆಯ ಪಾಸ್ ಪೋರ್ಟ್ ಮತ್ತು ವೀಸಾ ದಾಖಲೆಯನ್ನು ಪಡೆದು ತಮ್ಮ ಬಳಿಯಲ್ಲಿಟ್ಟುಕೊಳ್ಳುವುದು.

*ಈ ನಿಯಮ ಪಾಲನ ಮಾಡದಿದ್ದರೆ ಮನೆಯ ಮಾಲೀಕರ ವಿರುದ್ದ ಪ್ರಕರಣ ದಾಖಲು

ಈ ನಿಯಮವನ್ನು ಪಾಲನೆ ಮಾಡದೇ ವಿದೇಶಿಗರಿಗೆ ಬಾಡಿಗೆ ಆಸೆಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಮನೆ ಮಾಲೀಕರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಸೂಚಿಸಿದ್ದಾರೆ.

Recommended Video

ಫಾಜಿಲ್ ಹತ್ಯೆ ನಂತರ ಮಂಗಳೂರಿನಲ್ಲಿ ಹೈ ಅಲರ್ಟ್ !! | OneIndia Kannada

English summary
Uganda National exiled for Illegally overstaying in India from 17 years and helping Foreigners with duplicate passport, visa says Bengaluru City police commissioner Pratap Reddy, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X