ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಸ್ಟರಿ ಟಿವಿ18ಯಲ್ಲಿ ಕರ್ನಾಟಕದ ಅದ್ಭುತ ಪ್ರತಿಭೆ ಅನಾವರಣ

|
Google Oneindia Kannada News

ಭಾರತ, ಏಪ್ರಿಲ್ 2021: ಹಿಸ್ಟರಿ ಟಿವಿ18ನ ಅತ್ಯಂತ ಯಶಸ್ವಿ ವಾಸ್ತವಾಧಾರಿತ ಮನರಂಜನೆ ಸರಣಿ ಒಎಂಜಿ! ಯೆ ಮೇರಾ ಇಂಡಿಯಾ' ಏಳನೇ ಸೀಸನ್‌ ಅನ್ನು ಹೊತ್ತು ತಂದಿದ್ದು, ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ ದೇಶಾದ್ಯಂತ ಜನರನ್ನು "OMG!" ಎನ್ನುವಂತೆ ಮಾಡುತ್ತಿದೆ.

ಭಾರತದ ಉದ್ದಗಲದ ವಿವಿಧ ರೀತಿಯ ಪ್ರತಿಭೆ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳನ್ನು ಶೋ ಪರಿಚಯಿಸುತ್ತದೆ. HistoryTV18 ನಲ್ಲಿ ಈ ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಸಿರೀಸ್‌ನ ಮುಂದಿ ಎಪಿಸೋಡ್‌ನಲ್ಲಿ ಕರ್ನಾಟಕದ ಇಬ್ಬರು ಅದ್ಭುತ ವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ. ದೇಹವನ್ನು ಅದ್ಭುತವಾಗಿ ತಿರುಗಿಸುವ 11 ವರ್ಷದ ಬಾಲಕಿಯ ಪರಿಚಯ ಮತ್ತು ಭಾರತದ ಮೊದಲ ಸಂಗೀತ ಮ್ಯೂಸಿಯಂನ ಪರಿಚಯ ಇದರಲ್ಲಿ ಇರಲಿದೆ.

ಕರ್ನಾಟಕದ ಉಡುಪಿಯಲ್ಲಿ ವಾಸಿಸುತ್ತಿರುವ 11 ವರ್ಷದ ತನುಶ್ರೀ ಪಿತ್ರೋಡಿ ದಾಖಲೆಗಳ ಸರದಾರಿಣಿ. ಈ ಭರತನಾಟ್ಯ ಕಲಾವಿದೆ ಭಾರತದಾದ್ಯಂತ 400 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿದ್ದಾಳೆ. ಈಕೆ ಯೋಗ ಪರಿಣಿತಳೂ ಆಗಿದ್ದಾಳೆ. ಅಷ್ಟೇ ಅಲ್ಲ, ಕಾಲುಗಳನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ದೇಹವನ್ನು 44 ಬಾರಿ ತಿರುಗಿಸುತ್ತಾ ಸಾಗುವ ಇವಳ ಸಾಧನೆಗೆ ವಿಶ್ವ ದಾಖಲೆಯೂ ಆಗಿದೆ.

Udupi’s 11-year-old‘human spinning wheel’ featured on HistoryTV18’s ‘OMG! Yeh Mera India’

ಕೇವಲ ಒಂದು ನಿಮಿಷದಲ್ಲಿ 62 ಬಾರಿ ಉರುಳಿ ಕೂಡಾ ಆಕೆ ಸಾಧನೆ ಮಾಡಿದ್ದಾರೆ. ಈಕೆಯ ದೇಹ ಹೇಗೆ ಬಾಗುತ್ತದೆ ಎಂಬುದನ್ನು ಸೋಮವಾರ ರಾತ್ರಿ 8 ಗಂಟೆಗೆ ಎಪಿಸೋಡ್ ವೀಕ್ಷಿಸಿ. ಈಕೆ 19 ನಿರಾಲಂಬ ಪೂರ್ಣ ಚಕ್ರಾಸನವನ್ನೂ ಎಪಿಸೋಡ್‌ನಲ್ಲಿ ಕಣ್ತುಂಬಿಕೊಳ್ಳಬಹುದು.

ಭಾರತದ ಮೊದಲ ಸಂಗೀತ ಮ್ಯೂಸಿಯಮ್ :
ಈ ಸಂವಾದಾತ್ಮಕ ಮ್ಯೂಸಿಮ್‌ನಲ್ಲಿ ಅದ್ಭುತ ಸಂಗ್ರಹಗಳಿವೆ. ಈಗ ಅಸ್ತಿತ್ವದಲ್ಲಿಲ್ಲದ ಕೆಲವು ಸಂಗೀತ ಉಪಕರಣಗಳೂ ಇಲ್ಲಿವೆ. ಪಂಡಿತ ರವಿಶಂಕರ್ ಅವರ ಸಿತಾರ್‌, ಬಿಸ್ಮಿಲ್ಲಾ ಖಾನರ ಶೆಹನಾಯಿ ಹಾಗೂ ಎಂಎಸ್‌ ಸುಬ್ಬಲಕ್ಷ್ಮಿಯವರ ತಂಬೂರಿ ಸೇರಿದಂತೆ ದೇಶದ ಘಟಾನುಘಟಿ ಸಂಗೀತಗಾರರು ತಮ್ಮ ಸ್ಮರಣಾರ್ಥ ಅಪೂರ್ವ ಉಪಕರಣಗಳನ್ನು ಇದಕ್ಕೆ ದಾನ ಮಾಡಿದ್ದಾರೆ.

Recommended Video

#Covid19Update : ದೇಶದಲ್ಲಿ 24 ಗಂಟೆಯಲ್ಲಿ 3,32,730 ಜನರಿಗೆ ಸೋಂಕು..! | Oneindia Kannada

ಇದರಲ್ಲಿ ಟಚ್‌ ಸ್ಕ್ರೀನ್ ಹಾಗೂ ಸಂಗೀತ ಪ್ರದರ್ಶನವೂ ಇದೆ. ಸಂಗೀತದ ಧ್ವನಿಯನ್ನು ಹೊರಡಿಸಲು ಭೌತವಿಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬ ಮೂಲಭೂತ ಅಂಶಗಳನ್ನು ತಿಳಿಯುತ್ತಲೇ ತಾವೇ ಸಂಗೀತ ನುಡಿಸಲೂ ಸಂದರ್ಶಕರಿಗೆ ಇಲ್ಲಿ ಅವಕಾಶವಿದೆ. ಇವೆಲ್ಲವನ್ನೂ ಹಾಗೂ ಇನ್ನೂ ಇತರೆಯನ್ನು ಹಿಸ್ಟರಿ ಟಿವಿ18 ನಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ವೀಕ್ಷಿಸಿ.

English summary
Udupi’s 11-year-old‘human spinning wheel’ featured on HistoryTV18’s ‘OMG! Yeh Mera India’ & India’s first music museum in Bengaluru featured on HistoryTV18’s ‘OMG! Yeh Mera India’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X