ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸಂಕಲ್ಪ, ಭವ್ಯ ಪುರಪ್ರವೇಶ

|
Google Oneindia Kannada News

ಬೆಂಗಳೂರು, ಆಗಸ್ಟ್ 8: ಪೇಜಾವರ ಶ್ರೀಗಳ ಉಡುಪಿ ಶ್ರೀಕೃಷ್ಣಮಠದ ಪಂಚಮ ಪರ್ಯಾಯ ಪೂಜಾ ಕೈಂಕರ್ಯಕ್ಕೆ ಪೂರ್ವಭಾವಿ ಚಾತುರ್ಮಾಸ್ಯ ಸಂಕಲ್ಪ ಮತ್ತು ಪುರಪ್ರವೇಶ ಶನಿವಾರ ಸಂಜೆ (ಆ 8) ಅದ್ದೂರಿಯಾಗಿ ನಡೆದಿದೆ.

ಬಸವನಗುಡಿಯ ನವಬೃಂದಾವನ ರಾಯರ ಮಠದಿಂದ ಆರಂಭವಾಗಿ ಕತ್ರಿಗುಪ್ಪೆ ರಸ್ತೆಯಲ್ಲಿರುವ ವಿದ್ಯಾಪೀಠದ ವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪೇಜಾವರ ಮಠದ ಹಿರಿಯ ಯತಿಗಳಾದ ವಿಶ್ವೇಶತೀರ್ಥ ಶ್ರೀಗಳ 78ನೇ ಮತ್ತು ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರ 27ನೇ ಚಾತುರ್ಮಾಸ ಸಂಕಲ್ಪ ಶನಿವಾರದಿಂದ 45 ದಿನಗಳ ಕಾಲ ನಗರದ ವಿದ್ಯಾಪೀಠದಲ್ಲಿ ಆರಂಭವಾಗಲಿದೆ.

Udupi Pejawar Mutt Seer Chaturmasa started in Bengaluru from Aug 8

ಈ ಸಂಬಂಧ ನಡೆದ ಪುರಪ್ರವೇಶ ಮೆರವಣಿಗೆಗೆ ವಿವಿಧ ಟ್ಯಾಬ್ಲೋಗಳು, ಚೆಂಡೆ, ಯಕ್ಷಗಾನ ಮುಂತಾದವು ವಿಶೇಷ ಮೆರುಗು ನೀಡಿದವು. ಹಿರಿಯ ಮತ್ತು ಕಿರಿಯ ಶ್ರೀಗಳು ಕೇರಳ ವಿನ್ಯಾಸದ ರಥದಲ್ಲಿ ಕೂತು ಮೆರವಣಿಗೆಯಲ್ಲಿ ಸಾಗಿ ಬಂದರು.

ಇದಾದ ನಂತರ ನಡೆದ ಅಭಿವಂದನೆ ಸಮಾರಂಭದಲ್ಲಿ ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಂ ಎನ್ ವೆಂಕಟಾಚಲಯ್ಯ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದ ಪಿ ಸಿ ಮೋಹನ್, ಶಾಸಕರಾದ ರವಿ ಸುಬ್ರಮಣ್ಯ, ಶರವಣ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಬೃಹತ್ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ವೇದಿಕೆಗೆ ಆಗಮಿಸಿ, ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಾದ ಪಡೆದು ಹಾಗೇ ನಿರ್ಗಮಿಸಿದರು.

ದೇಶದ ಸದ್ಯದ ಪರಿಸ್ಥಿತಿಗೆ ಯತಿಗಳ ಮಾರ್ಗದರ್ಶನ ಅತ್ಯಗತ್ಯ. ಧರ್ಮ ಸಂಸ್ಥಾಪನೆಗೆಂದೇ ಭಗವಂತ ಶ್ರೀಕೃಷ್ಣ ಅವತಾರವೆತ್ತಿದ್ದು. ಮಠಾಧೀಶರ ಮತ್ತು ಹಿರಿಯರ ಮಾರ್ಗದರ್ಶನದಿಂದ ದೇಶ ಸುಭಿಕ್ಷವಾಗಲಿ ಎಂದು ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರು.

ಪೇಜಾವರ ಶ್ರೀಗಳು ದೇವತಾ ಮನುಷ್ಯರು, ಪಾದರಸದಂತಿನ ಅವರ ವ್ಯಕ್ತಿತ್ವ ಇತರರಿಗೆ ಮಾದರಿ. ಸಮಾದಲ್ಲಿನ ಎಲ್ಲಾ ಅನಿಷ್ಠಗಳ ವಿರುದ್ದ ಶ್ರೀಗಳು ಹೋರಾಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಅಭಿವಂದನೆ ಸಮಾರಂಭದಲ್ಲಿ ಅಪಾರ ಭಕ್ತಸ್ತೋಮಕ್ಕೆ ಆಶೀರ್ವಚನ ನೀಡುತ್ತಾ ಪೇಜಾವರ ಅಧೋಕ್ಷಜ ಮಠದ ಪೇಜಾವರ ಹಿರಿಯ ಶ್ರೀಗಳು, ಈಗ ನಾವೆಲ್ಲಾ ಕಾಣುತ್ತಿರುವ ಎಲ್ಲಾ ಭ್ರಷ್ಟಾಚಾರಕ್ಕೆ ಶ್ರೀಕೃಷ್ಣ ಗೀತೆಯಲ್ಲಿ ಸಂದೇಶ ನೀಡಿದ್ದಾನೆ.

ಜವಾದ ಕಾಯಕವೇ ನಿಜವಾದ ಧ್ಯಾನ, ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಆರತಿ ಎತ್ತಿದರೆ ಅದು ಪೂಜೆಯಾಗದು ಎಂದು ಶ್ರೀಗಳು ನುಡಿದರು.

English summary
Udupi Pejawar Mutt Vishwesh Theertha Seer and Vishwapriya Teertha Seer Chaturmasa started in Bengaluru from Aug 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X