ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಥಮ ಮಹಿಳಾ ಊಬರ್ ಡ್ರೈವರ್ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು

By Prasad
|
Google Oneindia Kannada News

ಬೆಂಗಳೂರು, ಜೂನ್ 28 : ಭಾರತದ ಮೊಟ್ಟಮೊದಲ ಊಬರ್ ಟ್ಯಾಕ್ಸಿ ಮಹಿಳಾ ಡ್ರೈವರ್ ಎಂದು ಖ್ಯಾತಿ ಪಡೆದಿದ್ದ ಭಾರತಿ ವೀರತ್ (39) ಅವರು ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿರುವ ಮನೆಯಲ್ಲಿ ಸೋಮವಾರ ಸಂಜೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ತೆಲಂಗಾಣದ ವಾರಂಗಲ್ ಮೂಲದವರಾದ ಭಾರತಿ ವೀರತ್ ಅವರ ದೇಹ ಬಾಡಿಗೆ ಮನೆಯ ಮೂರನೇ ಮಹಡಿಯಲ್ಲಿ ಸಂಜೆ 7 ಗಂಟೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬರುತ್ತಿದೆ.

"ಭಾರತಿ ವೀರತ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಖರ ಕಾರಣ ನೀಡಬಹುದು. ಅವರ ಮನೆಯೊಳಗೆ ಯಾರೂ ಬಲವಂತವಾಗಿ ಪ್ರವೇಶಿಸಿಲ್ಲ ಮತ್ತು ಮನೆಯಲ್ಲಿ ಮರಣಪತ್ರ ಕೂಡ ಸಿಕ್ಕಿಲ್ಲ" ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಟಿಆರ್ ಸುರೇಶ್ ಅವರು ಮಾಧ್ಯಮಗಳಿಗೆ ಮಂಗಳವಾರ ತಿಳಿಸಿದರು.

Uber India's first woman taxi driver found dead in Bengaluru

ಆದರೆ, ಅವರ ದೇಹ ಕುಳಿತ ಸ್ಥಿತಿಯಲ್ಲಿ ಕಂಡುಬಂದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಬಾಗಿಲು ಮುಚ್ಚಿತ್ತಾದರೂ ಒಳಗಿನಿಂದ ಕೊಂಡಿ ಹಾಕಿರಲಿಲ್ಲ. ಡೆತ್ ನೋಟ್ ಕೂಡ ಎಲ್ಲೂ ಸಿಕ್ಕಿಲ್ಲ. ಅಲ್ಲದೆ, ಅವರ ಕಾರು ಕೂಡ ತುಸು ದೂರದಲ್ಲಿ ನಿಲ್ಲಿಸಲಾಗಿತ್ತು. ಪೊಲೀಸರು ಅಸಹಜ ಸಾವಿನ ಕೇಸನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. [ಓಲಾ ಊಬರ್ ವಿರುದ್ಧ ತಿರುಗಿಬಿದ್ದ ಖಾಸಗಿ ವಾಹನ ಚಾಲಕರು]

2013ರಲ್ಲಿ ಮೊದಲ ಬಾರಿಗೆ ಊಬರ್ ಮಹಿಳಾ ಚಾಲಕಿಯಾಗಿ ಕಾರಿನ್ನೇರಿದಾಗ ಭಾರತಿ ವೀರತ್ ಅವರು ಭಾರತದಾದ್ಯಂತ ಸುದ್ದಿಯಾಗಿದ್ದರು. ವೃತ್ತಿಯಿಂದ ದರ್ಜಿಯಾಗಿ ಜೀವನ ಸಾಗಿಸುತ್ತಿದ್ದ ಭಾರತಿ, ಕೆಲಸ ಹುಡುಕುತ್ತ 2005ರಲ್ಲೇ ಅವರು ಬೆಂಗಳೂರಿಗೆ ಬಂದಿದ್ದರು. ಊಬರ್ ಚಾಲಕಿಯಾಗಿ ನೌಕರಿ ಮಾಡುವ ಮೊದಲು ಶಿಂಪಿಯಾಗಿಯೂ ಅವರು ದುಡಿಮೆ ಮಾಡುತ್ತಿದ್ದರು.

ಊಬರ್ ಚಾಲಕಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಭಾರತಿ ವೀರತ್ ಅವರಿಗೆ ಬೆಂಗಳೂರು ಕ್ಯಾಂಟೊನ್ಮೆಂಟ್‌ನ ರೋಟರಿ ಕ್ಲಬ್ ಏಪ್ರಿಲ್ 30, 2015ರಲ್ಲಿ ವೊಕೇಶನಲ್ ಎಕ್ಸೆಲೆನ್ಸ್ ಅವಾರ್ಡ್ ನೀಡಿ ಅವರನ್ನು ಗೌರವಿಸಿತ್ತು.

Uber India's first woman taxi driver found dead in Bengaluru

ಎನ್‌ಜಿಓ ಸಹಾಯದಿಂದ 2007ರಲ್ಲಿ ಕಾರು ಚಾಲನೆಯನ್ನು ಕಲಿತಿದ್ದ ಅವರು, ನಂತರ ಫೋರ್ಡ್ ಫೀಸ್ಟಾ ವಾಹನ ಖರೀದಿಸಿದ್ದರು. 2013ರಲ್ಲಿ ಮೊದಲ ಬಾರಿಗೆ ಏಂಜೆಲ್ ಸಿಟಿ ಕ್ಯಾಬ್ಸ್ ಸಂಸ್ಥೆ ಸೇರಿಕೊಂಡಿದ್ದ ಭಾರತಿ, ಅದೇ ವರ್ಷ ಊಬರ್ ನಲ್ಲಿ ಟ್ಯಾಕ್ಸಿ ಚಾಲಕಿಯಾಗಿ ಉದ್ಯೋಗ ಆರಂಭಿಸಿದ್ದರು. [ವೈಷ್ಣವಿ ಸಾವಿನಿಂದ ಖಿನ್ನರಾಗಿದ್ದ ತಾತ, ಅಜ್ಜಿ ಆತ್ಮಹತ್ಯೆ]

ಇಷ್ಟು ವರ್ಷಗಳ ಸೇವೆಯಲ್ಲಿ ಎಂದೂ ಯಾರಿಂದಲೂ ತೊಂದರೆ ಅನುಭವಿಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಭಾರತಿ ವೀರತ್, ಮಧ್ಯಾಹ್ನ 12ರಿಂದ ಬೆಳಗಿನ ಜಾವ 1 ಗಂಟೆಯವರೆಗೆ ಕಾರು ಚಾಲನೆ ಮಾಡುತ್ತಿದ್ದರು. ಈ ಕ್ಷೇತ್ರಕ್ಕೆ ಮತ್ತಷ್ಟು ಮಹಿಳೆಯರು ಚಾಲಕಿಯಾಗಿ ಸೇರಿಕೊಳ್ಳಬೇಕು ಎಂದು ಇತರ ಮಹಿಳೆಯರನ್ನು ಹುರಿದುಂಬಿಸುತ್ತಿದ್ದರು.

ಪುರುಷಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತಿ ವೀರತ್ ಎಂದೂ ಹಿಂಜರಿದಿದ್ದಿಲ್ಲ. ಬದಲಾಗಿ, ತಮ್ಮ ಶ್ರಮದಿಂದ ಮತ್ತು ಪ್ರಾಮಾಣಿಕತೆಯಿಂದ ಸಾಕಷ್ಟು ಹೆಸರು ಗಳಿಸಿದ್ದರು. ನನ್ನ ಜೀವವಿರುವವರೆಗೆ ಟ್ಯಾಕ್ಸಿ ಚಾಲಕಿಯಾಗಿಯೇ ಕಾರ್ಯ ನಿರ್ವಹಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

English summary
Uber India's first woman taxi driver Veerath Bharathi found dead at her residence in Nagashettihalli in Bengaluru on Monday evening. She was found hanging. No death note is found. She had received Vocational Excellence Award by Rotary Club Bangalore in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X