ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ವಿವಿಯಿಂದ ಇಬ್ಬರು ಕೃಷಿಕರಿಗೆ ಎಚ್‌ಡಿ ದೇವೇಗೌಡ ಹೆಸರಲ್ಲಿ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ನವೆಂಬರ್ 8: ಬೆಂಗಳೂರು ಕೃಷಿ ವಿಶ್ವವಿದ್ಯಾಯವು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೆಸರಲ್ಲಿ ಸಾಧಕ ರೈತರಿಬ್ಬರಿಗೆ ಪ್ರಶಸ್ತಿಯನ್ನು ನೀಡುತ್ತಿದೆ.

ದೀಪಾವಳಿ ವಿಶೇಷ ಪುರವಣಿ

ಈ ಪ್ರಶಸ್ತಿಯ ಮೊತ್ತವನ್ನು ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರವು ಭರಿಸಲಿದ್ದು, ಇದಕ್ಕಾಗಿ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಸಂಸ್ಥೆಯು ವಿವಿ ಕುಲಪತಿಗೆ ಪತ್ರ ಬರೆದು ಪ್ರಶಸ್ತಿ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು ಇದಕ್ಕೆ ಒಪ್ಪಿಗೆ ದೊರೆತಿದ್ದು, 2018-19ನೇ ಸಾಲಿನಿಂದಲೇ ವಾರ್ಷಿಕ ಪ್ರಶಸ್ತಿ ರೂಪದಲ್ಲಿ ವಿತರಿಸಲು ಮುದ್ರೆ ದೊರೆತಿದೆ. ಈಗಿರುವ ದಿವಂಗತ ಸಿ ಬೈರೇಗೌಡ ಸ್ಮಾರಕ ಪ್ರಶಸ್ತಿಯ ಮಾನದಂಡಗಳನ್ನೇ ಹೊಸ ಪ್ರಶಸ್ತಿಗೂ ಅನ್ವಯಿಸಲಾಗುತ್ತದೆ.

ದೇಶದಲ್ಲಿ ಮಹಾಘಟಬಂಧನ್: ದೇವೇಗೌಡ-ನಾಯ್ಡು ಭೇಟಿ ಇಂದು ದೇಶದಲ್ಲಿ ಮಹಾಘಟಬಂಧನ್: ದೇವೇಗೌಡ-ನಾಯ್ಡು ಭೇಟಿ ಇಂದು

UAS to confer best farmer award in the name of H.D. Devegowda

ಉಪ ಚುನಾವಣೆ ಮುಗೀತು, ಸಂಪುಟ ವಿಸ್ತರಣೆಗೆ ವಿಳಂಬವಿಲ್ಲ: ದೇವೇಗೌಡ ಉಪ ಚುನಾವಣೆ ಮುಗೀತು, ಸಂಪುಟ ವಿಸ್ತರಣೆಗೆ ವಿಳಂಬವಿಲ್ಲ: ದೇವೇಗೌಡ

ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಒಬ್ಬ ರೈತ ಹಾಗೂ ಒಬ್ಬ ರೈತ ಮಹಿಳೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತಲಾ 25 ಸಾವಿರ ನಗದು ಮೊತ್ತದ ರಾಜ್ಯ ಮಟ್ಟದ ಪ್ರಶಸ್ತಿಯು ವಾರ್ಷಿಕ ಕೃಷಿ ಮೇಳದಲ್ಲಿ ನೀಡಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುಎಎಸ್-ಬಿ ಕುಲಪತಿ ಡಾ ಎಸ್ ರಾಜೇಂದ್ರಪ್ರಸಾದ್ 2018-19ನೇ ಸಾಲಿನಿಂದ ರಂಗಚೇತನ ಸಂಸ್ಕೃತಿ ಕೇಂದ್ರದ ಸಹಯೋಗದಲ್ಲಿ ಪ್ರಶಸ್ತಿ ವಿತರಣೆಗೆ ಚಾಲನೆ ಸಿಗಲಿದೆ ನವೆಂಬರ್ 15ರಿಂದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಕೃಷಿ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

English summary
University of Agricultural Sciences has decided to confer a best farmer award in the name of former prime minister H.D.Devegowda during Krishi mela which will resume from November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X