ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬರಲಿವೆ ಆಫ್ರಿಕಾದಿಂದ ಎರಡು ಬಿಳಿ ಸಿಂಹಗಳು

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಮೇ 30: ಸದ್ಯದಲ್ಲೇ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಳಿ ಸಿಂಹದ ಆಗಮನ ಆಗುತ್ತಿದೆ. ಒಂದು ಜೋಡಿ ಸಿಂಹಗಳು ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟಕ್ಕೆ ಕರೆತರಲು ಎಲ್ಲ ಸಿದ್ಧತೆ ಮುಗಿದಿದ್ದು, ಈ ಸಂಬಂಧ ಪ್ರಕ್ರಿಯೆಯಗಳು ಪೂರ್ಣಗೊಂಡಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಬಿಜೂರು ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ್ದಾರೆ.

ಸಿಂಹಗಳ ಸಾಗಾಟದ ಅಂತಿಮ ಹಂತದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೊಂದು ತಿಂಗಳಲ್ಲಿ ನಮ್ಮ ಝೂನಲ್ಲಿ ಸಿಂಹವನ್ನು ನೋಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಜೈವಿಕ ವ್ಯತ್ಯಾಸದ ಕಾರಣಕ್ಕೆ ಸಾಮಾನ್ಯವಾದ ಸಿಂಹದ ಬಣ್ಣವೇ ಬಿಳಿಯಾಗಿ ಬದಲಾಗುತ್ತದೆ. ಇವು ಬಹುತೇಕ ದಕ್ಷಿಣ ಆಫ್ರಿಕಾದ ಸಿಂಹಗಳು. ಇಡೀ ವಿಶ್ವದಲ್ಲಿ ಬಿಳಿ ಸಿಂಹಗಳ ಸಂಖ್ಯೆ ಐನೂರಕ್ಕಿಂತ ಸ್ವಲ್ಪ ಹೆಚ್ಚಿದೆ.

ಇದು ಸಿಂಹಗಳ ಜಗತ್ತು, ಎಷ್ಟೊಂದು ಇಂಟರೆಸ್ಟಿಂಗ್ ವಿಚಾರಗಳು!ಇದು ಸಿಂಹಗಳ ಜಗತ್ತು, ಎಷ್ಟೊಂದು ಇಂಟರೆಸ್ಟಿಂಗ್ ವಿಚಾರಗಳು!

ಇನ್ನು ಭಾರತದ ನೀಲ್ ಗಾಯ್ ಅನ್ನೇ ಹೋಲುವ ಆಫ್ರಿಕಾದ ಐದು ಇಲಾಂಡ್ ಗಳನ್ನು ಬನ್ನೇರುಘಟ್ಟಕ್ಕೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅದಕ್ಕಾಗಿ ಇನ್ನೂ ಕೆಲ ಕಾಲ ಕಾಯಬೇಕಾಗುತ್ತದೆ. "ಸದ್ಯಕ್ಕೆ ಆ ಭಾಗದಲ್ಲಿ ಕಾಲುಬಾಯಿ ರೋಗ ಇರುವುದರಿಂದ ಇಲಾಂಡ್ ಸಾಗಾಟವನ್ನು ತಡೆದಿದ್ದೇವೆ. ಆ ಪ್ರಾಣಿಗಳು ಸುರಕ್ಷಿತ ಎಂದು ಖಾತ್ರಿ ಆದ ಮೇಲೆ ತರುತ್ತೇವೆ" ಎಂದು ಬನ್ನೇರುಘಟ್ಟದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Two white lions will arrive to Bannerghatta biological park soon

ದಕ್ಷಿಣ ಆಫ್ರಿಕಾದಿಂದ ಎರಡು ಜಿರಾಫೆಯನ್ನು ಬನ್ನೇರುಘಟ್ಟಕ್ಕೆ ತರಲು ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ಬನ್ನೇರುಘಟ್ಟದಲ್ಲಿ ನಾಲ್ಕು ವರ್ಷ ಪ್ರಾಯದ, ಹದಿಮೂರು ಅಡಿ ಎತ್ತರದ ಒಂದೇ ಒಂದು ಜಿರಾಫೆ ಇದೆ. ಅದನ್ನು ಕಳೆದ ವರ್ಷ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು.

English summary
Two white lions will arrive to Bannerghatta biological park soon. Lion will bring from South Africa, final process in progress. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X