ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ರಸ್ತೆಯಲ್ಲಿ ಎರಡೂ ಕಡೆ ಟೋಲ್ ಪಾವತಿಸಬೇಕು

|
Google Oneindia Kannada News

ಬೆಂಗಳೂರು, ಮಾರ್ಚ್ 27 : ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಡೆಸುವವರು ಇನ್ನು ಮುಂದೆ ಎರಡೂ ಕಡೆ ಟೋಲ್ ಶುಲ್ಕ ಕಟ್ಟಬೇಕು. ಇಷ್ಟು ದಿನ ವಿಮಾನ ನಿಲ್ದಾಣದಿಂದ ಬರುವಾಗ ಮಾತ್ರ ಶುಲ್ಕ ಪಾವತಿ ಮಾಡಬೇಕಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವಯುಗ ಸಂಸ್ಥೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ, ಬರುವ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹ ಮಾಡಲು ಮುಂದಾಗಿದೆ. ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಸಾಗುವಾಗ ಟೋಲ್ ಶುಲ್ಕ ಪಾವತಿ ಮಾಡಬೇಕಿರಲಿಲ್ಲ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಬಂತು ಫಾಸ್ಟ್ ಟ್ಯಾಗ್ ವ್ಯವಸ್ಥೆಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಬಂತು ಫಾಸ್ಟ್ ಟ್ಯಾಗ್ ವ್ಯವಸ್ಥೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗಗಳನ್ನು ನಿರ್ಮಿಸಿದ ಬಳಿಕ ನಷ್ಟವಾಗುತ್ತಿದೆ ಎಂದು ನವಯುಗ ಸಂಸ್ಥೆ ಹೇಳಿದೆ. ಆದ್ದರಿಂದ, ಎರಡೂ ಕಡೆ ಟೋಲ್ ಸಂಗ್ರಹಕ್ಕೆ ಮುಂದಾಗಿದೆ.

Two way toll in Kempegowda International Airport road

ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗಗಳನ್ನು ಈಗ ನಿರ್ಮಿಸಲಾಗಿದೆ. ನಾಗವಾರ-ಬಾಗಲೂರು ಕಡೆಯಿಂದ ಸಾಗುವ ರಸ್ತೆಯನ್ನು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು.

ನೈಸ್ ರಸ್ತೆ ಟೋಲ್ ದರ ಏರಿಕೆ, ಎಲ್ಲೆಲ್ಲಿ? ಎಷ್ಟೆಷ್ಟು?ನೈಸ್ ರಸ್ತೆ ಟೋಲ್ ದರ ಏರಿಕೆ, ಎಲ್ಲೆಲ್ಲಿ? ಎಷ್ಟೆಷ್ಟು?

ಪರ್ಯಾಯ ರಸ್ತೆ ನಿರ್ಮಾಣವಾದ ಬಳಿಕ ಸುಮಾರು 15 ಸಾವಿರ ವಾಹನಗಳು ಆ ರಸ್ತೆ ಮೂಲಕ ಸಂಚಾರ ನಡೆಸುತ್ತಿವೆ. ನಿತ್ಯ ಬಳ್ಳಾರಿ ರಸ್ತೆಯಲ್ಲಿ 30 ಲಕ್ಷ ಟೋಲ್ ಶುಲ್ಕ ಸಂಗ್ರಹವಾಗುತ್ತಿತ್ತು. ಆದರೆ, ಈಗ ಅದು ಶೇ 55ರಷ್ಟು ಕಡಿಮೆಯಾಗಿದೆ.

ಆದರೆ, ಟ್ಯಾಕ್ಸಿ ಚಾಲಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರನ್ನು ಕರೆತರಲು ಖಾಲಿ ಟ್ಯಾಕ್ಸಿ ತೆಗೆದುಕೊಂಡು ಹೋಗುವಾಗ ಟೋಲ್ ಶುಲ್ಕ ಏಕೆ ಕಟ್ಟಬೇಕು? ಎಂದು ಪ್ರಶ್ನಿಸಿದ್ದಾರೆ.

English summary
Soon motorists heading to the Kempegowda International Airport (KIA) via Ballari road have to pay two side toll. Currently, motorists to pay toll when they travel airport to the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X