ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಬ್ಬರು ಕೇಂದ್ರ, ಒಬ್ಬರು ರಾಜ್ಯ ಸಚಿವರಿಂದ ಪೇಜಾವರ ಶ್ರೀಗಳ ಭೇಟಿ

|
Google Oneindia Kannada News

ಬೆಂಗಳೂರು, ಸೆ 6: ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ ವ್ರತದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರನ್ನು, ಗಣ್ಯರು, ರಾಜಕೀಯ ಮುಖಂಡರು ಮತ್ತು ಮತ್ತು ಸಚಿವರುಗಳು ಸಾಲುಸಾಲಾಗಿ ಭೇಟಿಯಾಗುತ್ತಿದ್ದಾರೆ.

ಭಾನುವಾರದಂದು (ಸೆ 5) ಇಬ್ಬರು ಕೇಂದ್ರ ಸಚಿವರುಗಳು ಮತ್ತು ರಾಜ್ಯ ಸಚಿವೆ, ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ಶ್ರೀಪಾದ ನಾಯಕ ಮತ್ತು ರಾಜ್ಯ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರು ಶ್ರೀಗಳನ್ನು ಭೇಟಿಯಾಗಿದ್ದರು.

ಕರ್ಫ್ಯೂ ತೆಗೆಯಿರಿ ಎಂದವನಿಗೆ ದಕ್ಷಿಣ ಕನ್ನಡ ಡಿಸಿ ಕೊಟ್ಟ ಉತ್ತರವೇನು? ಆಡಿಯೋ ವೈರಲ್ಕರ್ಫ್ಯೂ ತೆಗೆಯಿರಿ ಎಂದವನಿಗೆ ದಕ್ಷಿಣ ಕನ್ನಡ ಡಿಸಿ ಕೊಟ್ಟ ಉತ್ತರವೇನು? ಆಡಿಯೋ ವೈರಲ್

ಕೇಂದ್ರ ಸರ್ಕಾರದ ರಸಗೊಬ್ಬರ ರಾಸಾಯನಿಕ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಮಂತ್ರಿ ಭಗವಂತ ಖೂಬಾ ಶ್ರೀಗಳನ್ನು ಭೇಟಿಯಾಗಿ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು . ಈ ಸಂದರ್ಭದಲ್ಲಿ ಇಲಾಖೆಯಲ್ಲಿ ನವೀಕರಿಸಬಹುದಾದ ಯೋಜನೆಗಳ ಬಗ್ಗೆ ಸಚಿವರ ಜೊತೆ ಶ್ರೀಗಳು ಸಮಾಲೋಚನೆ ನಡೆಸಿದರು.

 NEP ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ! NEP ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ!

ಗೋವಿನ ಸೆಗಣಿಯಿಂದ ವಿದ್ಯುತ್ ತಯಾರಿಸುವ ಬಗ್ಗೆ ಮಾತಾಡಿದ ಶ್ರೀಗಳು, "ದೇಶದಲ್ಲಿ ದೊಡ್ಡ ದೊಡ್ಡ ಗೋಶಾಲೆಗಳಲ್ಲಿ ಗೋಮಯದ ಹೇರಳ ಲಭ್ಯತೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ಸರ್ಕಾರ ವ್ಯವಸ್ಥೆ ಮಾಡಿದರೆ ಉತ್ತಮ" ಎಂದು ಹೇಳಿದರು.

 ಸೋಲಾರ್ ಪಾರ್ಕ್ ನಿರ್ಮಿಸುವ ಘೋಷಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀಗಳು

ಸೋಲಾರ್ ಪಾರ್ಕ್ ನಿರ್ಮಿಸುವ ಘೋಷಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀಗಳು

ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಚಿವರು ಸವಿಸ್ತಾರವಾಗಿ ಶ್ರೀಗಳಿಗೆ ವಿವರಿಸಿದರು . ಖೂಬಾರವರು ಇತ್ತೀಚೆಗೆ ಬೀದರ್, ಕೊಪ್ಪಳ ಮತ್ತು ಬಾಗಲಕೋಟೆಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಘೋಷಣೆ ಮಾಡಿದ ವಿಚಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀಗಳು ಸೂರ್ಯಶಕ್ತಿ ಎಲ್ಲಾ ರೀತಿಯಿಂದಲೂ ಭವಿಷ್ಯಕ್ಕೆ ಅತ್ಯಂತ ಭರವಸೆಯ ಇಂಧನವಾಗಿದೆ . ಈ ಮೂರು ಜಿಲ್ಲೆಗಳ ಜೊತೆಗೆ ರಾಜ್ಯದ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಕಡೆ ಸೋಲಾರ್ ಪಾರ್ಕ್ ನಿರ್ಮಿಸಬೇಕೆಂದು ಅಪೇಕ್ಷಿಸಿ ಲಿಖಿತ ಪತ್ರವನ್ನು ಸಚಿವರಿಗೆ ನೀಡಿದರು .‌

 ಮಂತ್ರಿಗಳನ್ನು ವಿದ್ಯಾಪೀಠದ ಪ್ರಮುಖರ ಸಹಿತ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು

ಮಂತ್ರಿಗಳನ್ನು ವಿದ್ಯಾಪೀಠದ ಪ್ರಮುಖರ ಸಹಿತ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು

ಈ ಕುರಿತು ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರದ ಜೊತೆ ಸಮಾಲೋಚಿಸಿ ತೀರ್ಮಾನಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ಶ್ರೀಗಳಿಗೆ ಭರವಸೆ ನೀಡಿದರು. ಖೂಬಾರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಮಂತ್ರಿಗಳನ್ನು ವಿದ್ಯಾಪೀಠದ ಪ್ರಮುಖರ ಸಹಿತ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀ ಕೃಷ್ಣ ದರ್ಶನಗೈದು ದೇವರ ಪ್ರಸಾದ ಮತ್ತು ಬಳಿಕ ಬೆಳಗ್ಗಿನ ಉಪಾಹಾರವನ್ನೂ ಕೇಂದ್ರ ಸಚಿವ ಭಗವಂತ ಖೂಬಾ ಅಲ್ಲೇ ಸ್ವೀಕರಿಸಿದರು .

 ಕೇಂದ್ರ ಸರ್ಕಾರದ ನೌಕಾಯಾನ ಮತ್ತು ಪ್ರವಾಸೋದ್ಯಮ ಖಾತೆ ಮಂತ್ರಿ ಶ್ರೀಪಾದ ನಾಯಕ್

ಕೇಂದ್ರ ಸರ್ಕಾರದ ನೌಕಾಯಾನ ಮತ್ತು ಪ್ರವಾಸೋದ್ಯಮ ಖಾತೆ ಮಂತ್ರಿ ಶ್ರೀಪಾದ ನಾಯಕ್

ಕೇಂದ್ರ ಸರ್ಕಾರದ ನೌಕಾಯಾನ ಮತ್ತು ಪ್ರವಾಸೋದ್ಯಮ ಖಾತೆ ಮಂತ್ರಿ ಶ್ರೀಪಾದ ನಾಯಕ್ ಕೂಡಾ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಭಕ್ತರೂ ಆಗಿರುವ ಸಚಿವರು ಗುರುಗಳ ವೃಂದಾವನ ಮತ್ತು ಶ್ರೀ ಕೃಷ್ಣ ಸನ್ನಿಧಿಯ ದರ್ಶನ ಪಡೆದರು . ಈ ಸಂದರ್ಭದಲ್ಲಿ ನಡೆಯುತ್ತಿದ್ದ ವರ್ಚುವಲ್ ಸಭೆಯಲ್ಲೂ ಭಾಗವಹಿಸಿ "ಶ್ರೀವಿಶ್ವೇಶತೀರ್ಥ ಶ್ರೀಗಳು ಮಹಾನ್ ತಪಸ್ವೀ ಶಕ್ತಿಗಳು, ಅವರ ಸಂಕಲ್ಪ ಸದಿಚ್ಛೆ ಸತ್ಕಾಯಗಳ ಫಲ ಬಹಳ ವರ್ಷಗಳ ಕಾಲ ಈ ದೇಶಕ್ಕೆ ಲಭಿಸಿದೆ . ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಕರ್ತವ್ಯ ನಮ್ಮೆಲ್ಲರದು" ಎಂದು ಸಚಿವರು ಹೇಳಿದರು.

Recommended Video

Dhawan ಅವರಿಗೆ Divorce ನೀಡಿದ Aesha Mukerji | Oneindia Kannada
 ಪೇಜಾವರ ಶ್ರೀಗಳನ್ನು ಭೇಟಿಯಾದ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ

ಪೇಜಾವರ ಶ್ರೀಗಳನ್ನು ಭೇಟಿಯಾದ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ

ಪೇಜಾವರ ಶ್ರೀಗಳನ್ನು ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡುತ್ತಾ, "ಮುಜರಾಯಿ ಇಲಾಖೆ ನಾಡಿನ ಕೋಟ್ಯಾಂತರ ಜನರ ಶ್ರದ್ಧೆ ಸದಾಚಾರಗಳಿಗೆ ಸಂಬಂಧಿಸಿರುವ ಇಲಾಖೆಯಾಗಿರುವುದರಿಂದ ಶತಶತಮಾನಗಳಿಂದ ಈ ನೆಲದಲ್ಲಿ ಆ ಸಂಸ್ಕಾರ ಸಂಸ್ಕೃತಿಯ ಕೇಂದ್ರಗಳೆನಿಸಿದ ನಾಡಿನ ನೂರಾರು ಮಠಾಧೀಶರುಗಳ ಮಾರ್ಗದರ್ಶನ ಪಡೆದು ಕರ್ತವ್ಯ ನಡೆಸುವೆ" ಎಂದು ಹೇಳಿದ್ದಾರೆ. ಶ್ರೀಗಳನ್ನು ಭೇಟಿಯಾಗಿ ಗುರುವಂದನೆ ಸಲ್ಲಿಸಿ ಬಳಿಕ ನಡೆದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು . "ಶ್ರೀಗಳು ನಡೆಸುತ್ತಿರುವ ಜ್ಞಾನ ಕಾರ್ಯ ಮತ್ತು ಗೋ ಸೇವಾ ಚಟುವಟಿಕೆಗಳಿಗೆ ಸಹಕಾರ ನೀಡಲಾಗುವುದು" ಎಂದು ಸಚಿವೆ ಜೊಲ್ಲೆ ಹೇಳಿದ್ದಾರೆ.

English summary
Union MInister Bhagwanth Khuba and Karnataka Ministers Shripad Naik and Shashikala Jolle Meets Pejawar Mutt Seer. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X