ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಗೆ ಸ್ನಾತಕೋತ್ತರ ಕೋರ್ಸ್‌ಗೆ ತೃತೀಯ ಲಿಂಗಿಗಳ ಅರ್ಜಿ

|
Google Oneindia Kannada News

ಬೆಂಗಳೂರು, ಆಗಸ್ಟ್ 29 : ಬೆಂಗಳೂರು ವಿಶ್ವವಿದ್ಯಾಲಯಿಂದ ಸ್ನಾತಕೋತ್ತರ ಪದವಿ ಪಡೆಯಲು ಇಬ್ಬರು ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಿದ್ದಾರೆ. 2010ರಲ್ಲಿ ವಿಶ್ವವಿದ್ಯಾಲಯ ತೃತೀಯ ಲಿಂಗಿಗಳಿಗೂ ಸೀಟು ಮೀಸಲಾಗಿಡುವ ತೀರ್ಮಾನವನ್ನು ಕೈಗೊಂಡಿತ್ತು.

2019-20ನೇ ಶೈಕ್ಷಣಿಕ ವರ್ಷದಲ್ಲಿ ಹಲವಾರು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ವಿಶ್ವವಿದ್ಯಾಲಯ ಅರ್ಜಿ ಆಹ್ವಾನಿಸಿದೆ. ಇಬ್ಬರು ತೃತೀಯ ಲಿಂಗಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ನಿಗದಿತವಾದ ದಾಖಲೆಗಳನ್ನು ಸಲ್ಲಿಕೆ ಮಾಡಿಲ್ಲ.

ಶೀಘ್ರದಲ್ಲೇ ತಲೆಎತ್ತಲಿದೆ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್ಶೀಘ್ರದಲ್ಲೇ ತಲೆಎತ್ತಲಿದೆ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್

ಅರ್ಜಿಗಳನ್ನು ತಿರಸ್ಕಾರ ಮಾಡದಿರಲು ವಿಶ್ವವಿದ್ಯಾಲಯ ತೀರ್ಮಾನಿಸಿದೆ. ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗುವ ತನಕ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ಆದ್ದರಿಂದ, ಕಾದು ನೋಡುವ ತೀರ್ಮಾನಕ್ಕೆ ವಿವಿ ಬಂದಿದೆ.

ಬೆಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ ಕುರಿತು ಸುಳ್ಳು ಪ್ರಕಟಣೆಬೆಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ ಕುರಿತು ಸುಳ್ಳು ಪ್ರಕಟಣೆ

Two Transgender Application For Bangalore University For PG Course

ಬೆಂಗಳೂರು ವಿವಿ ರಿಜಿಸ್ಟ್ರಾರ್ ಬಿ. ಕೆ. ರವಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ತೃತೀಯ ಲಿಂಗಿಗಳಿಗೆ ಸೀಟು ಮೀಸಲಿಟ್ಟ ಬಳಿಕ ಮೊದಲ ಬಾರಿಗೆ ಅರ್ಜಿಗಳು ಬಂದಿವೆ. ನಾವು ಕೆಲವು ದಿನ ಕಾದು ನೋಡುತ್ತೇವೆ. ಸಂಬಂಧಿಸಿದ ವಿಭಾಗಗಳಿಗೆ ಅವರನ್ನು ಕೌನ್ಸಿಲಿಂಗ್‌ಗಾಗಿ ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.

ಬೆಂಗಳೂರು ವಿವಿ ಇಬ್ಬಾಗ: ಯಾವ್ಯಾವ ಅಸೆಂಬ್ಲಿ ಯಾವ ವಿವಿ ವ್ಯಾಪ್ತಿಗೆಬೆಂಗಳೂರು ವಿವಿ ಇಬ್ಬಾಗ: ಯಾವ್ಯಾವ ಅಸೆಂಬ್ಲಿ ಯಾವ ವಿವಿ ವ್ಯಾಪ್ತಿಗೆ

ಡಾ. ಎನ್. ಪ್ರಭುದೇವ ಬೆಂಗಳೂರು ವಿವಿ ಕುಲಪತಿಯಾಗಿದ್ದಾಗ 2010ರಲ್ಲಿ ತೃತೀಯ ಲಿಂಗಿಗಳಿಗೆ ಎಲ್ಲಾ ವಿಭಾಗದಲ್ಲಿಯೂ ಒಂದು ಸೀಟು ಮೀಸಲಾಗಿಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. 9 ವರ್ಷಗಳ ಬಳಿಕ 2 ಅರ್ಜಿಗಳು ಬಂದಿವೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 60 ವಿವಿಧ ಕೋರ್ಸ್‌ಗಳಿದ್ದು, ಸುಮಾರು 4000 ಸೀಟುಗಳಿವೆ. ಎನ್‌ಸಿಸಿ, ಎನ್‌ಎಸ್‌ಎಸ್‌, ಅಂಗವಿಕಲ, ಸಾಂಸ್ಕೃತಿಕ, ರಕ್ಷಣೆ, ಕಾಶ್ಮೀರಿ ವಲಸೆ, ವಿದೇಶಿ ವಿದ್ಯಾರ್ಥಿ ಸೇರಿ ಪ್ರತಿ ವಿಭಾಗದಲ್ಲಿ 12 ಸೀಟುಗಳನ್ನು ವಿವಿ ಮೀಸಲಾಗಿಟ್ಟಿದೆ.

English summary
Bangalore University get 2 applications under the transgender quota. University announced transgender quota in the year 2010. Its 1st application after introduction of the reservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X