ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂರ್ಯ ಕಿರಣ್ ವಿಮಾನಗಳ ಡಿಕ್ಕಿ, ಪೈಲೆಟ್ ಸಾವು

|
Google Oneindia Kannada News

Recommended Video

ಸೂರ್ಯ ಕಿರಣ್ ವಿಮಾನಗಳ ನಡುವೆ ಡಿಕ್ಕಿ, ಒಬ್ಬ ಸಾವು?

ಬೆಂಗಳೂರು, ಫೆಬ್ರವರಿ 19 : ಏರೋ ಇಂಡಿಯಾ ವೈಮಾನಿನ ಪ್ರದರ್ಶನ 2019ರ ತರಬೇತಿ ವೇಳೆ ಎರಡು ಸೂರ್ಯ ಕಿರಣ್ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ.

ಮಂಗಳವಾರ ಯಲಹಂಕ ವಾಯುನೆಲೆ ಬಳಿಯ ಗಂಟಿಗಾನಹಳ್ಳಿ ಬಳಿ ಈ ಘಟನೆ ನಡೆದಿದೆ. ಮೃತಪಟ್ಟ ಸಹ ಪೈಲೆಟ್ ಅನ್ನು ವಿಂಗ್ ಕಮಾಂಡ್ ಸಾಹಿಲ್ ಗಾಂಧಿ ಎಂದು ಗುರುತಿಸಲಾಗಿದೆ. ತರಬೇತಿ ವೇಳೆ ವಿಮಾನಗಳು ಡಿಕ್ಕಿಯಾಗಿದ್ದು, ಪೈಲೆಟ್‌ಗಳು ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಜಿಗಿದ್ದಾರೆ, ಒಬ್ಬ ಪೈಲೆಟ್ ಗಾಯಗೊಂಡಿದ್ದಾರೆ.

ಬೆಂಗಳೂರು ಏರ್ ಶೋ : ಎರಡು ವಿಮಾನಗಳ ನಡುವೆ ಡಿಕ್ಕಿಬೆಂಗಳೂರು ಏರ್ ಶೋ : ಎರಡು ವಿಮಾನಗಳ ನಡುವೆ ಡಿಕ್ಕಿ

Aero Show rehearsal

ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ಯಲಹಂಕ ವಾಯುನೆಲೆಯಲ್ಲಿ ಫೆ.20ರ ಬುಧವಾರದಿಂದ ಏರ್ ಶೋ 2019 ಆರಂಭವಾಗಲಿದೆ. ಆದ್ದರಿಂದ, ತರಬೇತಿ ನಡೆಸಲಾಗುತ್ತಿತ್ತು. ಡಿಕ್ಕಿಯಾದ ಬಳಿಕ ವಿಮಾನ ಶೆಡ್‌ವೊಂದರ ಮೇಲೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?

ಸೂರ್ಯ ಕಿರಣ್ ವಿಮಾನಗಳನ್ನು ಎಚ್‌ಎಎಲ್ ನಿರ್ಮಾಣ ಮಾಡಿದೆ. ಶ್ರೀಲಂಕಾ, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಲ್ಲಿ 450ಕ್ಕೂ ಹೆಚ್ಚು ಪ್ರದರ್ಶನಗಳನ್ನು ಸೂರ್ಯ ಕಿರಣ್ ತಂಡ ನೀಡಿದೆ. 2011ರಲ್ಲಿ ಬೆಂಗಳೂರು ಏರ್‌ ಶೋನಲ್ಲಿ ಕೊನೆಯ ಪ್ರದರ್ಶನ ನಡೆಸಿದ್ದವು.

2006ರಲ್ಲಿ ಬೀದರ್‌ನಲ್ಲಿ ಹಾರಾಟ ನಡೆಸುವ ವೇಳೆ ಸೂರ್ಯ ಕಿರಣ್ ವಿಮಾನ ಪತನಗೊಂಡಿತ್ತು. ಆ ದುರ್ಘಟನೆಯಲ್ಲಿ ಇಬ್ಬರು ವಾಯುಪಡೆಯ ಅಧಿಕಾರಿಗಳು ಸಾವನ್ನಪ್ಪಿದ್ದರು.

English summary
Two aircraft of Surya Kiran Aerobatics Team crash at Yelahanka airbase in Bengaluru during rehearsal for Aero India 2019 on February 19, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X