• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮಿತ್ ಶಾಗೆ ದೊಡ್ಡ ತಲೆನೋವಾದ ಬೆಂಗಳೂರು ಬಿಜೆಪಿಯ ನಾನಾ ನೀನಾ ಮೇಲಾಟ?

|
   Lok Sabha Elections 2019 : ಅಮಿತ್ ಶಾಗೆ ದೊಡ್ಡ ತಲೆನೋವಾದ ಬೆಂಗಳೂರು ಬಿಜೆಪಿಯ ನಾನಾ ನೀನಾ ಮೇಲಾಟ?

   ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಉತ್ತರ, ದಕ್ಷಿಣ ಮತ್ತು ಸೆಂಟ್ರಲ್ ಲೋಕಸಭಾ ಕ್ಷೇತ್ರಗಳನ್ನು 2014ರ ಲೋಕಸಭಾ ಚುನಾವಣೆಯಲ್ಲಿ ನಿರಾಯಾಸವಾಗಿ ಬಿಜೆಪಿ ಗೆದ್ದಿತ್ತು. ಈ ಬಾರಿಯ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು, ಬಿಜೆಪಿ ಹರಸಾಹಸ ಪಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಹೌದು.

   ರಾಜ್ಯ ಬಿಜೆಪಿ ಘಟಕದ ವರ್ಚಸ್ವೀ ನಾಯಕರಾಗಿದ್ದ ಅನಂತ್ ಕುಮಾರ್ ವಿಧಿವಶರಾದ ನಂತರ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಅನಂತ್ ಪತ್ನಿ ತೇಜಸ್ವಿನಿಯವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ, ಪಕ್ಷದಲ್ಲಿ ಗೊಂದಲವಿದೆಯೇ? ಕೆಲವೊಂದು ಮೂಲಗಳ ಪ್ರಕಾರ ಹೌದು.

   20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ

   ಇದರ ಜೊತೆಗೆ, ಬೆಂಗಳೂರು ನಗರದ ಪಕ್ಷದ ಚಟುವಟಿಕೆಗಳ ಮೇಲೆ, ಯಾರು ಹಿಡಿತ ಸಾಧಿಸಬೇಕು ಎನ್ನುವ ವಿಚಾರದಲ್ಲಿ, ಇಬ್ಬರು ಪ್ರಮುಖ ಮುಖಂಡರೊಳಗೆ ಶೀತಲ ಸಮರ ನಡೆಯುತ್ತಿದೆಯಾ ಎನ್ನುವ ಪ್ರಶ್ನೆಯೂ ಕಾರ್ಯಕರ್ತರಲ್ಲಿ ಮೂಡಲಾರಂಭಿಸಿದೆ.

   ಕರ್ನಾಟಕ ಬಿಜೆಪಿ ಆಂತರಿಕ ಸಮೀಕ್ಷೆ: ಬೆಚ್ಚಿಬಿದ್ದ ಅಮಿತ್ ಶಾ!

   ಬೆಂಗಳೂರು ನಗರದಲ್ಲಿನ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಬಗ್ಗೆ, ಜಯನಗರ ಉಪಚುನಾವಣೆಯಲ್ಲಿ ಸೋತಾಗ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದಲ್ಲಿ ನಾನಾ ನೀನಾ ಎನ್ನುವ ಮೇಲಾಟ ತೀವ್ರಗೊಳ್ಳುತ್ತಿರುವ ಈ ವೇಳೆ, ಆರ್ ಎಸ್ ಎಸ್ ಮುಖಂಡರು, ಪಕ್ಷದ ಮುಖಂಡರನ್ನು ಕರೆಸಿ, ಬುದ್ದಿಹೇಳಿ ಕಳುಹಿಸಿದ್ದರು ಎನ್ನುವ ಮಾಹಿತಿಯಿದೆ. ಪಕ್ಷದ ಇಬ್ಬರು ಪ್ರಮುಖಂಡರ ನಡುವೆ, ಪಾಲಿಟಿಕ್ಸ್, ಮುಂದೆ ಓದಿ

   ತೇಜಸ್ವಿನಿ ಅನಂತ್ ಕುಮಾರ್ ಮತ್ತು ಸದಾನಂದ ಗೌಡ

   ತೇಜಸ್ವಿನಿ ಅನಂತ್ ಕುಮಾರ್ ಮತ್ತು ಸದಾನಂದ ಗೌಡ

   ತೇಜಸ್ವಿನಿ ಅನಂತ್ ಕುಮಾರ್ ಮತ್ತು ಸದಾನಂದ ಗೌಡ ಅವರನ್ನು ಕ್ರಮವಾಗಿ ದಕ್ಷಿಣ ಮತ್ತು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸುವುದಕ್ಕೆ ಆರ್ ಅಶೋಕ್ ಸೇರಿ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ಕೆಲವೊಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬೆಳವಣಿಗೆ ಆದ ಮೇಲೆಯೇ, ನಿರ್ಮಲಾ ಸೀತಾರಾಮನ್ ಅವರ ಹೆಸರು (ಬೆಂಗಳೂರು ದಕ್ಷಿಣ) ಅಭ್ಯರ್ಥಿಯಾಗಿ ಬರಲಾರಂಭಿಸಿದ್ದು.

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

   ನೂರು ಕ್ಷೇತ್ರವನ್ನು ಗೆದ್ದರೂ ಅಧಿಕಾರಕ್ಕೆ ಏರಲಾರದ ರಾಜಕೀಯ ವಿದ್ಯಮಾನ

   ನೂರು ಕ್ಷೇತ್ರವನ್ನು ಗೆದ್ದರೂ ಅಧಿಕಾರಕ್ಕೆ ಏರಲಾರದ ರಾಜಕೀಯ ವಿದ್ಯಮಾನ

   ಬಿಬಿಎಂಪಿ ಚುನಾವಣೆಯಲ್ಲಿ ನೂರು ಕ್ಷೇತ್ರವನ್ನು ಗೆದ್ದರೂ ಅಧಿಕಾರಕ್ಕೆ ಏರಲಾರದ ರಾಜಕೀಯ ವಿದ್ಯಮಾನದ ನಂತರ ಬೆಂಗಳೂರು ನಗರದ ಕಾರ್ಯಕರ್ತರ ವಲಯದಲ್ಲಿ 'ಸಾಮ್ರಾಟ್' ಎಂದು ಕರೆಯಲ್ಪಡುತ್ತಿದ್ದ ಅಶೋಕ್ ಅವರ ಪ್ರಾಭಲ್ಯ ಕಮ್ಮಿಯಾಗಲಾರಂಭಿಸಿತು. ಇದಾದ ನಂತರ, ಬೆಂಗಳೂರಿನಲ್ಲಿ ನಡೆದ ಅಮಿತ್ ಶಾ ಉದ್ಘಾಟನಾ ರ‍್ಯಾಲಿಯಲ್ಲಿ ಜನ ಸೇರಿಸಲು ವಿಫಲರಾದ ನಂತರ, ಅಶೋಕ್ ಸ್ವಲ್ಪ ಮಟ್ಟಿಗೆ ಪಕ್ಷದಲ್ಲಿ ಮೂಲೆಗುಂಪಾದರು. ಈ ಸಮಯದಲ್ಲಿ ಪಕ್ಷದ ಇನ್ನೋರ್ವ ಪ್ರಮುಖ ಮುಖಂಡ ಅರವಿಂದ ಲಿಂಬಾವಳಿ ಕ್ರಿಯಾಶೀಲರಾದರು.

   ಬೆಂಗಳೂರು ಗ್ರಾಮಾಂತರದಲ್ಲಿ ಆರ್.ಅಶೋಕ್ v/s ಡಿಕೆ ಸುರೇಶ್?

   ಪಕ್ಷದ ಆಂತರಿಕ ಸಾಮಾಜಿಕ ತಾಣಗಳ ಗ್ರೂಪ್ ಮೂಲಕ ತಮ್ಮ ವಿರುದ್ದ ಅಪಪ್ರಚಾರ

   ಪಕ್ಷದ ಆಂತರಿಕ ಸಾಮಾಜಿಕ ತಾಣಗಳ ಗ್ರೂಪ್ ಮೂಲಕ ತಮ್ಮ ವಿರುದ್ದ ಅಪಪ್ರಚಾರ

   ಸದಾನಂದ ಗೌಡ ಮತ್ತು ತೇಜಸ್ವಿನಿಯವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದಲ್ಲಿ ಎರಡು ಗುಂಪಾಗಿದೆ ಎನ್ನುವ ಮಾಹಿತಿಯಿದೆ. ಅರವಿಂದ್ ಲಿಂಬಾವಳಿ ಪಕ್ಷದ ಆಂತರಿಕ ಸಾಮಾಜಿಕ ತಾಣಗಳ ಗ್ರೂಪ್ ಮೂಲಕ ತಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವ ನೋವನ್ನು ಅಶೋಕ್ ಇತ್ತೀಚೆಗೆ ತೋಡಿಕೊಂಡಿದ್ದರಂತೆ. ಉದ್ದೇಶಪೂರ್ವಕವಾಗಿಯೇ, ನಂದನ್ ನೀಲೇಕಣಿ ಮತ್ತು ಮೋಹನ್ ದಾಸ್ ಪೈ ಅವರ ಹೆಸರನ್ನು (ಬೆಂಗಳೂರು ದಕ್ಷಿಣ) ತೇಲಿಬಿಟ್ಟಿದ್ದಾರೆ ಎನ್ನುವುದು ಅಶೋಕ್ ವಿರುದ್ದ ಕೇಳಿಬರುತ್ತಿರುವ ಆರೋಪ.

   ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಕೃಷ್ಣ ಸ್ಪರ್ಧಿಸುವುದು ಖಚಿತ

   ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಕೃಷ್ಣ ಸ್ಪರ್ಧಿಸುವುದು ಖಚಿತ

   ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ನಿಂದ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಕೃಷ್ಣ ಸ್ಪರ್ಧಿಸುವುದು ಖಚಿತ. ಮಗನಿಗೆ ಟಿಕೆಟ್ ಕೊಟ್ಟರೆ, ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ತಂದೆ ಮತ್ತು ವಿಜಯನಗರ ಶಾಸಕರೂ ಆಗಿರುವ ಎಂ ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷರಿಗೆ ಮಾತುಕೊಟ್ಟಿದ್ದಾರಂತೆ. ಬೆಂಗಳೂರು ದಕ್ಷಿಣದ ವ್ಯಾಪ್ತಿಯ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಐದರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಐದರಲ್ಲಿ ಕಾಂಗ್ರೆಸ್, ಎರಡರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಬಿಜೆಪಿ ಶಾಸಕರಿದ್ದಾರೆ.

   ಬೆಂಗಳೂರಿನ ಇಬ್ಬರು ಪ್ರಮುಖ ಮುಖಂಡರ ವೈಮನಸ್ಸು, ಪಕ್ಷಕ್ಕೆ ತಲೆನೋವು

   ಬೆಂಗಳೂರಿನ ಇಬ್ಬರು ಪ್ರಮುಖ ಮುಖಂಡರ ವೈಮನಸ್ಸು, ಪಕ್ಷಕ್ಕೆ ತಲೆನೋವು

   ಕಳೆದ ಚುನಾವಣೆಯಲ್ಲಿ ಅನಂತ್ ಕುಮಾರ್ 228,575 ಮತ್ತು ಸದಾನಂದ ಗೌಡ 229,764 ಮತಗಳ ಭಾರೀ ಅಂತರದಿಂದ ಜಯಸಾಧಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬಿಜೆಪಿಗೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ, ಅಮಿತ್ ಶಾ ಅಳೆದು ತೂಗಿ, ಅಭ್ಯರ್ಥಿಯನ್ನು ಆಯ್ಕೆಮಾಡಲು ನಿರ್ಧರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಇಬ್ಬರು ಪ್ರಮುಖ ಮುಖಂಡರ ವೈಮನಸ್ಸು, ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ.

   English summary
   Two senior leaders differences becocming big headache for BJP National President Amit Shah. As per media report, for picking candidates for Bengaluru Urban LS seats, party leader R Ashok and Aravind Limbavali understanding is not going in right way.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X