ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೆರೆಡು 6 ಬೋಗಿ ಮೆಟ್ರೋ

|
Google Oneindia Kannada News

ಬೆಂಗಳೂರು,ಡಿಸೆಂಬರ್ 23: ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೆರೆಡು ಆರು ಬೋಗಿಯ ರೈಲು ಸೇರ್ಪಡೆಯಾಗಲಿದೆ.

ಈಗಾಗಲೇ ಹಸಿರು ಮಾರ್ಗದಲ್ಲಿ ಆರು ಬೋಗಿಯ ಹತ್ತು ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಮತ್ತೆರೆಡು ರೈಲುಗಳ ಸೇರ್ಪಡೆಯಾಗಿದೆ.

ಹೊಸ ವರ್ಷಾಚರಣೆಯ ಎಣ್ಣೆ ಪ್ರಿಯರಿಗೆ ಮೆಟ್ರೋ ಶಾಕ್..!ಹೊಸ ವರ್ಷಾಚರಣೆಯ ಎಣ್ಣೆ ಪ್ರಿಯರಿಗೆ ಮೆಟ್ರೋ ಶಾಕ್..!

ಆರು ಬೋಗಿಯ ರೈಲುಗಳ ಸಂಖ್ಯೆ 12ಕ್ಕೆ ಏರಿಕೆಯಾಗಲಿದೆ. ಭಾನುವಾರ ಹೊರತುಪಡಿಸಿ ಈ ಆರು ಬೋಗಿಗಳ ರೈಲುಗಳು ಪ್ರತಿದಿನ 88 ಸುತ್ತಿನ ಪ್ರಯಾಣ ಮಾಡಲಿವೆ.

Two More Coach Metro On The Green Route From Today

ಹಸಿರು ಮಾರ್ಗದಲ್ಲಿ ದಿನಕ್ಕೆ 1.30 ರಿಂದ 1.60 ಲಕ್ಷ ಮಂದಿ ಪ್ರಯಣಿಸುತ್ತಾರೆ. ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಎಲ್ಲಾ ಮೆಟ್ರೋ ರೈಲುಗಳನ್ನು ಆರು ಬೋಗಿಗಳ ರೈಲುಗಳಾಗಿ ಪರಿವರ್ತಿಸಲಾಗಿದ್ದು, ಹಸಿರು ಮತ್ತು ನೇರಳೆ ಮಾರ್ಗದಲ್ಲಿ ದಿನನಿತ್ಯ 4ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದಾರೆ.

ಒಟ್ಟು ಆರು ಬೋಗಿಗಳ 12 ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಿದಂತಾಗಿದೆ. 2020ರ ಮಾರ್ಚ್ ವೇಳೆಗೆ ಆರು ಬೋಗಿಗಳ ಎಲ್ಲ 50ರೈಲುಗಳು ಹಸಿರು ಮಾರ್ಗದಲ್ಲಿ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ರೈಲುಗಳಿಂದ ಹಸಿರು ಮಾರ್ಗದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಆರು ಬೋಗಿಯ ರೈಲಿನಲ್ಲಿ ಮೊದಲ ಬೋಗಿ ಮಹಿಳೆ ಯರಿಗೆ ಮೀಸಲಾಗಿದೆ. ಹೀಗಾಗಿ, ಈ ಮಾರ್ಗದಲ್ಲಿ ಮಹಿಳಾ ಮೀಸಲು ಬೋಗಿಗಳ ಸಂಖ್ಯೆ ಹೆಚ್ಚಾಗಿವೆ.

English summary
Two more Namma Metro will be added on the green line from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X