ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಡಿಕಲ್‌ ಸೀಟು ನಂಬಿದವರಿಗೆ 1.34 ಕೋಟಿ ಪಂಗನಾಮ!

|
Google Oneindia Kannada News

ಬೆಂಗಳೂರು, ಸೆ.4: ಪ್ರತಿಷ್ಠಿತ ಕಾಲೇಜುಗಳಲ್ಲಿ ಮೆಡಿಕೆಲ್‌ ಸೀಟು ಕೊಡಿಸುವುದಾಗಿ ನಂಬಿಸಿ ನಾಲ್ವರು ವಿದ್ಯಾರ್ಥಿಗಳಿಗೆ 1.34 ಕೋಟಿ ರೂ. ವಂಚಿಸಿರುವ ಬಗ್ಗೆ ಉಪ್ಪಾರ ಪೇಟೆ ಮತ್ತು ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೆಹಲಿ ಮೂಲದ ಮೂವರು ವಿದ್ಯಾರ್ಥಿಗಳಿಗೆ ಉಪನ್ಯಾಸಕನೊಬ್ಬ 94 ಲಕ್ಷ ರೂ. ವಂಚನೆ ಮಾಡಿದ್ದಾನೆ. ವಿದ್ಯಾರ್ಥಿಗಳ ಮೊಬೈಲ್‌ಗೆ ಕರೆ ಮಾಡಿ ಹಣ ನೀಡಿದರೆ ಮೆಡಿಕಲ್‌ ಸೀಟು ಕೊಡಿಸುವುದಾಗಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪಿದ ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಬೆಂಗಳೂರಿಗೆ ಕರೆಸಿದ್ದಾರೆ.(ಉಡುಪಿ: ಶಾಸಕರಿಗೆ ಟೋಪಿ ಹಾಕಿದ ವಿದ್ಯಾರ್ಥಿ‌ಗಳು!)

bangalore

ಗಾಂಧಿನಗರ ಹೋಟೆಲ್‌ವೊಂದರಲ್ಲಿ ಹಣ ಪಡೆದ ವಂಚಕ ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಾನೆ. ವಂಚಕನ ವಿರುದ್ಧ ದಿನೇಶ್‌ಕುಮಾರ್‌ ಮತ್ತು ರಂಜನ್‌ಕುಮಾರ್‌ ಎಂಬುವರು ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫೇಸ್‌ಬುಕ್‌ ಮೂಲಕ ವಂಚಿಸಿದ ಮಿಶ್ರಾ
ಫೇಸ್‌ಬುಕ್‌ನಲ್ಲಿ ಪರಿಚಯವಾದ ಡಾ.ಮಿಶ್ರಾ ಎಂಬಾತ ಮೆಡಿಕಲ್‌ ಸೀಟು ಕೊಡಿಸುವುದಾಘಗಿ ನಂಬಿಸಿ 40 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ ಎಂದು ರಾಜಸ್ಥಾನ ಮೂಲದ ಬಾಲಕೃಷ್ಣ ತಿಲಕ್‌ ನಗರ ಠಾಣೆಗೆ ದೂರು ದಾಖಲಿಸಿದ್ದಾರೆ.

ನಾನು ಹುಬ್ಬಳ್ಳಿಯ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ಕೇಂದ್ರದ ಉಪನ್ಯಾಸಕ, ನನಗೆ ಆಡಳಿತ ಮಂಡಳಿಯವರು ಚೆನ್ನಾಗಿ ಗೊತ್ತು, 40 ಲಕ್ಷ ರೂ. ನೀಡಿದರೆ ಸೀಟು ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದಿದ್ದ.

ಆಗಸ್ಟ್‌ 30ರಂದು ಜಯನಗರ ಟಿ ಬ್ಲಾಕ್‌ ಬಳಿ ಬರಲು ಹೇಳಿ ಹಣ ಪಡೆದಿದ್ದ. ನಂತರ ಸೆಪ್ಟಂಬರ್‌ 1 ರಂದು ಅದೇ ಜಾಗಕ್ಕೆ ಬರಲು ಹೇಳಿದ್ದ. ಆದರೆ ಅಲ್ಲಿಗೆ ಹೋದಾಗ ಶರ್ಮಾ ನಾಪತ್ತೆಯಾಗಿದ್ದು, ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಆಗಿತ್ತು ಎಂದು ಬಾಲಕೃಷ್ಣ ದೂರಿನಲ್ಲಿ ತಿಳಿಸಿದ್ದಾರೆ.

English summary
Two medical seat aspirants were duped of Rs 1.34 crore in separate incidents in City. The cases have been registered at Upparpet and Tilak Nagar police stations. Dinesh Kumar, a native of Delhi, approached Upparpet Police, on Wednesday, stating he was cheated of Rs 94 lakh by a person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X