ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿರುವ 2 ಲಕ್ಷ ಮ್ಯಾನ್‌ಹೋಲ್‌ಗಳಿಗೆ ಮರುಜೀವ

|
Google Oneindia Kannada News

ಬೆಂಗಳೂರು, ಜನವರಿ 28: ಬೆಂಗಳೂರಿನಲ್ಲಿರುವ ಬಹುತೇಕ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ರಸ್ತೆಯ ಮೇಲೆಲ್ಲಾ ಚರಂಡಿ ನೀರು ಹರಿಯುತ್ತಾ ಗಬ್ಬು ನಾರುತ್ತಿದೆ.

ಹಾಗಾಗಿ ಈ ತೊಂದರೆಯನ್ನು ಬಗೆ ಹರಿಸಲು ಜಲಮಂಡಲಿ ತೀರ್ಮಾನಿಸಿದೆ, ಇದೀಗ 2.04 ಲಕ್ಷ ಮ್ಯಾನ್‌ಹೋಲ್‌ಗಳ ಹೂಳು ತೆಗೆಯುವ ಯೋಜನೆಯನ್ನು ಆರಂಭಿಸಿದೆ. ಕದಿರೇನಹಳ್ಳಿ ಬಳಿ ತಿಂಗಳಿಗೆ ಐದಾರು ಬಾರಿಯಾದರೂ ಅಲ್ಲರುವ ಅಷ್ಟೂ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿತ್ತು. ಈ ಕುರಿತು ಜಲಮಂಡಳಿಗೆ ಸಾಕಷ್ಟು ದೂರು ಲಭ್ಯವಾಗಿತ್ತು.

Two lakh manholes will be cleaned soon

ಸೋಮಸಂದ್ರ ಪಾಳ್ಯ ಮ್ಯಾನ್ ಹೋಲ್ ದುರಂತ: 8 ಮಂದಿ ಬಂಧನ ಸೋಮಸಂದ್ರ ಪಾಳ್ಯ ಮ್ಯಾನ್ ಹೋಲ್ ದುರಂತ: 8 ಮಂದಿ ಬಂಧನ

ಮ್ಯಾನ್‌ಹೋಲ್‌ನಲ್ಲಿ ಪ್ಲಾಸ್ಟಿಕ್ , ಕಾಗದ ಮೊದಲಾದ ಕಸ ತುಂಬಿಕೊಳ್ಳುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಜಲಮಂಡಳಿಯ 31 ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಇಂತಿಷ್ಟು ಮ್ಯಾನ್ ಹೋಲ್ ಹೂಳು ತೆಗೆಯಬೇಕೆಂದು ತೀರ್ಮಾನಿಸಲಾಗಿದೆ.

Two lakh manholes will be cleaned soon

ಮಳೆನೀರುಗಾಲುವೆ ಒಳಚರಂಡಿಯ ಕೊಳಚೆ ನೀರು ಸೇರುತ್ತಿದೆ. ಇದನ್ನು ತಡೆಯುವಂತೆ ಹಳೆ ಒಳಚರಂಡಿ ಪೈಪ್ ಗಳನ್ನು ದುರಸ್ತಿ ಮಾಡಲಾಗುತ್ತದೆ. ಒಟ್ಟು 188 ಕಿ.ಮೀ ಪೈಪ್ ಅಭಿವೃದ್ಧಿ ಮಾಡಲಾಗುತ್ತದೆ.

ಈ ಮೊದಲು ಮ್ಯಾನ್‌ಹೋಲ್‌ಗಳು ನರಕಸದೃಶಯವಾಗಿತ್ತು, ರಸ್ತೆಯ ಮೇಲ್ಭಾಗದಲ್ಲಿರುತ್ತಿತ್ತು ಇದರಿಂದ ಎಷ್ಟೋ ವಾಹನ ಅಪಘಾತಗಳಿಗೆ ಕಾರಣವಾಗುತ್ತಿತ್ತಿ. ಇದೀಗ ರಸ್ತೆಯ ಮಟ್ಟಕ್ಕೆ ಮ್ಯಾನ್‌ಹೋಲ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.

English summary
BWSSB has decided to clean two lakh man holes across the city. In next step even STPS will also take care.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X