ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ದಿನಕ್ಕೆ ಎರಡು ಡಿಗ್ರಿ ಏರಿದ ಬೆಂಗಳೂರು ತಾಪಮಾನ

|
Google Oneindia Kannada News

ಬೆಂಗಳೂರು, ಜನವರಿ 17: ಬೆಂಗಳೂರಿನ ತಾಪಮಾನದಲ್ಲಿ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ಮಂಗಳವಾರ 12.3 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಬುಧವಾರ 14.5 ಡಿಗ್ರಿಗೆ ಏರಿಕೆಯಾಗಿತ್ತು.

ಹವಾಮಾನ ನಿಧಾನವಾರ ಏರುಪೇರಾದರೆ ಯಾವುದೇ ಸಮಸ್ಯೆಯಿಲ್ಲ ಆದರೆ ಪ್ರತಿ ದಿನವೂ ದೊಡ್ಡ ಮಟ್ಟದಲ್ಲಿ ಏರುಪೇರಾದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರುಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರು

ಜನವರಿ ಆರಂಭದಿಂದಲೂ ಈ ರೀತಿ ಪದೇ ಪದೇ ತಾಪಮಾನದಲ್ಲಿ ಏರಿಳಿತ ಕಂಡುಬರುತ್ತಿದೆ. ಜನವರಿ 2ರಂದು ನಗರದ ಕೇಂದ್ರ ಭಾಗದಲ್ಲಿ 12.4 ಡಿಗ್ರಿ ತಾಪಮಾನ ಕಂಡುಬಂದಿತ್ತು. ಬಳಿಕ 15 ಡಿಗ್ರಿಗೆ ತಲುಪಿತ್ತು. ಈಗ 12 ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಕ್ಷಣವೇ 14 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

Two degree temperature increased in a Day

2012ರ ಜನವರಿ 16ರಂದು 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡುಬಂದಿತ್ತು. ಇದಾದ ಬಳಿಕ ಮುಂದಿನ ವರ್ಷಗಳ ಜನವರಿಯಲ್ಲಿ ಈ ಮಟ್ಟಿಗೆ ತಾಪಮಾನ ಇಳಿದಿರಲಿಲ್ಲ.

ಮೈಸೂರಲ್ಲಿ ಇನ್ನೂ 15 ದಿನ ಚಳಿ: ಹೆಚ್ಚುತ್ತಿದೆ ಸಾಂಕ್ರಾಮಿಕ ಕಾಯಿಲೆಮೈಸೂರಲ್ಲಿ ಇನ್ನೂ 15 ದಿನ ಚಳಿ: ಹೆಚ್ಚುತ್ತಿದೆ ಸಾಂಕ್ರಾಮಿಕ ಕಾಯಿಲೆ

ಜನವರಿ ಮುಗಿಯುವವರೆಗೂ ಇದೇ ರೀತಿ ತಾಪಮಾನದಲ್ಲಿ ಏರಿಳಿಕೆ ಕಂಡು ಬರುತ್ತದೆ. ಇನ್ನು ನಾಲ್ಕು ದಿನ 14,15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಮುಂದುವರೆಯಲಿದೆ. ಅಂತಾರಾಷ್ಟ್ರೀ ವಿಮಾನ ನಿಲ್ದಾಣದಲ್ಲಿ 11.3 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

English summary
Bengaluru witnessed two-degree celsius temperature increasing in one day. These changes will continue till end of the Month.ಬೆಂಗಳೂರಿನ ತಾಪಮಾನದಲ್ಲಿ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X