ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಪೊಲೀಸರಿಗಾಗಿ 2 ಕೋವಿಡ್ ಆಸ್ಪತ್ರೆ ಮೀಸಲು

|
Google Oneindia Kannada News

ಬೆಂಗಳೂರು, ಜೂನ್ 24 : ಬೆಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ಹಬ್ಬುತ್ತಿದೆ. ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಎರಡು ಆಸ್ಪತ್ರೆಗಳನ್ನು ಮೀಸಲಾಗಿಟ್ಟಿದೆ.

Recommended Video

ಮೋದಿಯನ್ನು ಹೊಗಳಿದ ಚೀನಾ | China Praising Narendra Modi | Oneindia Kannada

ಬುಧವಾರ ಆರೋಗ್ಯ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಒಂದು ಮಹಡಿ ಮತ್ತು ಇಂದಿರಾನಗರದ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ 19 ಸೋಂಕಿತ ಪೊಲೀಸ್ ಸಿಬ್ಬಂದಿಗಾಗಿ ಮೀಸಲಿಡಲಾಗಿದೆ.

ಕೋವಿಡ್ -19 ಸೋಂಕು; ಪೊಲೀಸರ ಸುರಕ್ಷತೆಗಾಗಿ ಕೈಗೊಂಡ 5 ಕ್ರಮಗಳುಕೋವಿಡ್ -19 ಸೋಂಕು; ಪೊಲೀಸರ ಸುರಕ್ಷತೆಗಾಗಿ ಕೈಗೊಂಡ 5 ಕ್ರಮಗಳು

ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೋಂಕು ಹರಡದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದರು. ಪೊಲೀಸರ ಆರೋಗ್ಯ ಕಾಪಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

ಬೆಂಗಳೂರು; ಸಹಾಯಕನಿಗೆ ಸೋಂಕು, ಎಡಿಜಿಪಿಗೆ ಹೋಂ ಕ್ವಾರಂಟೈನ್ ಬೆಂಗಳೂರು; ಸಹಾಯಕನಿಗೆ ಸೋಂಕು, ಎಡಿಜಿಪಿಗೆ ಹೋಂ ಕ್ವಾರಂಟೈನ್

Two Dedicated COVID19 Hospitals For Police Personal

ಬೆಂಗಳೂರು ನಗರದಲ್ಲಿ ಪೊಲೀಸರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಮೀಸಲಾಗಿ ಇಡಬೇಕು ಎಂದು ಹೇಳಿದ್ದರು. ಈ ಆದೇಶದ ಅನ್ವಯ ಎರಡು ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಈ ಆಸ್ಪತ್ರೆಗಳಲ್ಲಿ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಕೊರೊನಾ ವೈರಸ್‌ಗೆ ಹೆದರಿ ಪೊಲೀಸ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆಕೊರೊನಾ ವೈರಸ್‌ಗೆ ಹೆದರಿ ಪೊಲೀಸ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆ

ಬೆಂಗಳೂರು ನಗರದಲ್ಲಿ 7 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇಬ್ಬರು ಐಪಿಎಸ್ ಅಧಿಕಾರಿಗಳು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇದುವರೆಗೂ 92 ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಸುಮಾರು 870 ಪೊಲೀಸ್ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಗೃಹ ಇಲಾಖೆ ಪೊಲೀಸ್ ಸಿಬ್ಭಂದಿಗಳಲ್ಲಿ ಆತ್ಮವಿಶ್ವಾಸ ತುಂಬಿಸುವ ಕೆಲಸವನ್ನು ಮಾಡುತ್ತಿದೆ.

English summary
Karnataka health department said that one floor in Ravishankar Guruji Ashram and ESI hospital Indiranagar are identified as dedicated COVID19 hospitals for police personal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X