ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣಕ್ಕಾಗಿ ಮಗು ಕೊಂದಿದ್ದ ಸೋದರತ್ತೆ, ಮಾವ ಬಂಧನ

|
Google Oneindia Kannada News

ಬೆಂಗಳೂರು, ಜು. 10 : ಹಣಕ್ಕಾಗಿ ತಂಗಿಯ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದ ಸೋದರ ಮಾವ ಮತ್ತು ಅತ್ತೆಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಬಾಲಕಿಯ ತಂದೆ ದುಬೈನಲ್ಲಿದ್ದರು, ಅವರಿಂದ ಹಣ ದೋಚುವ ಸಲುವಾಗಿ ಈ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಕೊಲೆ ಆರೋಪಿಗಳ ಬಂಧನದ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಹಣಕ್ಕಾಗಿ ಪತ್ನಿ ಜತೆ ಸೇರಿ ತಂಗಿ ಮಗಳನ್ನು ಅಪಹರಿಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಭಾರತೀನಗರ ತಿಮ್ಮಯ್ಯ ರಸ್ತೆ ನಿವಾಸಿಯಾದ ಸಲ್ಮಾನ್ (28) ಮತ್ತು ಈತನ ಪತ್ನಿ ಶಬರೀನ್ (20) ಅವರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ ಎಂದರು.

raghavendra auradkar

ಸೋದರ ಮಾವನಿಂದಲೇ ಕೊಲೆಯಾದ ಮಗು ಧನರಾಜ್ ಫೂಲ್‌ಚಂದ್ ಹಿಂದಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ರತಿಬಾನಿಸಾರ್ (7) ಎಂದು ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ. ಬಾಲಕಿಯ ತಂದೆ ದುಬೈನಲ್ಲಿ ವ್ಯಾಪಾರಿಯಾಗಿದ್ದು, ಅವರ ಬಳಿಯಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಸಲ್ಮಾನ್ ತಂಗಿಯ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಮತ್ತು ಪತ್ನಿ ಸಂಚು : ಅಕ್ವೇರಿಯಂಗೆ ಮೀನು, ಮೀನಿನ ಆಹಾರ ಸರಬರಾಜು ಮಾಡುವ ವ್ಯಾಪಾರ ಮಾಡುತ್ತಿದ್ದ ಸಲ್ಮಾನ್ ಹಾಗೂ ಆತನ ಪತ್ನಿ ಮಗುವಿನ ಅಪಹರಣ ಸಂಚು ರೂಪಿಸಿದ್ದರು. ಅದರಂತೆ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಬೂರ್ಖಾ ಧರಿಸಿ ಶಾಲೆಗೆ ತೆರಳಿದ ಶಬರೀನ್ ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದಾಳೆ. ಮಗುವಿನ ಚಿಕ್ಕಮ್ಮ ಬಂದಿದ್ದರಿಂದ ಮಗುವನ್ನು ಶಾಲೆಯವರು ಕಳುಹಿಸಿ ಕೊಟ್ಟಿದ್ದಾರೆ.

ನಂತರ ಮಗುವನ್ನು ಅಪಹರಿಸಿದ ದಂಪತಿಗಳು ಮಗುವಿನ ಮನೆಗೆ ಕರೆ ಮಾಡಿ 10 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಗುವನ್ನು ಕರೆದುಕೊಂಡು ಹೋದವರ ವಿವರ ಪಡೆದ ತಾಯಿ ಅಶೋಕನಗರ ಠಾಣೆಗೆ ದೂರು ನೀಡಿದ್ದರು. ಒಂದು ದಿನದಲ್ಲಿ ಪ್ರಕರಣದವನ್ನು ಬಯಲುಗೊಳಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. [ತಾಯಿ ಕೊಲೆಗಾರನನ್ನು ಪೊಲೀಸರಿಗೆ ಹಿಡಿದುಕೊಟ್ಟ ಮಗ]

ನಾಟಕವಾಡಿ ಸಿಕ್ಕಿಬಿದ್ದ : ಅಶೋಕ ನಗರ ಠಾಣೆಗೆ ಬಂದ ಮಗುವನ್ನು ಅಪಹರಿಸಿದ್ದ ಸಲ್ಮಾನ್ ಮಗುವನ್ನು ರಕ್ಷಿಸಿ ಎಂದು ಪೊಲೀಸರ ಮುಂದೆ ನಾಟಕಮಾಡಿದ್ದ. ಇವನ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು ಆತನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಮನೆಯವರು ಹಣ ಕೊಡುವುದಿಲ್ಲ ಎಂದಾಗ, ಮಗುವನ್ನು ಕೊಂದು ಮನೆಯಲ್ಲಿ ಮಂಚದ ಕೆಳಗೆ ಬಚ್ಚಿಟ್ಟಿದ್ದರು.

40 ಸಿಮ್ ಕಾರ್ಡ್ ವಶ : ಮಗುವಿನ ಮನೆಯವರಿಗೆ ಕರೆ ಮಾಡಲು ಸಲ್ಮಾನ್ ದಂಪತಿ 40 ಸಿಮ್ ಕಾರ್ಡ್ ಗಳನ್ನು ತಂದಿಟ್ಟುಕೊಂಡಿದ್ದರು. ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿ, ಮಗುವಿನ ಶವ ಮತ್ತು ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಗೆ ಡಿಸಿಪಿ ರವಿಕಾಂತೇಗೌಡ ಅವರು ಮಾರ್ಗದರ್ಶನ ಮಾಡಿದ್ದು, ಇನ್ಸ್‌ಪೆಕ್ಟರ್‌ಗಳಾದ ರಾಮಲಿಂಗೇಗೌಡ, ಶ್ರೀಧರ್, ರಂಗಪ್ಪ, ವಿಜಯ ಹಡಗಲಿ, ಮಂಜುನಾಥ್, ರವಿ ಪಾಟೀಲ ಮತ್ತು ಸಿಬ್ಬಂದಿ ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

English summary
Bangalore Ashok Nagar Police arrested two accused in the case of kidnapping and murder 7 year old child on Wednesday, July 9. Accused identified as Salman and Shabarien said, Bangalore police commissioner Raghavendra Auradkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X