• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಬಿಕ್ಕಟ್ಟು: ಪ್ರತಿ ವಾರ್ಡ್‌ಗೂ 2 ಆಂಬುಲೆನ್ಸ್ ಮೀಸಲು

|

ಬೆಂಗಳೂರು, ಜುಲೈ 3: ಕೊರೊನಾ ಬಿಕ್ಕಟ್ಟಿನಿಂದ ನಗರದಲ್ಲಿ ಆಂಬುಲೆನ್ಸ್ ಸಮಸ್ಯೆ ಎದುರಾಗಿದೆ. ಕೊರೊನಾ ಪಾಸಿಟಿವ್ ಇದ್ದರೂ, ಸೋಂಕಿನ ಲಕ್ಷಣ ಇದ್ದರೂ ಅಥವಾ ಯಾವುದೇ ಇನ್ನಿತರ ಕಾಯಿಲೆಗಳು ಇದ್ದರೂ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಇದೆ.

   15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

   ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!

   ಇದೀಗ, ಈ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಸರ್ಕಾರ ಹೊಸ ನಿರ್ಧಾರ ಕೈಗೊಂಡಿದೆ. ''ಸಿಎಂ ಸಲಹೆ ಮೇರೆಗೆ ಪ್ರತೀ ವಾರ್ಡ್ ನಲ್ಲಿ 2 ಆಂಬುಲೆನ್ಸ್ ಮೀಸಲಿಡಲು ನಿರ್ಧರಿಸಲಾಗಿದೆ. 198 ವಾರ್ಡ್ ಗಳಿಗೆ 400 ಆಂಬುಲೆನ್ಸ್ ಗಳನ್ನು ಒದಗಿಸಲು ನಿರ್ಣಯಿಸಲಾಗಿದೆ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

   ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರ

   ಇಂದು ಬೆಂಗಳೂರಿನಲ್ಲಿ ಟಾಸ್ಕ್ ಫೋರ್ಸ್‌ ಸಭೆ ನಡೆಯಿತು. ಈ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು, ಸಿಎಸ್ ವಿಜಯ್ ಭಾಸ್ಕರ್, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಭಾಗವಹಿಸಿದ್ದರು. ಸಚಿವ ರಾಮುಲು ಹಾಗೂ ಬಳ್ಳಾರಿ ಡಿಸಿ ಎಸ್ ಎಸ್ ನಕುಲ್ ಬಳ್ಳಾರಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಟಾಸ್ಕ್ ಫೋರ್ಸ್ ಸಭೆಯಲ್ಲಿ ಭಾಗವಹಿಸಿದ್ದರು.

   ''ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಸಮಸ್ಯೆ ಆಗಿತ್ತು. ಇದರ ಬಗ್ಗೆ ತಜ್ಞರಿಂದ ವರದಿ ಕೇಳಿದ್ವಿ. ಇಂದು ವರದಿ‌ ಬಂದಿದೆ. ಈಗ ಹಲವು ನಿರ್ಣಯಗಳನ್ನು ಕೈಗೊಂಡಿದ್ದೇವೆ. ಯಾರಿಗೆ ಹೋಂ ಕ್ವಾರಂಟೈನ್ ಮಾಡಬೇಕು, ಯಾವ ಮಾನದಂಡ, ಯಾವ ಆರೋಗ್ಯ ಸಲಹೆ ಕೊಡಬೇಕು ಅಂತ ಸರ್ಕಾರದ ಮಾರ್ಗಸೂಚಿಗಳು ಬಂದಿವೆ. ಇದೇ ಆಧಾರ ಇಟ್ಕೊಂಡು ವರದಿ ಕೊಟ್ಟಿದೆ ಸಮಿತಿ. ತಜ್ಞರ ವರದಿಯ ಶಿಫಾರಸುಗಳನ್ನು ಟಾಸ್ಕ್ ಫೋರ್ಸ್ ನಲ್ಲಿ ಒಪ್ಪಿಕೊಳ್ಳಲಾಗಿದೆ. 775 ಬೆಡ್ ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಆಗಿ ಒದಗಿಸಲು ನಿರ್ಧಾರ ಮಾಡಲಾಗಿದೆ'' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

   ''ಸೋಂಕಿತರ ಪ್ರಮಾಣ ಹೆಚ್ಚಾಗ್ತಿದೆ. ಕಳೆದ 4 ತಿಂಗಳಿಂದ 1450 ಪ್ರಜರಣ ಇದ್ವು. ಕಳೆದ 9 ದಿನಗಳಿಂದ ನಾಲ್ಕು ಪಟ್ಟು ಹೆಚ್ಚು ಆಗಿವೆ. ಬೆಂಗಳೂರಿನಲ್ಲಿ ಡಿಸ್ಚಾರ್ಜ್ ರೇಟ್ ಇಳಿಕೆ. ಕರ್ನಾಟಕದಲ್ಲಿ ಇಳಿದಿಲ್ಲ'' ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

   ''2.09% ಸಾವಿನ ಪ್ರಮಾಣ ದೇಶದಲ್ಲಿದೆ. 18016 ಜನರಲ್ಲಿ 9400 ಆಕ್ಟೀವ್ ಕೇಸ್ ಇದೆ. ರಾಜ್ಯದಲ್ಲಿ 1.50% ಸಾವಿನ ಪ್ರಮಾಣ ಇದೆ. 1.61% ಸಾವಿನ ಪ್ರಮಾಣ ಬೆಂಗಳೂರಲ್ಲಿದೆ. 2% ರಷ್ಟು ಜನ ಬೆಂಗಳೂರಲ್ಲಿ ಐಸಿಯುನಲ್ಲಿದ್ದಾರೆ. 1.71% ರಾಜ್ಯದಲ್ಲಿ ಐಸಿಯು‌ನಲ್ಲಿದ್ದಾರೆ'' ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

   English summary
   'Two Ambulance reserved for every ward' said Home minister basavaraj bommai after task force meeting.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more