ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರು

|
Google Oneindia Kannada News

Recommended Video

ನಿಮಗಾಗಿ ಕಾಯುತ್ತಿರುತ್ತೇವೆ ಮಿಸ್ ಮಾಡ್ಬೇಡಿ ದಿವ್ಯ ಸ್ಪಂದನ..! | Oneindia Kannada

ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರ ಟ್ವಿಟ್ಟರ್ ಖಾತೆ ಕಣ್ಮರೆ, ನಿಷ್ಕ್ರಿಯ, ಟ್ವೀಟ್ ಡಿಲೀಟ್ ಬಗ್ಗೆ ಚರ್ಚೆ ಮುಂದುವರೆದಿದೆ. ರಮ್ಯಾ ಅವರ ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಂ ಖಾತೆ ಡಿಲೀಟ್ ಆಗಿದ್ದು, ಫೇಸ್ ಬುಕ್ ಖಾತೆ ಮಾತ್ರ ಅಸ್ತಿತ್ವದಲ್ಲಿದೆ. ರಮ್ಯಾ ಅವರು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಾರಥ್ಯಕ್ಕೆ ಗುಡ್ ಬೈ ಹೇಳಿದ್ದಾರೆ ಅಥವಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂಬ ಸುದ್ದಿಯೂ ಹಬ್ಬಿತ್ತು.

ಆದರೆ, ರಮ್ಯಾ ಅವರನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಸ್ಥಾನದಿಂದ ಕೆಳಗಿಳಿಸಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ಖಚಿತಪಡಿಸಿದೆ.

ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯ

ಹಾಗಾದರೆ, ರಮ್ಯಾ ಅವರ ಖಾತೆಯ ಟ್ವೀಟ್ ಡಿಲೀಟ್ ಆಗಿದ್ದು ಹೇಗೆ? ಏಕೆ? ಈ ಬಗ್ಗೆ ರಮ್ಯಾ ಅವರಾಗಲಿ, ಕಾಂಗ್ರೆಸ್ಸಿಗರಾಗಲಿ ಪ್ರತಿಕ್ರಿಯಿಸುತ್ತಿಲ್ಲವೇಕೆ? ಎಂದು ಪ್ರಶ್ನೆಗಳು ಎದ್ದಿವೆ. ಈ ನಡುವೆ ರಮ್ಯಾ ವಿರುದ್ಧ ಟೀಕೆ, ಆಕ್ಷೇಪ, ಆರೋಪಗಳು ಕೇಳಿ ಬಂದಿವೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ದುಃಸ್ಥಿತಿಗೆ ರಮ್ಯಾ ಅವರೆ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ.

ಸದ್ಯ ರಮ್ಯಾ ಖಾತೆ ಸಿಗುತ್ತಿಲ್ಲ, ರಮ್ಯಾ ಖಾತೆಯಲ್ಲಿ ಶೂನ್ಯ ಸಂದೇಶ, ಶೂನ್ಯ ಹಿಂಬಾಲಕರು ಎಂಬ ಸ್ಕ್ರೀನ್ ಶಾಟ್ ಗಳು ಹಂಚಿಕೆಯಾಗುತ್ತಿವೆ.

ಬಿಜೆಪಿ ಬೆಂಬಲಿಗರಿಂದ ರಮ್ಯಾ ವಿರುದ್ಧ ಟ್ವೀಟ್ ಬಾಣ

ಬಿಜೆಪಿ ಬೆಂಬಲಿಗರಿಂದ ರಮ್ಯಾ ವಿರುದ್ಧ ಟ್ವೀಟ್ ಬಾಣ

ಯಾವ ಕಾರಣದಿಂದಾಗಿ ಸಂದೇಶಗಳನ್ನು ಅಳಿಸಿಹಾಕಿದ್ದಾರೆ, ಇದೇನು ಉದ್ದೇಶಿತ ಕೃತ್ಯವೇ ಅಥವಾ ತಾಂತ್ರಿಕ ದೋಷವೇ ಏನು ಸ್ಪಷ್ಟನೆ ಇಲ್ಲ. ರಮ್ಯಾ ಅವರನ್ನು ಹಿಂಬಾಲಿಸುತ್ತಿದ್ದ ಅನೇಕರಿಗೆ ತಮ್ಮ ಖಾತೆಯನ್ನು ರಮ್ಯಾ ಬ್ಲಾಕ್ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ನಡುವೆ ಬಿಜೆಪಿ ಬೆಂಬಲಿಗರು ರಮ್ಯಾ ವಿರುದ್ಧ ಟ್ವೀಟ್ ಬಾಣ ಬಿಡುವುದನ್ನು ಮುಂದುವರೆಸಿದ್ದಾರೆ.

ರಿಪೇರಿಯಾಗಬೇಕಿರುವ ಕಾಂಗ್ರೆಸ್

ರಿಪೇರಿಯಾಗಬೇಕಿರುವ ಕಾಂಗ್ರೆಸ್, 2024ರಲ್ಲಿ ಬಿಜೆಪಿ ವಿರುದ್ಧದ ಯುದ್ಧಕ್ಕೆ ಅಣಿಯಾಗುತ್ತಿದೆ. ದಿವ್ಯ ಸ್ಪಂದನ ತಂಡ ಇಲ್ಲ, ವಕ್ತಾರರಿಗೆ ನಿರ್ಬಂಧ, ಸ್ಯಾಮ್ ಪಿತ್ರೋಡಾ ಭೂಗತರಾಗಿದ್ದಾರೆ. ಇದು ಸರಿಯಲ್ಲ.

2024ರಲ್ಲಿ ನಮೋ ಮತ್ತೊಮ್ಮೆ

2024ರಲ್ಲಿ ನಮೋ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ, ಸ್ವಾಗತ ಕೋರಲು ಬನ್ನಿ, ಸದ್ಯ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಯಾವ ಪಾರ್ಟಿಯಾದರೂ ನಾಶವಾಗುತ್ತೆ

ನೀವು ಕಾರ್ಯನಿರ್ವಹಿಸುತ್ತಿದ್ದೀರಿ ಎಂದರೆ ಯಾವ ಪಕ್ಷವಾದರೂ ಸರಿ ನಾಶವಾಗುತ್ತೆ, ಐಟಿ ಸೆಲ್ ಹೇಗೆ ವರ್ಕ್ ಆಗುತ್ತೆ ಎಂಬುದು ನಿಮಗೆ ತಿಳಿದಿಲ್ಲ, ಸುಮ್ಮನೆ ನಟನಾ ಕ್ಷೇತ್ರಕ್ಕೆ ಹಿಂತಿರುಗಿ.

ನಿಮ್ಮ ಹಿಂಬಾಲಕರನ್ನು ನನಗೆ ಕೊಡಬಾರದಿತ್ತಾ

ನಿಮ್ಮ ಖಾತೆಯನ್ನು ಕೊಲ್ಲುವ ಮುನ್ನ ನಿಮ್ಮ ಹಿಂಬಾಲಕರನ್ನು ನನಗೆ ಕೊಡಬಾರದಿತ್ತಾ, ನೀವು ಒಂದು ಒಳ್ಳೆ ಕಾರ್ಯವನ್ನು ಮಾಡಬಹುದಿತ್ತಲ್ವ ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದ್ದಾರೆ.

ಈಗಿನ ದಿವ್ಯ ಸ್ಪಂದನ ನಮಗೆ ಬೇಡ

ಈಗಿನ ದಿವ್ಯ ಸ್ಪಂದನ ನಮಗೆ ಬೇಡ, ಹಳೆ ಪದ್ಮಾವತಿ ರಮ್ಯಾ ಆಗೋಕೆ ಪ್ರಯತ್ನ ಪಡು, ಮತ್ತೊಮ್ಮೆ ಚಿತ್ರರಂಗಕ್ಕೆ ಮರಳಿ ಎಂದು ಸಲಹೆ ನೀಡಿದ ಕೆಲವರು.

English summary
Twitterati reaction over Ramya Divya Spandana Tweets deleted, account disappear is here. Many BJP supporters said will meet you again in 2024 as Modi may continue to another term as PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X