ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#WeAreWithDKS ಟ್ರೆಂಡ್ ಶುರು ಮಾಡಿದ ಡಿಕೆಶಿ ಫ್ಯಾನ್ಸ್

|
Google Oneindia Kannada News

ಬೆಂಗಳೂರು, ಅ. 5: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿಯನ್ನು ಖಂಡಿಸಿ ಅವರ ಅಭಿಮಾನಿಗಳು ಟ್ವಿಟ್ಟರ್ ಟ್ರೆಂಡ್ ಆರಂಭಿಸಿದ್ದಾರೆ.

ಸಿಬಿಐ ದಾಳಿ ಎಂಬುದು ಬಿಜೆಪಿಯ ಶಾಶ್ವತ ಚುನಾವಣಾ ಪ್ರಕ್ರಿಯೆ ಆಗಿದೆ. ಉಪ ಚುನಾವಣೆಯ ಸೋಲುವ ಭೀತಿ ಬಿಜೆಪಿಯಿಂದ ಏನೆಲ್ಲ ಮಾಡಿಸುತ್ತಿದೆ, ದ್ವೇಷ ರಾಜಕಾರಣದ ಸಿಬಿಐ ದಾಳಿಯನ್ನು ಖಂಡಿಸುತ್ತೇವೆ ಎಂದು ಕೆಪಿಸಿಸಿ ಅಧಿಕೃತವಾಗಿ ಮೊದಲ ಪ್ರತಿಕ್ರಿಯೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರ, ದೊಡ್ಡಹಾಲಹಳ್ಳಿ, ದೆಹಲಿಯ ಕಾವೇರಿ ಅಪಾರ್ಟ್ಮೆಂಟ್, ಮುಂಬೈ, ಮೈಸೂರು, ಹಾಸನ ಸೇರಿದಂತೆ 15 ಕಡೆಗಳಲ್ಲಿ 60ಕ್ಕೂ ಅಧಿಕ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಸಿಬಿಐ ದಾಳಿಯ ಬಗ್ಗೆ ಡಿಕೆ ಶಿವಕುಮಾರ್‌ಗೆ ಮೊದಲೇ ತಿಳಿದಿತ್ತೇ?ಸಿಬಿಐ ದಾಳಿಯ ಬಗ್ಗೆ ಡಿಕೆ ಶಿವಕುಮಾರ್‌ಗೆ ಮೊದಲೇ ತಿಳಿದಿತ್ತೇ?

ಬೆಂಗಳೂರಿನ ಸಿಬಿಐ ಅಧಿಕಾರಿ ಎಸ್ಪಿ ಥಾಮ್ಸನ್ ಜೋಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ನಿನ್ನೆ ಸಂಜೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಳ್ಳಲಾಗಿತ್ತು.

ಅಲಿ ಗೊರವನಕೊಳ್ಳ ಟ್ವೀಟ್

ಅಲಿ ಗೊರವನಕೊಳ್ಳ ಟ್ವೀಟ್

@AGoravanakoll: ಸಿಬಿಐ ದಾಳಿ ಎಂಬುದು ಬಿಜೆಪಿಯ ಶಾಶ್ವತ ಚುನಾವಣಾ ಪ್ರಕ್ರಿಯೆ ಆಗಿದೆ.ಉಪ ಚುನಾವಣೆಯ ಸೋಲುವ ಭೀತಿ ಬಿಜೆಪಿಯಿಂದ ಏನೆಲ್ಲ ಮಾಡಿಸುತ್ತಿದೆ.! ದ್ವೇಷ ರಾಜಕಾರಣದ ಸಿಬಿಐ ದಾಳಿಯನ್ನು ಖಂಡಿಸುತ್ತೇವೆ.

ರವಿಕಾಂತ್ ಬಿರಾದಾರ್ ಟ್ವೀಟ್

ರವಿಕಾಂತ್ ಬಿರಾದಾರ್ ಟ್ವೀಟ್

@RavikantBiradar: ನ್ಯಾಯ ಒದಗಿಸಬೇಕಾದ ಸರ್ಕಾರಿ ಸಂಸ್ಥೆಗಳು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿರುವುದು ಇಂದು@DKShivakumar @DKSureshINC ಮೇಲೆ ಮಾಡಿರುವ ದಾಳಿಯೇ ಸಾಕ್ಷಿಯಾಗಿದೆ. ನ್ಯಾಯಯುತ ಆಡಳಿತ ನೆಡೆಸದೆ ಭ್ರಷ್ಟಾಚಾರದ ಕೂಪದಲ್ಲಿ ಮುಳಗಿ ಚುನಾವಣೆ ಸಮಯದಲ್ಲಿ ದ್ವೇಷ ರಾಜಕಾರಣ ಮಾಡುವುದು ಚುನಾವಣೆಯ ಸಾಮಾನ್ಯ ಪ್ರಕ್ರಿಯೆಯಾಗಿದೆ

''ರಾಜಕೀಯ ದ್ವೇಷದಿಂದ ಡಿಕೆಶಿ ಮನೆ ಮೇಲೆ ದಾಳಿ'': ಕೆಪಿಸಿಸಿ''ರಾಜಕೀಯ ದ್ವೇಷದಿಂದ ಡಿಕೆಶಿ ಮನೆ ಮೇಲೆ ದಾಳಿ'': ಕೆಪಿಸಿಸಿ

ಶ್ರೀನಿವಾಸ್ ಟ್ವೀಟ್

@SrinivasGHMLA: ಬಿಜೆಪಿ ಕಪಿಮುಷ್ಟಿಯಲ್ಲಿರುವ #CBIನಿಂದ @DKShivakumar ಅವರ ಮೇಲಿನ ರಾಜಕೀಯ ಪ್ರೇರಿತ ದಾಳಿಯನ್ನು ನಾನು ಖಂಡಿಸುತ್ತೇನೆ.

ಸಿಬಿಐ ದಾಳಿ ಎಂಬುದು ಬಿಜೆಪಿಯ ಶಾಶ್ವತ ಚುನಾವಣಾ ಪ್ರಕ್ರಿಯೆ ಆಗಿದೆ.ಉಪ ಚುನಾವಣೆಯ ಸೋಲುವ ಭೀತಿ ಬಿಜೆಪಿಯಿಂದ ಏನೆಲ್ಲ ಮಾಡಿಸುತ್ತಿದೆ.!#WeAreWithDKS

ದಾಳಿ ನಡೆಸಲು ಕಾರಣವೇನು?

ದಾಳಿ ನಡೆಸಲು ಕಾರಣವೇನು?

ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಕರ್ನಾಟಕದ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. 2019ರ್ ಸೆಪ್ಟೆಂಬರ್ 19ರಲ್ಲೇ ಈ ಅನುಮತಿ ಸಿಕ್ಕಿದೆ. ಡಿಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ತನಿಖೆಯೂ ಜಾರಿಯಲ್ಲಿದೆ. ದೆಹಲಿ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕ 8.65 ಕೋಟಿ ರುಗೆ ಆದಾಯ ಮೂಲ ತೋರಿಸಲಾಗದೆ ತಿಹಾರ್ ಜೈಲಿನಲ್ಲಿ 50 ದಿನಗಳ ಕಳೆದು ಜಾಮೀನು ಪಡೆದು ಹೊರ ಬಂದಿದ್ದರು.

ಆದರೆ ಸಿಬಿಐ ತನಿಖೆ, ದಾಳಿ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಅನುಮತಿ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಹಾಕಲಾಗಿದೆ. ದಾಳಿ ನಡೆಸದಂತೆ ತಡೆಯಾಜ್ಞೆಯಿದೆ. ಹಾಗಿದ್ದರೂ ಸಿಬಿಐ ದಾಳಿ ಏಕೆ ಎಂದು ಡಿಕೆ ಶಿವಕುಮಾರ್ ಪರ ವಕೀಲ ಪೊನ್ನಣ್ಣ ಪ್ರಶ್ನಿಸಿದ್ದಾರೆ.

English summary
BJP are missusing their power again. Whenever they feel they are loosing election they do this kind dirty politics. All these they are doing to win Byelection-many trend tweet with #WeAreWithDKS tag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X