ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#Top10Criminals, ಗೂಗಲ್ ಸರ್ಚ್ ನಲ್ಲಿ ಮೋದಿ ಚಿತ್ರ

By Mahesh
|
Google Oneindia Kannada News

ಬೆಂಗಳೂರು, ಜೂ.3: ಸರ್ಚ್ ಇಂಜಿನ್ ದಿಗ್ಗಜ ಗೂಗಲ್, ಬುಧವಾರ ಎಡವಟ್ಟು ಮಾಡಿಬಿಟ್ಟಿದೆ. ವಿಶ್ವದ ಟಾಪ್ 10 ಕ್ರಿಮಿನಲ್ ಗಳ ಪಟ್ಟಿ ತೋರಿಸಲು ಸರ್ಚ್ ಮಾಡಿದರೆ ಮೊಟ್ಟ ಮೊದಲಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಂಡು ಬಂದಿದೆ.

ಮೋದಿ ಅಭಿಮಾನಿಗಳು ಹೌಹಾರಿದರೆ, ಮೋದಿ ವಿರೋಧಿಗಳು ಮುಸಿ ಮುಸಿ ನಗೆ ಚೆಲ್ಲಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ #Top10Criminals ಫುಲ್ ಟ್ರೆಂಡಿಂಗ್ ನಲ್ಲಿದೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಟಾಪ್ 10 ಕ್ರಿಮಿನಲ್ ಗಳ ಬಗ್ಗೆ ಟ್ರೆಂಡಿಂಗ್ ಶುರುವಾಗಿದ್ದೆ ತಡ ಕ್ರಿಮಿನಲ್ ಗಳನ್ನು ಪಕ್ಕಕ್ಕಿಟ್ಟು ಮೋದಿ ಪರ-ವಿರೋಧ ಟ್ವೀಟ್ ಗಳ ಸುರಿಮಳೆಯಾಗುತ್ತಿದೆ.

ವಿಶ್ವದ ಬಹು ಚರ್ಚಿತ ಕ್ರಿಮಿನಲ್ ಗಳನ್ನು ನೋಡಲು ಬಯಸಿ ಗೂಗಲ್ ನಲ್ಲಿ ಸರ್ಚ್ ಮಾಡಿದವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿದೆ.

ಒಂದಲ್ಲ, ಎರಡಲ್ಲ, ಮೂರು ಬಾರಿ ಮೋದಿ ಚಿತ್ರ ಕಾಣಿಸಿಕೊಂಡಿದ್ದು ಗೂಗಲ್ ಮಾಡಿದ ಅಚಾತುರ್ಯವೋ, ಪ್ರಮಾದವೋ ಮುಜುಗರದ ವಿಷಯವಾಗಿ ಬಿಟ್ಟಿತು. ಮೋದಿ ವಿರೋಧಿಗಳು ಟ್ವೀಟ್ಸ್ ಮೂಲಕ ಕಿಚಾಯಿಸುತ್ತಿದ್ದಾರೆ. ಸಂಗ್ರಹಿತ ಟ್ವೀಟ್ ಗಳ ರಾಶಿ ಇಲ್ಲಿದೆ...

ಲಾಡೆನ್, ದಾವೂದ್ ಜೊತೆಗೆ ಮೋದಿ ಚಿತ್ರ

ಲಾಡೆನ್, ದಾವೂದ್ ಜೊತೆಗೆ ಮೋದಿ ಚಿತ್ರ

ಒಸಾಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಸಂಜಯ್ ದತ್, ಅಮೆರಿಕದ ಸರಣಿ ಹಂತಕ ಏರಿಯಲ್ ಕ್ಯಾಸ್ಟ್ರೋ ಜೊತೆಗೆ ಮೋದಿ ಚಿತ್ರ ಎದ್ದು ಕಾಣುತ್ತಿದೆ. ಭಾರತದ ಮೂಲದ ಇಂಡೋ ಅಮೆರಿಕನ್ ಲೆಸ್ಬಿಯನ್ ಜೋಡಿ ಶಾನನ್-ಸೀಮಾ ಚಿತ್ರ, ಫ್ಯಾಷನ್ ಕ್ರಿಮಿನಲ್ ಎಂದು ನಟಿ ಸೋನಾಕ್ಷಿ ಸಿನ್ಹಾ ಚಿತ್ರ ಕೂಡಾ ಸರ್ಚ್ ಮಾಡಿದಾಗ ಸಿಗುತ್ತದೆ.

ನಾನೇ ಮೋದಿ ಆಗಿದ್ದರೆ ಟ್ವೀಟ್ ಮಾಡುತ್ತಿರಲಿಲ್ಲ

ಗೂಗಲ್ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಅಲ್ಲಿ ತನಕ ಜಾಲತಾಣ ಟ್ವಿಟ್ಟರ್ ಬಳಸುತ್ತಿರಲಿಲ್ಲ.

ಯಾವುದು ಅಪಮಾನಕರ?

ಯಾವುದು ಅಪಮಾನಕರ? 2002ರ ಗುಜರಾತ್ ಹತ್ಯಾಕಾಂಡ ಭಾರತಕ್ಕೆ ಅಪಮಾನಕರವಲ್ಲವೇ?

ಮೋದಿ ಭಕ್ತರು, ಒಮ್ಮೆ ಹಾಗೆ ಒಮ್ಮೆ ಹೀಗೆ

ಗೂಗಲ್ ಹೊಗಳುತ್ತಿದ್ದ ಮೋದಿ ಭಕ್ತರು ಈಗ ತೆಗಳುತ್ತಿದ್ದಾರೆ. ಒಮ್ಮೆ ಹಾಗೆ ಒಮ್ಮೆ ಹೀಗೆ

ಮಾಧ್ಯಮಗಳನ್ನು ಬುಟ್ಟಿಗೆ ಹಾಕಿಕೊಂಡಂತೆ ಅಲ್ಲ

ಮಾಧ್ಯಮಗಳನ್ನು ಬುಟ್ಟಿಗೆ ಹಾಕಿಕೊಂಡಂತೆ ಅಲ್ಲ, ಗೂಗಲ್ ಗೆ ಏನು ಹೇಳುತ್ತೀರಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಗೂಗಲ್ ಬ್ಯಾನ್ ಬಗ್ಗೆ ಮಾತುಕತೆ

ಗೂಗಲ್ ಬ್ಯಾನ್ ಬಗ್ಗೆ ರವಿಶಂಕರ್ ಪ್ರಸಾದ್ ಮಾತುಕತೆ ಆರಂಭಿಸಿದ್ದಾರೆ ಎಂಬ ಸುದ್ದಿಯನ್ನು ತಮಾಷೆಗಾಗಿ ಹಬ್ಬಿಸಲಾಗಿದೆ,

ಮೋದಿ ಸರ್ಕಾರ್ ಬಂದ ಮೇಲೆ ಏನೇನಾಯ್ತು?

ಮೋದಿ ಸರ್ಕಾರ್ ಬಂದ ಮೇಲೆ ಏನೇನು ನಿಷೇಧವಾಯ್ತು ಇಲ್ಲಿದೆ ಪಟ್ಟಿ

ನಿಷೇಧ ತಪ್ಪಿಸಿಕೊಳ್ಳಲು ಇಲ್ಲಿದೆ ಲಾಜಿಕ್

ನಿಷೇಧ ತಪ್ಪಿಸಿಕೊಳ್ಳಲು ಗೂಗಲ್ ಗಾಗಿ ಇಲ್ಲಿದೆ ಲಾಜಿಕ್ ಪೋಗ್ರಾಂ

English summary
#Top10Criminals was trending on Twitter because a search result for the same on Google threw up pictures of several Indians. And one of them is none other than Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X