ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಇದು ಮುನಿರತ್ನ ಗೆಲುವಲ್ಲ, ಸಿದ್ದರಾಮಯ್ಯ ಸರ್ಕಾರದ ಗೆಲುವು'

By Mahesh
|
Google Oneindia Kannada News

ಬೆಂಗಳೂರು, ಮೇ 31 : ರಾಜರಾಜೇಶ್ವರಿ ನಗರ ಚುನಾವಣೆ ಫಲಿತಾಂಶ ನಿರೀಕ್ಷೆಯಂತೆ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಂ ನಾಯ್ಡು ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇದು ಮುನಿರತ್ನ ಅವರೊಬ್ಬರ ಗೆಲುವಲ್ಲ, ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಧನೆಯ ಫಲ' ಎಂದು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದಾರೆ.

ಚುನಾವಣಾ ಅಕ್ರಮದ ಆರೋಪ ಹೊತ್ತಿದ್ದ ಮುನಿರತ್ನ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಯತ್ನಿಸಲಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಬಳಿಕ, ರಾಜರಾಜೇಶ್ವರಿ ನಗರದಲ್ಲಿ ಅಭ್ಯರ್ಥಿಗಳ ಪರಿಸ್ಥಿತಿ ಏನಾಗುವುದೋ ಎಂಬ ಕುತೂಹಲವಿತ್ತು.

ರಾಜರಾಜೇಶ್ವರಿ ನಗರ ಫಲಿತಾಂಶ LIVE: ಮತದಾರರಿಗೆ ತಲೆಬಾಗಿದ ಮುನಿರತ್ನ ರಾಜರಾಜೇಶ್ವರಿ ನಗರ ಫಲಿತಾಂಶ LIVE: ಮತದಾರರಿಗೆ ತಲೆಬಾಗಿದ ಮುನಿರತ್ನ

ಆದರೆ, ಮೈತ್ರಿ ಏನಿದ್ದರೂ ವಿಧಾನಸಭೆಯಲ್ಲಿ ಮಾತ್ರ, ಚುನಾವಣೆ ಕಣದಲ್ಲಿ ಅಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಘೋಷಿಸಿದ್ದು, ಮಹತ್ವದ ತಿರುವು ತಂದಿತು.

ಸರಿ ಸುಮಾರು 103195 ಮತಗಳನ್ನು ಗಳಿಸಿರುವ ಕಾಂಗ್ರೆಸ್ಸಿನ ಹಾಲಿ ಶಾಸಕ ಮುನಿರತ್ನ ಅವರು ಗೆಲುವು ದಾಖಲಿಸಿದರೆ, ಬಿಜೆಪಿ 69769 ಮತಗಳನ್ನು ಪಡೆದರೆ, ಜೆಡಿಎಸ್ 54289 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಈ ಗೆಲುವಿನಿಂದ ವಿಧಾನಸೌಧದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜೋಡಿಯ ಬಲ 117ಕ್ಕೇರಿದೆ.

ಆರ್.ಆರ್.ನಗರ ಫಲಿತಾಂಶ : 900ಕ್ಕೂ ಹೆಚ್ಚು ನೋಟಾ ಮತ! ಆರ್.ಆರ್.ನಗರ ಫಲಿತಾಂಶ : 900ಕ್ಕೂ ಹೆಚ್ಚು ನೋಟಾ ಮತ!

ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಜನತೆಗೆ ನೀಡಿದ ಭರವಸೆ ಸುಳ್ಳಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಜೋಡಿ ಬಲ

ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಜನತೆಗೆ ನೀಡಿದ ಭರವಸೆ ಸುಳ್ಳಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಎಚ್ ಡಿ ಕುಮಾರಸ್ವಾಮಿಗೆ ಸಂದೇಶ

ಎಚ್ ಡಿ ಕುಮಾರಸ್ವಾಮಿಗೆ ಅಭಿಮಾನಿಯೊಬ್ಬ ಸಂದೇಶ ಕಳಿಸಿದ್ದು, ಮುಂದಿನ ಲೋಕಸಭೆಗಾಗಿ ಬೇರೆ ರೀತಿ ಕಾರ್ಯತಂತ್ರ ರೂಪಿಸಿ, ನಮ್ಮ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ, ಈ ಬಗ್ಗೆ ಚಿಂತಿಸಿ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ರಸ್ತೆಯಲ್ಲಿ ಡ್ಯಾನ್ಸ್ ಮಾಡಿ, ಸಿಹಿ ಹಂಚಿ ಕುಣಿದಾಡಿದ್ದಾರೆ.

ಮುನಿರತ್ನ ಗೆಲುವಿನ ಲೆಕ್ಕಾಚಾರ ಹೇಗೆ?

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅನೇಕ ಕಾರಣಗಳಿದ್ದವು. ಮುನಿರತ್ನ ಅವರ ಮೇಲೆ ಆರೋಪಗಳಿದ್ದರೂ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಹೀಗಾಗಿ ಶೇಕಡಾವಾರು ಮತಗಳ ಪೈಕಿ ಕನಿಷ್ಠ ಶೇ5 ರಷ್ಟು ಕಾಂಗ್ರೆಸ್ಸಿಗೆ ಲಾಭವಾಗಿದೆ.

ಬಿಜೆಪಿ ಅಭಿಮಾನಿಗಳ ಪ್ರತಿಕ್ರಿಯೆ

ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದೇ ಬಿಜೆಪಿ ಸೋಲಿಗೆ ಕಾರಣ, ಬೆಂಗಳೂರಿನ ಶಾಸಕರುಗಳ ನಡುವೆ ಈ ರೀತಿ ಒಪ್ಪಂದಗಳು ನಡೆಯುತ್ತಿರುತ್ತವೆ ಇದೇ ಬೆಂಗಳೂರಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗದಿರಲು ಕಾರಣ ಎಂದಿದ್ದಾರೆ.

English summary
Congrats to Munirathna INCIndia candidate on winning the #RRNagar #bypolls by a huge margin- Twitterati abuzz with Rajarajeshwari Nagar election results
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X