• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳನ ಅಂಗಳಕ್ಕೆ ನೀರು ಬಿಟ್ಟಿದ್ದು ನಮ್ಮ ನೀಲ್ ಗೊತ್ತಾ!

By Mahesh
|

ಬೆಂಗಳೂರು, ಸೆ.29: ಮಂಗಳನ ಅಂಗಳದಲ್ಲಿ ಉಪ್ಪು ನೀರು ಹರಿಯುತ್ತಿದೆ ಎಂದು ನಾಸಾದ ವಿಜ್ಞಾನಿಗಳು ಸಂಶೋಧನೆ ಮಾಡಿ ಸುದ್ದಿ ಪ್ರಕಟಿಸುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಮಂಗಳನ ಮುಖ ಇನ್ನಷ್ಟು ಕೆಂಪಾಗುವಂತೆ ಟ್ವೀಟ್ಸ್, ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಮಂಗಳಕ್ಕೆ ನೀರು ಬಿಟ್ಟಿದ್ದು ನಮ್ಮ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಎಂದು ಯುಎಸ್ ಇನ್ನೇನು ಘೋಷಿಸುತ್ತದೆ ನೋಡಿ ಎಂಬ ಟ್ವೀಟ್ ಸೇರಿದಂತೆ ಹತ್ತು ಹಲವು ಬಗೆಯ ಟ್ವೀಟ್ ಗಳು ನಿಮ್ಮನ್ನು ನಕ್ಕು ನಲಿಸುತ್ತದೆ. [ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಈ ಹಿಂದೆ ಮಂಗಳನ ಅಂಗಳದಲ್ಲಿ ಕೆರೆ ಕಂಡಿದ್ದಾಗಿ ಕ್ಯೂರಿಯಾಸಿಟಿ ಹೇಳಿಕೊಂಡಿತ್ತು. ಈಗ ಕಂಡು ಬಂದಿರುವ ಹೈಡ್ರೇಟ್‌ ಸಾಲ್ಟ್‌ಗಳು ಮೈನಸ್ 70 ಡಿಗ್ರಿ ಉಷ್ಣಾಂಶದಲ್ಲಿಯೂ ನೀರು ಘನೀಕರಣಗೊಳ್ಳದಂತೆ ತಡೆಯಬಲ್ಲವು ಎಂದು ನಾಸಾ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಮಂಗಳನ ಮೇಲ್ಪದರದಲ್ಲಿ ನೀರಿನ ಅಂಶ, ನೀರು ಹರಿದಿರುವ ಮಾರ್ಗ, ಮಂಜುಗಡ್ಡೆ ಪದರ, ಮಣ್ಣಿನಲ್ಲಿ ನೀರಿನ ಅಂಶ, ಹೆಚ್ಚು ಲವಣಾಂಶದಿಂದ ಕೂಡಿದ ನೀರು ಹೀಗೆ ವಿಜ್ಞಾನಿಗಳು ಏನೇನೋ ಚಿತ್ರಗಳನ್ನು ತೋರಿಸಿ ತಮ್ಮ ಸಂಶೋಧನೆಗೆ ಪುರಾವೆ ಒದಗಿಸುವುದಕ್ಕೂ ಮೊದಲು ಪದವಿ ಪೂರ್ವ ವಿದ್ಯಾರ್ಥಿಯೊಬ್ಬ ಮಂಗಳನಲ್ಲಿ ನೀರು ಇದೆ ಎಂದು ಖಚಿತವಾಗಿ ಹೇಳಿದ್ದನ್ನು ಇಲ್ಲಿ ಮರೆಯುವಂತಿಲ್ಲ.

ಬೆಂಗಳೂರಲ್ಲೇ ನೀರಿಲ್ಲ ಇನ್ನು ಮಂಗಳದಲ್ಲಿ ನೀರಿದ್ದರೆ ಏನು ಇಲ್ಲದಿದ್ದರೆ ನಮಗೇನು ಎಂದು ಮೂಗೆಳೆಯುವವರೂ ಕೂಡಾ ಹುಬ್ಬೇರಿಸುವಂಥ ಟ್ವೀಟ್ ಗಳು ನೋಡಿ, ಓದಿ ಆನಂದಿಸಿ...

ಸಾಮಾಜಿಕ ಜಾಲ ತಾಣಗಳಲ್ಲಿ ಮಂಗಳ

ಸಾಮಾಜಿಕ ಜಾಲ ತಾಣಗಳಲ್ಲಿ ಮಂಗಳ

ಮಂಗಳನ ಅಂಗಳದಲ್ಲಿ ಉಪ್ಪು ನೀರು ಹರಿಯುತ್ತಿದೆ ಎಂದು ನಾಸಾದ ವಿಜ್ಞಾನಿಗಳು ಸಂಶೋಧನೆ ಮಾಡಿ ಸುದ್ದಿ ಪ್ರಕಟಿಸುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಮಂಗಳನ ಮುಖ ಇನ್ನಷ್ಟು ಕೆಂಪಾಗುವಂತೆ ಟ್ವೀಟ್ಸ್, ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಬಿಟ್ಟ ನೀರು

ಮಂಗಳನ ಅಂಗಳದಲ್ಲಿ ಕಂಡ ನೀರು ಬಂದಿದ್ದಾದರೂ ಹೇಗೆ? ಈ ನೀರು ಉಪ್ಪಾಗಿದೆ ಏಕೆ ಎಂಬ ಪ್ರಶ್ನೆಗೆ ಯುಎಸ್ ಉತ್ತರ ಹೀಗಿದೆ: ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ತಮ್ಮ ಮೊದಲ ಚಂದ್ರಯಾನ ಸಂದರ್ಭದಲ್ಲಿ ಸುಸು ಮಾಡಿದ್ದು ಮಂಗಳನ ಮೈಮೇಲೆ ಬಿದ್ದಿದೆ ಅಷ್ಟೇ.!

ಹಾಳು ಮಾಡಲು ಮತ್ತೊಂದು ನೆಲೆ

ಮನುಷ್ಯರಿಗೆ ನೂರಾರು ವರ್ಷಗಳ ನಂತರ ಹಾಳು ಮಾಡಲು ಮತ್ತೊಂದು ನೆಲೆ ಸಿಕ್ಕಿದೆ. ಇರುವ ಭೂಮಿಯನ್ನು ಹಾಳುಗೆಡವಿದ್ದಾಯ್ತು ಈಗ ಮಂಗಳದ ಅಂದ ಚೆಂದ ಕೆಡಿಸುವ ಕೆಲಸ ಬಾಕಿ ಇದೆ.

ನಾಸಾ ಮಂಗಳನಲ್ಲಿ ನೀರು ಹುಡುಕಬಹುದು ಆದ್ರೆ...

ನಾಸಾ ಮಂಗಳನಲ್ಲಿ ನೀರು ಹುಡುಕಬಹುದು ಆದ್ರೆ... ಆಮ್ ಆದ್ಮಿ ಪಕ್ಷದವರ ಟ್ವೀಟ್ ಗಳ ಮರ್ಮ ಅರಿಯಲು ಸಾಧ್ಯವೇ ಇಲ್ಲ.

ಬೆಂಗಳೂರಿಗರಿಗೆ ಈ ವಿಷ್ಯ ಹೊಸದೇನಲ್ಲ ಬಿಡಿ

ಬೆಂಗಳೂರಿಗರಿಗೆ ಈ ವಿಷ್ಯ ಹೊಸದೇನಲ್ಲ ಬಿಡಿ, ರಸ್ತೆ ರಸ್ತೆಗಳಲ್ಲಿ ಕುಳಿಗಳನ್ನು ಕಾಣುತ್ತಾ ಮಂಗಳನ ವಾತಾವಾರಣವನ್ನು ಅನುಭವಿಸಿರುತ್ತಾರೆ. ಸ್ವಯಂ ಸೇವಕರಾಗಿ ಮಂಗಳಯಾನಕ್ಕೆ ನಮ್ಮವರೇ ಸರಿ.

ವಾಟರ್ ಆನ್ ಮಾರ್ಸ್ ಹೇಗೆ?

ವಾಟರ್ ಆನ್ ಮಾರ್ಸ್ ಹೇಗೆ ಸಾಧ್ಯ? ನೋಡಿ ಇಲ್ಲಿದೆ ಉತ್ತರ.

ಗೂಗಲ್ ನಿಂದ ಸೊಗಸಾದ ಗೂಗಲ್ ಡೂಡ್ಲ್

ಮಂಗಳನ ಅಂಗಳದಲ್ಲಿ ನೀರು ಗೂಗಲ್ ನಿಂದ ಸೊಗಸಾದ ಗೂಗಲ್ ಡೂಡ್ಲ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twitter reaction on NASA Reveals Evidence of Flowing Liquid Water on Mars. The hashtags #Marte, #MarsAnnouncement, #wateronmars went viral on Twitter today in response to the great discovery by scientists. Here the few of the tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more