ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಶ್ಮೀರ ಬೇಕೆಂದ ಭುಟ್ಟೋ ಮೇಲೆ ಟ್ವೀಟ್ ಬಾಂಬ್

By Mahesh
|
Google Oneindia Kannada News

ಬೆಂಗಳೂರು, ಸೆ.20: 'ಕಾಶ್ಮೀರವನ್ನು ನಾನು ಹಿಂದಕ್ಕೆ ಪಡೆಯುವೆ. ಅದರ ಒಂದಿಂಚು ಸ್ಥಳವನ್ನೂ ಬಿಡದೆ ವಾಪಸ್ ಪಡೆಯುತ್ತೇನೆ. ಏಕೆಂದರೆ ಪಾಕ್‌ನ ಇತರ ಪ್ರಾಂತಗಳಂತೆ ಕಾಶ್ಮೀರ ಕೂಡಾ ಪಾಕಿಸ್ತಾನಕ್ಕೆ ಸೇರಿದ್ದಾಗಿದೆ' ಎಂದು ಜ್ಯೂ.ಭುಟ್ಟೋ ಹೇಳುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಲಾವಲ್ ಮೇಲೆ ಟ್ವೀಟ್ ಬಾಂಬ್ ಗಳ ಪ್ರಹಾರ ನಡೆಯಿತು. ಬಹುತೇಕ ನಗೆ ಬಾಂಬ್ ಗಳಾಗಿದ್ದು, ಭುಟ್ಟೋ ಅವರ ಹೇಳಿಕೆಯನ್ನು ಅಣಕಿಸಲಾಯಿತು.

ಪಾಕಿಸ್ತಾನದ ಮುಲ್ತಾನ್ ನಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಿಲಾವಲ್ ಭುಟ್ಟೋ ಕಾಶ್ಮೀರದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿರುವುದಾಗಿ ಘೋಷಿಸಿರುವ ಬಿಲಾವಲ್ ಅವರು ತಮ್ಮ ರಾಜಕೀಯ ಚಿಕನ್ ಮಟನ್ ಬೇಯಸಿಕೊಳ್ಳಲು ಈ ರೀತಿ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಲಾಗಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟ್ಟೋ ಪುತ್ರ ಬಿಲಾವಲ್ ಭುಟ್ಟೋರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೋಲಿಸಿ ಟ್ವೀಟ್ ಮಾಡಲಾಗಿದೆ. ಅನೇಕಾನೇಕ ಟ್ವೀಟ್ ಗಳು ಹರಿದು ಬಂದರೂ ಅದರಲ್ಲಿ ಕೆಲವು ಆಯ್ಕೆ ಮಾಡಿ ಇಲ್ಲಿ ನೀಡಲಾಗಿದೆ. ಟ್ವೀಟ್ ಮಹಾಪೂರವನ್ನು ಕಾಣಬೇಕಾದರೆ ಬಿಲಾವಲ್ ಭುಟ್ಟೋ ಹೆಸರಿನ ಹ್ಯಾಶ್ ಟ್ಯಾಗ್ ನಲ್ಲಿ ಎಲ್ಲವೂ ನಿಮಗೆ ಸಿಗಲಿದೆ

ಬಿಲಾವಲ್ ಹೇಳಿಕೆಗೆ ಭಾರತದ ಅಧಿಕೃತ ಉತ್ತರ

ಬಿಲಾವಲ್ ಹೇಳಿಕೆಗೆ ಭಾರತದ ಅಧಿಕೃತ ಉತ್ತರ

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೊ ಝರ್ದಾರಿಯವರ ಹೇಳಿಕೆಯು 'ವಾಸ್ತವಕ್ಕೆ ದೂರವಾದುದಾಗಿದೆ' ಮತ್ತು ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯ ವಿಚಾರದಲ್ಲಿ ಯಾವುದೇ ಸಂಧಾನವಿಲ್ಲ.

ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬುದನ್ನು ನಾವು ಈಗಾಗಲೇ ತುಂಬಾ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಸೈಯದ್ ಅಕ್ಬರುದ್ದೀನ್ ಪ್ರತಿಕ್ರಿಯಿಸಿದೆ.

ರಾಹುಲ್ ಗಾಂಧಿ ಜೊತೆ ಹೋಲಿಸಿ ಟ್ವೀಟ್

ರಾಹುಲ್ ಗಾಂಧಿ ಹಾಗೂ ಬಿಲಾವಲ್ ಭುಟ್ಟೋ ಹೋಲಿಸಿ ಟ್ವೀಟ್ ಗಳು ಬಂದಿವೆ.

ರಾಹುಲ್ ಹಾಗೂ ಬಿಲಾವಲ್ ಗೆ ಹೋಲಿಕೆಯಿದೆ

ರಾಹುಲ್ ಹಾಗೂ ಬಿಲಾವಲ್ ಗೆ ಹೋಲಿಕೆಯಿದೆ

ಬಿಲಾವಲ್ ಭುಟ್ಟೋ ಜರ್ದಾರಿ ಇಬ್ಬರ ಜೀವನದಲ್ಲೂ ಒಂದಿಷ್ಟು ಸಾಮ್ಯತೆ ಇದೆ. ಕೇಂಬ್ರಿಡ್ಜ್ ನಲ್ಲಿ ರಾಹುಲ್ ವ್ಯಾಸಂಗ ಮಾಡಿದ್ದರೆ, ಬಿಲಾವಲ್ ಆಕ್ಸ್ ಫರ್ಡ್ ವಿದ್ಯಾರ್ಥಿಯಾಗಿದ್ದರು.

ರಾಹುಲ್ ಅಪ್ಪ ರಾಜೀವ್ ಗಾಂಧಿ ಹಾಗೂ ಬಿಲಾವಲ್ ಅಮ್ಮ ಬೆನಜೀರ್ ಭುಟ್ಟೋ ಇಬ್ಬರು ಹಂತಕರ ಸಂಚಿಗೆ ಬಲಿಯಾದರು. ರಾಹುಲ್ ರಂತೆ ಬಿಲಾವಲ್ ಕೂಡಾ ಪ್ರಜಾಪ್ರಭುತ್ವ, ಯುವಜನಾಂಗದ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ. ದೇಶದ ಚುಕ್ಕಾಣಿ ಹಿಡಿಯಬಲ್ಲ ಭವಿಷ್ಯದ ನಾಯಕರು ಎಂದೇ ಇಬ್ಬರನ್ನು ಬಿಂಬಿಸಲಾಗಿದೆ.

ಪಾಕಿಸ್ತಾನ ಅಧ್ಯಕ್ಷರಾಗಿದ್ದ ಬಿಲಾವಲ್ ಅವರ ಅಪ್ಪ ಅಸಿಫ್ ಅಲಿ ಜರ್ದಾರಿ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ರಾಹುಲ್ ಜೊತೆ ಬಿಲಾವಲ್ ಅವರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು[ವಿವರ ಓದಿ]

ಮೊದಲಿಗೆ ಬಾಂಗ್ಲಾದೇಶ ತೆಗೆದುಕೊಳ್ಳಿ ನೋಡೋಣ

ಮೊದಲಿಗೆ ಬಾಂಗ್ಲಾದೇಶ ತೆಗೆದುಕೊಳ್ಳಿ ನೋಡೋಣ ಆಮೇಲೆ ಕಾಶ್ಮೀರದ ಮಾತು

ಪೀಳಿಗೆ ಬದಲಾದರು ಭುಟ್ಟೋಗಳು ಬದಲಾಗಲ್ಲ

ಪೀಳಿಗೆ ಬದಲಾದರು ಭುಟ್ಟೋಗಳು ಬದಲಾಗಲ್ಲ. ಅಜ್ಜ 1000 ವರ್ಷ ಯುದ್ಧದ ಕನಸು ಕಂಡರೆ, ಅಮ್ಮ ಸ್ವತಂತ್ರದ ಬಗ್ಗೆ ಮಾತನಾಡುತ್ತಿದ್ದರು.

ಮತ್ತೊಂದು ಟ್ವೀಟ್ ನಲ್ಲಿ ರಾಹುಲ್-ಬಿಲಾವಲ್

ಮತ್ತೊಂದು ಟ್ವೀಟ್ ನಲ್ಲಿ ರಾಹುಲ್-ಬಿಲಾವಲ್ ಹೋಲಿಕೆ

ಹೀನಾ ರಬ್ಬಾನಿ ಜೊತೆ ವಿವಾದಲ್ಲಿ ಬಿಲಾವಲ್

ಹೀನಾ ರಬ್ಬಾನಿ ಜೊತೆ ವಿವಾದಲ್ಲಿ ಬಿಲಾವಲ್

ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಹಾಗೂ ಆಸಿಫ್ ಅಲಿ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ಮತ್ತು ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ನಡುವೆ ಅನೈತಿಕ ಸಂಬಂಧವಿದೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರಿಂದ ಪಾಕಿಸ್ತಾನದ ಪ್ರಮುಖ ಪಕ್ಷ ಪೀಪಲ್ಸ್ ಪಾರ್ಟಿ ಭಾರಿ ಮುಜುಗರಕ್ಕೆ ಒಳಗಾಗಿತ್ತು.[ಬಿಲಾವಲ್ ಜೊತೆ ಲವ್, ರಬ್ಬಾನಿಗೆ ಶಿಕ್ಷೆ ]

ಕಿರಣ್ ಬೇಡಿ ಅವರಿಂದ ಟ್ವೀಟ್ ಬಾಣ

ಬಿಲಾವಲ್ ಭುಟ್ಟೋಗೆ ಕಿರಣ್ ಬೇಡಿ ಅವರಿಂದ ಟ್ವೀಟ್ ಬಾಣ

ಕಿರಣ್ ಬೇಡಿ ಅವರಿಂದ ಮತ್ತೊಂದು ಟ್ವೀಟ್

ಕಾಶ್ಮೀರ ಬೇಕೆಂದ ಭುಟ್ಟೋ ಮೇಲೆ ಅನುಕಂಪಭರಿತ ಟ್ವೀಟ್ ಮಾಡಿದ ಬೇಡಿ

ಕಾಶ್ಮೀರ ಎಲ್ಲಿದೆ ಎಂದು ಗೊತ್ತಿದೆಯೇ? ಕೇಳಿ

ಕಾಶ್ಮೀರ ಎಲ್ಲಿದೆ ಎಂದು ಗೊತ್ತಿದೆಯೇ? ಚಿನ್ನದ ಚಮಚದೊಡನೆ ಹುಟ್ಟಿದ ಭುಟ್ಟೋಗೆ ಪ್ರಶ್ನೆ

ಸುಬ್ರಮಣ್ಯ ಸ್ವಾಮಿ ಅವರಿಂದ ತಿರುಗುಬಾಣ

ಕಾಶ್ಮೀರ ಬೇಕೆಂದ ಭುಟ್ಟೋ ಮೇಲೆ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅವರಿಂದ ತಿರುಗುಬಾಣ

English summary
Minutes after news broke out that PPP patron Bilawal Bhutto said that he would 'take every inch of Kashmir back from India,' twitter was abuzz with many mocking Bhutto Jr.We put together a series of comical reactions from the Twitteratti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X