ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂದೆಗೆ ಆಡಳಿತ ಮಂಡಳಿ ಅವಮಾನ, ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಬಿಟೆಕ್ ವಿದ್ಯಾರ್ಥಿ ಶ್ರೀ ಹರ್ಷ ಅವರ ಆತ್ಮಹತ್ಯೆಗೆ ಹೊಸ ತಿರುವು ದೊರೆತಿದೆ.

ತಂದೆಗೆ ಆಡಳಿತ ಮಂಡಳಿ ಅವಮಾನ ಮಾಡಿತ್ತು ಜೊತೆಗೆ ವಿದ್ಯಾರ್ಥಿಯನ್ನು ಅಮಾನತುಗೊಳಿಸಿರಲಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಅಮೃತಾ ವಿಶ್ವ ವಿದ್ಯಾಪೀಠಂ ಕಾಲೇಜಿನ 7ನೇ ಕಟ್ಟಡದಿಂದ ವಿದ್ಯಾರ್ಥಿ ಹಾರಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾವನ್ನಪ್ಪಿದ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತುಗೊಳಿಸಿರಲಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

Twist For Student Suicide Case

ದುರಂತ ನಡೆಯುವ ಮೊದಲು ಉಂಟಾದ ಬೆಳವಣಿಗೆಗಳನ್ನು ವಿವರಿಸಿದ ಮ್ಯಾನೇಜ್‌ಮೆಂಟ್, ಸೆಪ್ಟೆಂಬರ್ 23 ರಂದು ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾದ ಕಾರಣ ಒಂದು ಮುಖ್ಯ ಹಾಸ್ಟೆಲ್‌ಗೆ ನೀರು ಸರಬರಾಜಿನಲ್ಲಿ ಅಡಚಣೆಯಾಗಿತ್ತು.

ಹೀಗಾಗಿ ಹಾಸ್ಟೆಲ್ ಪಕ್ಕದ ಬ್ಲಾಕ್‌ಗಳಲ್ಲಿ ನೀರು ಲಭ್ಯವಿತ್ತು ವಿದ್ಯಾರ್ಥಿಗಳು ಅಲ್ಲಿ ನೀರು ಪಡೆಯಬಹುದಿತ್ತು, ಒಂದು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿದಿತ್ತು, ಆದರೆ ಕೆಲವು ಕಿಡಿಗೇಡಿಗಳು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಪರಿಸ್ಥಿತಿಯ ಲಾಭ ಪಡೆದು, ಕಾಲೇಜು ಕ್ಯಾಂಟಿನ್, ಬಸ್ ಗೆ ಕಲ್ಲು ತೂರಿದ್ದರು ಎಂದು ಹೇಳಿದೆ.

ಈ ಸಂಬಂಧ 7 ಮಂದಿಯ ಸಮಿತಿ ರಚಿಸಿ ತನಿಖೆ ನಡೆಸಿ 19 ಮಂದಿಯನ್ನು ಅಮಾನತುಗೊಳಿಸಲಾಗಿತ್ತು,.ಆದರೆ ಈ ಪಟ್ಟಿಯಲ್ಲಿ ಹರ್ಷ ಹೆಸರಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಬಿಟೆಕ್ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಶ್ರೀ ಹರ್ಷ ಸೋಮವಾರ ಕಾಲೇಜಿನ 7ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು.

ಜೊತೆಗೆ ಆತ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ಜಾಬ್ ಲೆಟರ್ ಅನ್ನು ಕಾಲೇಜು ಆಡಳಿತ ಮಂಡಳಿ ಹರಿದು ಹಾಕಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದೆಲ್ಲಾ ಸುಳ್ಳು ಆರೋಪ ಎಂದಿರು ಕಾಲೇಜು ಮ್ಯಾನೇಜ್ಮೆಂಟ್ ಇದರ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿದೆ ಎಂದು ಹೇಳಿದೆ.

ತಂದೆಗೆ ಕಾಲೇಜು ಆಡಳಿತ ಮಂಡಳಿ ಅವಮಾನ ಮಾಡಿ, ತನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಆದರೆ ಈಗ ಆಡಳಿತ ಮಂಡಳಿ ನೀಡಿರುವ ಹೇಳಿಕೆಯಲ್ಲಿ ಹರ್ಷ ಅವರನ್ನು ಅಮಾನತು ಮಾಡಿರಲಿಲ್ಲ ಎಂದು ಹೇಳಿದೆ. ಹಾಗಾದರೆ ಹರ್ಷ ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾದ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಯಬೇಕಿದೆ.

English summary
Twist For Student Suicide Case. A harassed undergraduate student allegedly committed suicide by jumping from the seventh floor of a college building of Amrita School of Engineering in the city's southern suburb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X