ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಳಿ ಹೆಣ್ಣು ಮಕ್ಕಳ ಅನುಮಾನಾಸ್ಪದ ಸಾವು

By Vanitha
|
Google Oneindia Kannada News

ಬೆಂಗಳೂರು, ಡಿಸೆಂಬರ್, 05: ಡಿಪಿಟಿ ಇಂಜೆಕ್ಷನ್ ಹಾಕಿಸಿಕೊಂಡು ಮನೆಗೆ ಬಂದ ಮರು ದಿನವೇ ಎರಡು ಅವಳಿ ಹೆಣ್ಣು ಮಕ್ಕಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಡಿಸೆಂಬರ್ 4ರ ಶುಕ್ರವಾರ ನಡೆದಿದ್ದು, ಪೋಷಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ತಾನ ಮೂಲದ ಲುನೇಶ್ ಮತ್ತು ಹೇಮಲತಾ ದಂಪತಿಯ ಸಾನ್ವಿ ಮತ್ತು ದಿಶಾ ಸಾವನ್ನಪ್ಪಿದ ಎರಡು ಮುದ್ದಾದ ಅವಳಿ ಮಕ್ಕಳು. ಈ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.[ಇನ್ಮುಂದೆ ಮಕ್ಕಳಿಗೆ ಪೋಲಿಯೋ ಹನಿ ಜೊತೆ ಇಂಜೆಕ್ಷನ್]

Twins girl children died in Bengaluru December 4th

ಬಾಪೂಜಿ ನಗರದ ಬಿಬಿಎಂಪಿ ಆರೋಗ್ಯ ಕೇಂದ್ರಕ್ಕೆ ದಂಪತಿ ಡಿಪಿಟಿ ಇಂಜೆಕ್ಷನ್ ಹಾಕಿಸಲು ತಮ್ಮ ಅವಳಿ ಮಕ್ಕಳನ್ನು ಡಿಸೆಂಬರ್ 3ರ ಗುರುವಾರ ಕರೆದುಕೊಂಡು ಹೋಗಿದ್ದಾರೆ. ಲಸಿಕೆ ಹಾಕಿಸಿಕೊಂಡು ಬಳಿಕ ಮನೆಗೆ ವಾಪಸ್ ಆಗಿದ್ದಾರೆ.

ರಾತ್ರಿಯಿಡೀ ಅಳುತ್ತಾ ನಿದ್ದೆಗೆಟ್ಟ ಮಕ್ಕಳು ಬೆಳಿಗ್ಗೆ ಹಾಲು ಕುಡಿದು ಮಲಗಿದ್ದಾರೆ. ಎಷ್ಟೇ ಹೊತ್ತಾದರೂ ಎದ್ದೇಳದ ಮಕ್ಕಳ ಬಗ್ಗೆ ಅನುಮಾನಗೊಂಡ ತಾಯಿ ಮಕ್ಕಳನ್ನು ಎಬ್ಬಿಸಿದ್ದಾರೆ. ಮಕ್ಕಳಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ಕಂಡ ತಾಯಿ ಕಂಗಾಲಾಗಿ ತಕ್ಷಣ ಸಮೀಪದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ.[ಎಲಿವೇಟರ್ ಬಾಗಿಲಿಗೆ ತಲೆಸಿಕ್ಕಿ ಬಾಲಕಿ ಸಾವು]

ಎಚ್ಚರಗೊಳ್ಳದ ಅವಳಿ ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಬಾಪೂಜಿ ನಗರದ ಬಿಬಿಎಂಪಿ ಆರೋಗ್ಯದ ಮೇಲೆ ಕಿಡಿಕಾರಿದ್ದು ಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 174 ಸಿ ಅಡಿ ಪ್ರಕರಣ ದಾಖಲಾಗಿದೆ.

ಈ ಅವಳಿ ಮಕ್ಕಳ ಸಾವು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು, ತಂದೆ ಲುನೇಶ್ ಗಂಡು ಮಕ್ಕಳ ಆಸೆಗಾಗಿ ಉಸಿರುಗಟ್ಟಿ ಸಾಯಿಸಿರಬಹುದೆಂಬ ಅನುಮಾನ ಮೂಡಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ನೀಡಲು ಕುಟುಂಬದವರು ನಿರಾಕರಿಸಿರುವುದು ಈ ಶಂಕೆಗೆ ಕಾರಣವಾಗಿದೆ. ಅಲ್ಲದೇ ಡಿಪಿಟಿ ಇಂಜೆಕ್ಷನ್ ತೆಗೆದುಕೊಂಡ ಮಕ್ಕಳು ಸಾವನ್ನಪ್ಪಿರುವ ಉದಾಹರಣೆಯೇ ಇಲ್ಲ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.

English summary
Twins Sanvi and Disha children is died in bengaluru December 4th. Both are born in only 4 months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X