• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೊಳ್ಳೆ ದಿನಾಚರಣೆ ಬಗ್ಗೆ ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!

By Mahesh
|

ಬೆಂಗಳೂರು, ಆಗಸ್ಟ್ 20: ವಿಶ್ವ ಸೊಳ್ಳೆ ದಿನಾಚರಣೆ (ಆಗಸ್ಟ್ 20) ಅಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಕೂಡಾ 'ಸೊಳ್ಳೆ ಕಡಿತ' ಅಪಾಯ ಎಂದು ಎಚ್ಚರಿಕೆ ಸಂದೇಶಗಳನ್ನು ಹಾಕಿದ್ದಾರೆ.

ಮಲೇರಿಯಾ, ಡೆಂಘಿ ಸೇರಿದಂತೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ತುರಿಕೆ ತರುವ ಚುಚ್ಚುಮದ್ದು ನೀಡುವ ನೀಳಕಾಯದ ಕೀಟ ಸೊಳ್ಳೆಗೆ ಹೆದರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತದ ಸ್ವಚ್ಛತೆಯ ಬಗ್ಗೆ ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಲಾಗುತ್ತಿದೆ. ಅದರೆ, ಇನ್ನೂ ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಗರ ಪಾಲಿಕೆಗಳಿಗೆ ಸಾಧ್ಯವಾಗುತ್ತಿಲ್ಲ. [ವಿಶ್ವ ಸೊಳ್ಳೆ ದಿನಾಚರಣೆ ಬಗ್ಗೆ ವಿಶೇಷ ಲೇಖನ]

ಮಲೇರಿಯಾ ರೋಗ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಹಬ್ಬುತ್ತದೆ ಎಂದು ರೊನಾಲ್ಡ್ ರಾಸ್ 1897ರಲ್ಲಿ ಕಂಡು ಹಿಡಿದ ದಿನವನ್ನು ಕಳೆದ ನೂರಾರು ವರ್ಷಗಳಿಂದ ವಿಶ್ವದೆಲ್ಲೆಡೆ 'ವಿಶ್ವ ಸೊಳ್ಳೆ ದಿನ' ಎಂದು ಆಚರಿಸಿಕೊಂಡು ಬರಲಾಗುತ್ತಿದೆ. [ಸೊಳ್ಳೆಗಳಿಗೆ ಯಮಪಾಶ]

ಈ ಶೋಧಕ್ಕಾಗಿ ರೊನಾಲ್ಡ್ ರಾಸ್ ಅವರಿಗೆ ನೊಬೆಲ್ ಪಾರಿತೋಷಕವೂ ಲಭ್ಯವಾಗಿತ್ತು. ಈ ದಿನದಂದು ಸೊಳ್ಳೆ ಕಡಿತದ ಲೆಕ್ಕಾಚಾರ, ಸೊಳ್ಳೆ ಕಡಿತದಿಂದ ಬರುವ ರೋಗ ರುಜಿನ, ಸ್ವಚ್ಚತೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದು ಬರುತ್ತಿವೆ.

ಸೊಳ್ಳೆ ದಿನಾಚರಣೆ ಬಗ್ಗೆ ನಾಲ್ಕು ಮಾತು

ಸೊಳ್ಳೆ ದಿನಾಚರಣೆ ಬಗ್ಗೆ ನಾಲ್ಕು ಮಾತು

ಮಲೇರಿಯಾ, ಡೆಂಗ್ಯೂ, ಕಾಮಾಲೆ, ಚಿಕನ್ ಗುನ್ಯಾ ಮುಂತಾದ ರೋಗ ಹರಡಲು ಕಾರಣವಾಗುವ ಸೊಳ್ಳೆಗಳು ನಿಜವಾಗಲು ಮಾನವ ಕುಲಕ್ಕೆ ಘಾತುಕವಾಗಿರುವ ಕೀಟಗಳು.

ಸೊಳ್ಳೆ ಕಡಿತದಿಂದ ಪಾರಾಗಲು ಸಾಧ್ಯವಿಲ್ಲವೇ?

ಸೊಳ್ಳೆ ಕಡಿತದಿಂದ ಪಾರಾಗಲು ಸಾಧ್ಯವಿಲ್ಲವೇ?

ಸೊಳ್ಳೆ ತನ್ನ ಸಂತಾನ ಬೆಳೆಸದಂತೆ ಮನೆ, ಊರು ಕೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ ಪರಿಹಾರ. ಸೊಳ್ಳೆ ಕಡಿತದಿಂದ ಉರಿ, ತುರಿಕೆ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸೊಳ್ಳೆ ಕಡಿತಗಳಿಂದ ನಿರಂತರವಾಗಿ ನೊಂದಿದ್ದರೆ, ಇಲ್ಲಿ ಕೆರೆತ ಮುಂತಾದ ಭಾದೆಗಳಿಂದ ಪರಿಹಾರ ತೋರುವ ಕೆಲವು ಉಪಾಯಗಳು ಇಲ್ಲಿವೆ [ಸೊಳ್ಳೆ ಕಡಿತದಿಂದ ಪಾರಾಗಬೇಕೆ?]

ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!

ಓಹ್ ಇವತ್ತು ಸೊಳ್ಳೆ ದಿನಾಚರಣೆಯಾ? ನಾನು ಪ್ರತಿದಿನ ಸೊಳ್ಳೆ ದಿನ ಎಂದು ತಿಳಿದಿದ್ದೆ.

ಸೊಳ್ಳೆ ದಿನಾಚರಣೆ ಹುಟ್ಟಿಕೊಂಡಿದ್ದರ ಕಥೆ

ಸೊಳ್ಳೆ ದಿನಾಚರಣೆ ಹುಟ್ಟಿಕೊಂಡಿದ್ದರ ಕಥೆಯ ಬಗ್ಗೆ ಟ್ವೀಟ್

ಮೆಸ್ಸಿ ಇಂದ ಮಲೇರಿಯಾ ವಿರುದ್ಧ ಹೋರಾಟ

ಮೆಸ್ಸಿ ಕೂಡಾ ಮಲೇರಿಯಾ ವಿರುದ್ಧ ಹೋರಾಟ ನಡೆಸಲಿದ್ದಾರೆ. ಆಗಸ್ಟ್ 20ರಂದು ಟ್ವಿಟ್ಟರ್ ಗೆ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ನನಗೆ ಇವತ್ತು ಇಷ್ಟು ಸಲ ಸೊಳ್ಳೆ ಕಚ್ಚಿತು

ನನಗೆ ಇವತ್ತು 42 ಸಲ ಸೊಳ್ಳೆ ಕಚ್ಚಿತು ನಿಮಗೆ ಎಷ್ಟು ಸಲ ಕಚ್ಚಿದೆ ಎಂದು ಪ್ರಶ್ನಿಸಿದ ಟ್ವೀಟ್

ಒಂದು ಸಣ್ಣ ಕಡಿತ ಜೀವನವನ್ನೇ ಹಾಳು ಮಾಡಬಹುದು

ಒಂದು ಸಣ್ಣ ಕಡಿತ ಜೀವನವನ್ನೇ ಹಾಳು ಮಾಡಬಹುದು, ಸೊಳ್ಳೆ ಕಡಿತದ ಬಗ್ಗೆ ಎಚ್ಚರ!

ಡೆಂಗ್ಯೂ ಬಗ್ಗೆ ಜಾಗೃತಿ ಟ್ವೀಟ್ಸ್

ಡೆಂಗ್ಯೂ ಬಗ್ಗೆ ಜಾಗೃತಿ ಇರುವ ಟ್ವೀಟ್ಸ್ ಗಳು ಹರಿದಾಡುತ್ತಿವೆ.

ನಾನಾ ಪಾಟೇಕರ್ ಜನಪ್ರಿಯ ಡೈಲಾಗ್

ಸಾಲ, ಏಕ್ ಮಚ್ಚರ್ ಆದ್ಮಿ ಕೋ ಹಿಜ್ಡಾ ಬನಾದೇತಿ ಹೈ

English summary
World Mosquito Day is observed on 20 August to mark the historic discovery by British doctor Sir Ronald Ross in 1897 that malaria is transmitted between humans by female Anopheles mosquitoes.Here are the awareness information via tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more