ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಕೋವಿಡ್-19 ವಿರುದ್ಧ ನಿರ್ಣಾಯಕ ಹೋರಾಟ ನಡೆಸಿರುವ ಕರ್ನಾಟಕ ಸರ್ಕಾರದ ಜೊತೆಗೆ ಟಿವಿಎಸ್ ಮೋಟರ್ಸ್ ಕೈಜೋಡಿಸಿದೆ. ಸರ್ಕಾರದ ಕ್ರಮಗಳನ್ನು ಬೆಂಬಲಿಸುವುದರ ಜೊತೆಗೆ ಕೊರೊನಾ ವಾರಿಯರ್ಸ್ ಗೆ ಅಗತ್ಯವಾಗಿ ಬೇಕಿರುವ ವೈದ್ಯಕೀಯ ಸಾಧನಗಳನ್ನು ಟಿವಿಎಸ್ ಮೋಟರ್ಸ್ ಸಂಸ್ಥೆ ನೀಡಿದೆ.

ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಿಸಿ ಹೊಸ ಮಾರ್ಗಸೂಚಿ ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಿಸಿ ಹೊಸ ಮಾರ್ಗಸೂಚಿ

ಟಿ.ವಿ.ಎಸ್ ಕಂಪನಿಯು ಸುಮಾರು 3,000 ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಈಕ್ವಿಪ್‍ಮೆಂಟ್) ಮತ್ತು 10,000 ಎನ್95 ಮಾಸ್ಕ್ ಗಳನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರಿಸಿತು. ಕಂಪನಿಯು ಇದರ ಜೊತೆಗೆ ನಿಯಮಿತವಾಗಿ ಮಾಸ್ಕ್ ಗಳು, ಗ್ಲೌಸ್‍ಗಳು, ಸಿದ್ಧ ಆಹಾರದ ಪ್ಯಾಕೆಟ್‍ಗಳು, ಅಗತ್ಯ ವಸ್ತುಗಳನ್ನು ಪೊಲೀಸ್ ಸಿಬ್ಬಂದಿ, ಆರೋಗ್ಯ ಸೇವೆಯ ಕಾರ್ಯಕರ್ತರು ಮತ್ತು ವಲಸೆ ಜನರಿಗೆ ವಿತರಿಸುತ್ತಿದೆ. ಟಿ.ವಿ.ಎಸ್ ಮೋಟಾರ್ ಇದರ ಜೊತೆಗೆ ಸೋಂಕು ನಿವಾರಕಗಳ ಸಿಂಪಡೆಣೆಗೆ ಬೆಂಗಳೂರಿನ ಹೊರವಲಯದಲ್ಲಿ ವಿವಿಧ ವಾಹನಗಳನ್ನು ಸಹಾ ನಿಯೋಜಿಸಿದೆ.

TVS Motor Company handover of PPEs and Masks to CM BS Yediyurappa

ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ (ಎಸ್‍ಎಸ್‍ಟಿ) ಎಂಬುದು ಟಿ.ವಿ.ಎಸ್ ಮೋಟಾರ್ ಕಂಪನಿಯ ಸಾಮಾಜಿಕ ಸೇವಾ ವಿಭಾಗವಾಗಿದ್ದು, ಇಂದು ಸುಮಾರು 10,000ಕ್ಕೂ ಅಧಿಕ ಮಾಸ್ಕ್ ಗಳನ್ನು ಮತ್ತು 3,000ಕ್ಕೂ ಅಧಿಕ ಗ್ಲೌಸ್‍ಗಳನ್ನು ಈ ಮುಂಚೆ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ವೆಂಕಟೇಶ್ ಅವರಿಗೆ ಹಸ್ತಾಂತರಿಸಿದೆ.

10 ಲಕ್ಷ ಮಾಸ್ಕ್ ಗಳನ್ನು ಅಗತ್ಯ ಸೇವಾ ಕ್ಷೇತ್ರದ ಕಾರ್ಯಕರ್ತರು, ಆರೋಗ್ಯ ಸೇವಾ ಸಿಬ್ಬಂದಿ, ಪೊಲೀಸರಿಗೆ ವಿತರಿಸಲು ಉದ್ದೇಶಿಸಲಾಗಿದೆ. ಕೋವಿಡ್-19 ರೋಗ ಹಬ್ಬದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಂಸ್ಥೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿದೆ.

{quiz_44}

English summary
TVS Motor Company facilitated the handover of PPEs and Masks to Karnataka CM B.S. Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X