ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಿಸಿಇ ಅಲುಮ್ನಿಯಿಂದ 200 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್

|
Google Oneindia Kannada News

ಬೆಂಗಳೂರು ಡಿಸೆಂಬರ್ 2: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಮೋಹನದಾನ ಪೈ ಹೇಳಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುವಿಸಿಇ ಹಳೆಯ ವಿದ್ಯಾರ್ಥಿಗಳ ಫೌಂಡೇಶನ್ ವತಿಯಿಂದ 200 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಂಬಿಎಗಿಂತ ನೌಕರಿಗೆ ಎಂಜಿನಿಯರಿಂಗ್ ಬೆಸ್ಟ್: ಸಮೀಕ್ಷೆ ಎಂಬಿಎಗಿಂತ ನೌಕರಿಗೆ ಎಂಜಿನಿಯರಿಂಗ್ ಬೆಸ್ಟ್: ಸಮೀಕ್ಷೆ

ನಮ್ಮ ದೇಶಕ್ಕೆ ವಿಶ್ವೇಶ್ಯರಯ್ಯ ಅವರು ನೀಡಿದ ಕೊಡುಗೆ ಅಪಾರ. ಅಂತಹ ಮಹನೀಯರು ಸ್ಥಾಪಿಸಿದ ಇಂಜಿನೀಯಿರಿಂಗ್ ಕಾಲೇಜಿನಲ್ಲಿ ಒದುವುದು ಒಂದು ಹೆಮ್ಮೆಯ ವಿಷಯ ಎಂದರು. ಭಾರತದ ಶ್ರೇಷ್ಠ ಇಂಜಿನೀಯರುಗಳನ್ನು ನೀಡಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನಕ್ಕೆ ಬಹಳ ಮಹತ್ವ ನೀಡುತ್ತಾ ಬಂದಿದ್ದೇವೆ. ಮಹಾನ್ ರಾಜರುಗಳೂ ಕೂಡಾ ತಮ್ಮ ಆಸ್ಥಾನದಲ್ಲಿ ಗುರುವಿಗೆ ಬಹಳ ಎತ್ತರದ ಸ್ಥಾನವನ್ನು ನೀಡುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರು.

ಮಾನವರೂ ಕೂಡಾ ಪ್ರಾಣಿಗಳೇ, ಆದರೆ ನಮ್ಮನ್ನು ಇತರೇ ಪ್ರಾಣಿಗಳಿಂದ ಬೇರ್ಪಡಿಸುವುದು ಕೇವಲ ಜ್ಞಾನ ಮಾತ್ರ. ಏಕೆಂದರೆ ಜ್ಞಾನ ಮಾನವನನ್ನು ಸ್ವತಂತ್ರಗೊಳಿಸುತ್ತದೆ. ಅಲ್ಲದೆ ಮಾನವನ ಮನಸ್ಸನ್ನು ಶಕ್ತಗೊಳಿಸುತ್ತದೆ. ಜ್ಞಾನದ ಬಲದಿಂದಲೇ ಮಹಾನ್ ನಾಗರೀಕತೆಗಳೂ ಬೆಳೆದಿವೆ.

ಇಂಜಿನಿಯರಿಂಗ್ ಓದಬಯಸುವ ಬಡ ವಿದ್ಯಾರ್ಥಿನಿಯರಿಗಾಗಿ 'ಉಡಾನ್'
ಅಲ್ಲದೆ, ಈಗಿನ ಬಲಿಷ್ಠ ದೇಶಗಳ ಅಭಿವೃದ್ದಿಯ ಶಿಖರಕ್ಕೇರಿರುವುದು ಕೇವಲ ಸೈನ್ಯದ ಬಲದಿಂದ ಅಲ್ಲ. ಅಮೇರಿಕಾದಂತಹ ನಂ 1 ದೇಶ ಆ ಪಟ್ಟಕ್ಕೆ ಏರಿರುವುದು ಅಲ್ಲಿನ ವಿಶ್ವವಿದ್ಯಾಲಯಗಳಿಂದ. ಇದೇ ರೀತಿ ಬ್ರಿಟನ್, ಜಪಾನ್ ಹಾಗೂ ಇಸ್ರೇಲ್ ನಂತಹ ದೇಶಗಳು ತಮ್ಮ ಜ್ಞಾನದ ಬಲದಿಂದ ಬಹಳಷ್ಟನ್ನು ಸಾಧಿಸಿವೆ ಎಂದರು.

ಈ ನಿಟ್ಟಿನಲ್ಲಿ ನಮ್ಮ ಸರಕಾರಗಳು ನಮ್ಮ ದೇಶದ ಜನರನ್ನು ಅಭಿವೃದ್ದಿಗೊಳಿಸುವತ್ತ ತಮ್ಮ ಹೂಡಿಕೆಯನ್ನು ಮಾಡುವ ಅಗತ್ಯವಿದೆ. ಉತ್ತಮ ಶಿಕ್ಷಣ ನಮ್ಮ ಯುವಕರಿಗೆ ದೊರೆಯುವಂತಾಗಬೇಕಾಗಿದೆ. ಅಲ್ಲದೆ, ಕನಸು ಕಾಣವಂತಹ ಸ್ವತಂತ್ರ ಹಾಗೂ ಅವುಗಳನ್ನು ನನಸುಗೊಳಿಸುವಂತಹ ಪರಿಸರವನ್ನು ನಿರ್ಮಿಸುವತ್ತ ಗಮನಹರಿಸಬೇಕಾಗಿದೆ ಎಂದರು.

ಶಿಕ್ಷಣದ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದೆ

ಶಿಕ್ಷಣದ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದೆ

ಪ್ರಸಕ್ತ ದಿನಗಳಲ್ಲಿ ಶಿಕ್ಷಣದ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದೆ. ಅಂದರೆ ತಮಿಳುನಾಡಿನಲ್ಲಿ ಶೇಕಡಾ 47 ರಷ್ಟು ಇರುವ ಶಿಕ್ಷಣದ ಪ್ರಮಾಣ ರಾಜ್ಯದಲ್ಲಿ ಕೇವಲ ಶೇಕಡಾ 30 ರಷ್ಟಿದೆ. ಹಾಗಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.

ಸಮಾಜದ ಎಲ್ಲಾ ವರ್ಗದ ಜನರಿಗೂ ವಿದ್ಯಾಭ್ಯಾಸ ಸಿಗಲು ಆರ್ಥಿಕ ನೆರವು ಸೇರಿದಂಥೆ ಯಾವುದೇ ರೂಪದಲ್ಲಾದರೂ ಸಹಾಯ ಮಾಡುವ ಅವಶ್ಯಕತೆ ಇದೆ. ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ವಿದ್ಯಾವಂತರಿಗೆ ಸಾಕಷ್ಟು ಗೌರವ ಸಿಗುತ್ತದೆ. ವಿದ್ಯಾವಂತರನ್ನಾಗಿಸುವುದು ನಮ್ಮ ಸಮಾಜದ ಕರ್ತವ್ಯ ಎಂದು ಹೇಳಿದರು.

ಮುಂದಿನ 15 ವರ್ಷಗಳಲ್ಲಿ ಆರ್ಟಿಫೀಷಿಯಲ್ ಇಂಟಲಿಜೆನ್ಸ್, ರೋಬೋಟಿಕ್ಸ್, 3 ಡಿ ಪ್ರಿಂಟಿಂಗ್ ಸೇರಿದಂತೆ ಹಲವು ಕ್ಷೇತ್ರಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿವೆ. ಇಂತಹ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚಿನದನ್ನು ಕಲಿಯಲು ಸಾಧ್ಯವಾಗುವಂತಹ ಸೆಂಟರ್ ಫಾರ್ ಎಕ್ಸಲೆನ್ಸ್ ಯುವಿಸಿಇ ಆಗಬೇಕಾಗಿದೆ ಎಂದರು.

ಬೆಂಗಳೂರು ವಿವಿ ಉಪ ಕುಲಪತಿ ಡಾ ವೇಣುಗೋಪಾಲ್ ಕೆ ಆರ್

ಬೆಂಗಳೂರು ವಿವಿ ಉಪ ಕುಲಪತಿ ಡಾ ವೇಣುಗೋಪಾಲ್ ಕೆ ಆರ್

ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ ವೇಣುಗೋಪಾಲ್ ಕೆ ಆರ್ ಮಾತನಾಡಿ, ಯುವಿಸಿಇ ಕಾಲೇಜಿಗೆ ಡೀಮ್ಡ್ ಯೂನಿವರ್ಸಿಟಿಯ ಮಾನ್ಯತೆ ದೊರೆಸಲು ಸರಕಾರದ ಮಟ್ಟದಲ್ಲಿ ಈಗಾಗಲೇ ಮಾತುಕತೆ ಪ್ರಾರಂಭವಾಗಿದೆ. ಯುವಿಸಿಇ ಫೌಂಡೇಶನ್ ಅಡಿಯಲ್ಲಿ 1 ಕೋಟಿ ರೂಪಾಯಿಗಳಿಗೂ ಹೆಚ್ಚು ಅನುದಾನ ನೀಡುವ ಮೂಲಕ ಕಂಪ್ಯೂಟರ್ ಲ್ಯಾಬ್ ಅನ್ನು ಉನ್ನತಿಕರಿಸುತ್ತಿರುವುದು ಸಂತಸದ ವಿಷಯ ಎಂದರು.

ಕ್ಯಾರಿ ಓವರ್ ವ್ಯವಸ್ಥೆ ಬದಲಾಯಿಸಿದ ವಿಟಿಯುಕ್ಯಾರಿ ಓವರ್ ವ್ಯವಸ್ಥೆ ಬದಲಾಯಿಸಿದ ವಿಟಿಯು

ಯುವಿಸಿಇ ಫೌಂಡೇಷನ್‍ನ ಅಧ್ಯಕ್ಷ ಜಗದೀಶ್

ಯುವಿಸಿಇ ಫೌಂಡೇಷನ್‍ನ ಅಧ್ಯಕ್ಷ ಜಗದೀಶ್

ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದ ಯುವಿಸಿಇ ಫೌಂಡೇಷನ್‍ನ ಅಧ್ಯಕ್ಷ ಜಗದೀಶ್ ಅವರು, ಈ ವರ್ಷ ದಾಖಲೆ ಪ್ರಮಾಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವುದು ಸಂತಸ ತಂದಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿ ವೇತನವನ್ನು ದೇಶದ ಯಾವುದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘಗಳು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಿನ ಹಸ್ತ ಚಾಚಿರುವ ಎಲ್ಲಾ ದಾನಿಗಳಿಗೆ ಮತ್ತು ಯುವಿಸಿಇಗೆ ನಾನು ಆಭಾರಿಯಾಗಿದ್ದೇನೆ. ನಾವು ಸಮಾಜದಿಂದ ಪಡೆದದ್ದನ್ನು ಅದೇ ಸಮಾಜಕ್ಕೆ ವಾಪಸ್ ನೀಡಲು ಇದು ಸಕಾಲವಾಗಿದೆ. ಇದು ಕೇವಲ ಸಮಾಜಕ್ಕಷ್ಟೇ ಅಲ್ಲ, ಮುಂದಿನ ಪೀಳಿಗೆಗೆ ನೀಡುವ ಕೊಡುಗೆಯಾಗಿದೆ ಎಂದು ಹೇಳಿದರು.

ದೀಪಿಕಾ ಸದಾನಂದ ಅವರು ಮಾತನಾಡಿ

ದೀಪಿಕಾ ಸದಾನಂದ ಅವರು ಮಾತನಾಡಿ

ಯುವಿಸಿಇನಲ್ಲಿ ನಾಲ್ಕು ವರ್ಷಗಳ ಕಾಲ ವ್ಯಾಸಂಗ ಮಾಡಿ ಆರ್ಕಿಟೆಕ್ಚರ್‍ನಲ್ಲಿ ಗೋಲ್ಡ್‍ಮೆಡಲಿಸ್ಟ್ ಆಗಿ ಈ ಹಿಂದೆ ಈ ಶಿಷ್ಯವೇತನವನ್ನು ಪಡೆದಿದ್ದ ದೀಪಿಕಾ ಸದಾನಂದ ಅವರು ಮಾತನಾಡಿ, ನನ್ನ ಯುವಿಸಿಇ ಫೌಂಡೇಶನ್ ನೀಡಿದ ವಿದ್ಯಾರ್ಥಿ ವೇತನವನ್ನು ನಾನು ಎಂದಿಗೂ ಮರೆಯುವಂತಿಲ್ಲ. ಈ ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದಲೇ ಹಣಕಾಸಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ನನ್ನ ಗುರಿಯ ಮೇಲೆ ಗಮನಹರಿಸಲು ಸಾಧ್ಯವಾಯಿತು. ಅದಲ್ಲದೇ, ವ್ಯಾಸಂಗಕ್ಕಾಗಿ ತಗುಲುತ್ತಿದ್ದ ವೆಚ್ಚವನ್ನು ನನ್ನ ಪೋಷಕರಿಗೆ ಭರಿಸಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಫೌಂಡೇಶನ್‍ನಿಂದ ದೊರೆತ ವಿದ್ಯಾರ್ಥಿ ವೇತನ ನನ್ನ ವ್ಯಾಸಂಗಕ್ಕೆ ನೆರವಾಯಿತು'' ಎಂದು ಹೇಳಿದರು.

ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ! ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!

ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಕಾಲೇಜನ್ನು ಆರಂಭಿಸಿದ್ದು

ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಕಾಲೇಜನ್ನು ಆರಂಭಿಸಿದ್ದು

ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿರುವ ಫೌಂಡೇಶನ್‍ನ ಅಧ್ಯಕ್ಷ(ಭಾರತ) ಮಾಧವ ಅವರು, ಬೆಂಗಳೂರಿನಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್(ಯುವಿಸಿಇ)ಯನ್ನು 1917 ರಲ್ಲಿ ಆರಂಭಿಸಲಾಯಿತು. ಆಗ ಇದರ ಹೆಸರು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂದಾಗಿತ್ತು.

ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಕಾಲೇಜನ್ನು ಆರಂಭಿಸಿದ್ದು, ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿತ್ತು. ದೇಶದಲ್ಲಿ ಆಗಿನ ಕಾಲಕ್ಕೆ ಐದನೇ ಎಂಜಿನಿಯರಿಂಗ್ ಕಾಲೇಜು ಇದಾಗಿತ್ತು. ಇದೀಗ 99 ವರ್ಷ ಪೂರೈಸಿ ಶತಮಾನದತ್ತ ದಾಪುಗಾಲು ಹಾಕಿರುವ ಈ ಕಾಲೇಜು ಇಡೀ ದೇಶದಲ್ಲಿ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದೇಶ ಕಂಡ ಅತ್ಯುತ್ತಮ ಎಂಜಿನಿಯರ್‍ಗಳನ್ನು ರೂಪಿಸಿದ ಹೆಗ್ಗಳಿಕೆಯೂ ಈ ಕಾಲೇಜಿಗಿದೆ ಎಂದು ತಿಳಿಸಿದರು.

ಯುವಿಸಿಇ ಅಲುಮ್ನಿ ಫೌಂಡೇಶನ್ ಗೆ 7 ವರ್ಷ

ಯುವಿಸಿಇ ಅಲುಮ್ನಿ ಫೌಂಡೇಶನ್ ಗೆ 7 ವರ್ಷ

ಯುವಿಸಿಇ ಅಲುಮ್ನಿ ಫೌಂಡೇಶನ್ ಆರಂಭವಾಗಿ 7 ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ. ಇದಕ್ಕಾಗಿ ಧನ ಸಂಗ್ರಹಕ್ಕಾಗಿ ವಿಶೇಷವಾಗಿ ಅಮೇರಿಕಾದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರ್ಥಿಕ ನೆರವು ಅಗತ್ಯವಿರುವ, ವಿದ್ಯಾರ್ಥಿಗಳ ಕುಟುಂಬ ಪರಿಸ್ಥಿತಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಪ್ರತಿಭೆಗಳ ಮಾನದಂಡದ ಮೇಲೆ ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಳೆದ ಆರು ವರ್ಷಗಳಿಂದ ಬೆಂಗಳೂರು ದಕ್ಷಿಣ ರೋಟರಿ ಫೌಂಡೇಶನ್ ಜೊತೆಗೆ ಕೈಜೋಡಿಸಿದೆ ಎಂದರು.

English summary
Scholarships worth Rs 25 lakh were distributed to over 200 students of University Visvesvaraya College of Engineering. The scholarships were distributed at a function held at Jnana Jyothi Auditorium by UVCE Foundation, a philanthropic organization formed by UVCE alumni in USA and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X