ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೊಟ್ಟ ಮೊದಲ ಟಿಟಿಎಫ್ ಟ್ರಾವೆಲ್ ಶೋ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಬೆಂಗಳೂರಿನಲ್ಲಿ ಟಿಟಿಎಫ್ ಸಮ್ಮರ್ ನಡೆಯುತ್ತಿದೆ. ಫೆಬ್ರವರಿ 15 ರಿಂದ 17 ರವರೆಗೆ ಈ ಪ್ರದರ್ಶನ ನಡೆಯಲಿದೆ. ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ಇದೊಂದು ದೊಡ್ಡ ಟಿಟಿಎಫ್ ಟ್ರಾವೆಲ್ ಶೋ ಆಗಿದ್ದು, ಇಲ್ಲಿ ಟ್ರಾವೆಲ್ ವ್ಯವಹಾರಸ್ಥರು ಒಂದೆಡೆ ಸೇರಿ ತಮ್ಮ ಟ್ರಾವೆಲ್ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ.

ಭಾರತಾದ್ಯಂತ ಟ್ರಾವೆಲ್ ವ್ಯವಹಾರಗಳಿಗೆ ಒಂದೇ ಸೂರಿನಡಿ ಪರಸ್ಪರ ಸಂಪರ್ಕ ಸಾಧಿಸಲು ಮತ್ತು ವ್ಯವಹಾರಗಳನ್ನು ನಡೆಸಲು ಈ ಟಿಟಿಎಫ್ ಸಮ್ಮರ್-ಬೆಂಗಳೂರು ಒಂದು ವೇದಿಕೆಯಾಗಿದೆ. 9 ದೇಶಗಳು ಮತ್ತು ಭಾರತದ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 165 ಪ್ರದರ್ಶಕರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಈ ಸಮಾವೇಶಕ್ಕೆ 10,000 ಕ್ಕೂ ಅಧಿಕ ವೀಕ್ಷಕರು ಮತ್ತು ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆಗಳಿವೆ. ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರವಾಸೋದ್ಯಮ ಮಂಡಳಿಗಳು, ನ್ಯಾಷನಲ್ ಟೂರಿಸ್ಟ್ ಆರ್ಗನೈಸೇಷನ್‍ಗಳು, ಖಾಸಗಿ ಪೂರೈಕೆದಾರರು, ವಾಣಿಜ್ಯ ಸಂಘಗಳು ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳು ಈ ಮೂರು ದಿನಗಳ ಸಮಾವೇಶಕ್ಕೆ ಬೆಂಬಲ ನೀಡುತ್ತಿವೆ.

ನೇಪಾಳ ಈ ಸಮಾವೇಶದ ಪಾಲುದಾರ ರಾಷ್ಟ್ರ

ನೇಪಾಳ ಈ ಸಮಾವೇಶದ ಪಾಲುದಾರ ರಾಷ್ಟ್ರ

ನೇಪಾಳ ಈ ಸಮಾವೇಶದ ಪಾಲುದಾರ ರಾಷ್ಟ್ರವಾಗಿದ್ದು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಟಿಟಿಎಫ್ ಸಮ್ಮರ್ ಬೆಂಗಳೂರಿನ ಪಾಲುದಾರ ರಾಜ್ಯಗಳಾಗಿವೆ. ಇದಲ್ಲದೇ, ಆತಿಥೇಯ ಕರ್ನಾಟಕ ರಾಜ್ಯದ ವರ್ಣರಂಜಿತ ಉಪಸ್ಥಿತಿಯೂ ಇರಲಿದೆ. ರಾಜ್ಯಗಳ ಪ್ರವಾಸೋದ್ಯಮ ಮಂಡಳಿಗಳು, ಟಿಟಿಎಫ್ ಬೆಂಗಳೂರಿನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು, ಅಂಡಮಾನ್ & ನಿಕೋಬಾರ್, ಆಂಧ್ರಪ್ರದೇಶ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಪ್ರವಾಸೋದ್ಯಮ ಮಂಡಳಿಗಳು ಪ್ರಮುಖವಾಗಿ ಪಾಲ್ಗೊಂಡಿವೆ.

ಟಿಟಿಎಫ್ ಸಮ್ಮರ್ ಬೆಂಗಳೂರಿನಲ್ಲಿ ವಿವಿಧ ದೇಶಗಳು

ಟಿಟಿಎಫ್ ಸಮ್ಮರ್ ಬೆಂಗಳೂರಿನಲ್ಲಿ ವಿವಿಧ ದೇಶಗಳು

ಭಾರತದ ಇನ್ನಿತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮೇಘಾಲಯ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಟ್ರಾವೆಲ್ ಪೂರೈಕೆದಾರ ಸಂಸ್ಥೆಗಳು ಪಾಲ್ಗೊಳ್ಳಲಿವೆ. ನ್ಯಾಷನಲ್ ಟೂರಿಸ್ಟ್ ಆರ್ಗನೈಸೇಷನ್ಸ್ ಆಫ್ ಇಂಡಿಯಾ ಮತ್ತು ನೇಪಾಳ ದೇಶಗಳು ಈ ಟಿಟಿಎಫ್ ಸಮ್ಮರ್ ಬೆಂಗಳೂರಿನಲ್ಲಿ ಪಾಲ್ಗೊಳ್ಳುತ್ತಿದ್ದರೆ, ಭೂತಾನ್, ಗ್ರೀಸ್, ಮಲೇಷ್ಯಾ, ಸಿಂಗಾಪುರ, ಸ್ವಿಟ್ಜರ್ಲೆಂಡ್, ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‍ಡಂ ದೇಶಗಳನ್ನು ಡೆಸ್ಟಿನೇಷನ್ ಮ್ಯಾನೇಜ್‍ಮೆಂಟ್ ಕಂಪನಿಗಳು(ಡಿಎಂಸಿಗಳು), ಟ್ರಾವೆಲ್ ಆಪರೇಟರ್ಸ್ ಮತ್ತು ಹೊಟೇಲ್ ಬ್ರ್ಯಾಂಡ್‍ಗಳು ಪ್ರತಿನಿಧಿಸುತ್ತಿವೆ.

ವಿವಿಧ ವಿಮಾನಯಾನ ಸಂಸ್ಥೆಗಳು

ವಿವಿಧ ವಿಮಾನಯಾನ ಸಂಸ್ಥೆಗಳು

ಸ್ವಿಸ್ ಟೂರ್ಸ್/ಟೂರ್ ಫಾಕ್ಸ್, ರವೀಝ್ ಹೊಟೇಲ್, ಯೆಟಿ ಏರ್ ಲೈನ್ಸ್. ನಫೆಕ್ಸ್ ಬ್ಯೂರೋ ಪ್ರೈವೇಟ್ ಲಿಮಿಟೆಡ್, ಟ್ರಿಪ್ ಟು ಟೆಂಪಲ್ಸ್, ಕ್ಲಬ್ 69 ಎಸ್ಟ್ರೆಲಾ ಡು ಮಾರ್ ಬೀಚ್ ರೆಸಾರ್ಟ್, ಮಾರಿಕ್‍ಕ್ಯಾಪ್ ರೆಸಾರ್ಟ್, ಬೆಸ್ಟ್ ವೆಸ್ಟರ್ನ್ ಮೇರಿಲ್ಯಾಂಡ್/ರಾಡಿಸನ್ ಚಂಡೀಘಡ, ಬಿಗ್ ಬ್ರೇಕ್ಸ್, ಸ್ಪೈಸ್‍ಲ್ಯಾಂಡ್ ಹಾಲಿಡೇಸ್ & ಎಂಟರ್ ಟೇನ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಕ್ವಾಲಿಟಿ ಹಾಲಿಡೇಸ್ ಅಂಡ್ ಕಾರ್ಸ್ ಪ್ರೈವೇಟ್ ಲಿಮಿಟೆಡ್, ಜರ್ನಿ ಟು ಲಡಾಕ್, ನೀಮ್ ಹಾಲಿಡೇಸ್, ಮೇಕ್ ಮೈ ಟ್ರಿಪ್, ಬಿಕತ್ ಅಡ್ವೆಂಚರ್ಸ್ ಅಂಡ್ ವರ್ಲ್ಡ್ ಟೂರ್ಸ್‍ನಂಥ ಪ್ರಮುಖ ಪ್ರದರ್ಶಕ ಸಂಸ್ಥೆಗಳು ಪಾಲ್ಗೊಂಡಿವೆ.

'ಅರೌಂಡ್ ದಿ ವರ್ಲ್ಡ್ ಇನ್ 360’

'ಅರೌಂಡ್ ದಿ ವರ್ಲ್ಡ್ ಇನ್ 360’

ಜಿಯೋ ಸ್ಟುಡಿಯೋಸ್ ವಿನೂತನವಾದ ವರ್ಚುವಲ್ ರಿಯಾಲಿಟಿ 'ಅರೌಂಡ್ ದಿ ವರ್ಲ್ಡ್ ಇನ್ 360'ಯನ್ನು ಪ್ರಸ್ತುತಪಡಿಸಲಿದೆ. ಈ ಮೂಲಕ ಟ್ರಾವೆಲರ್ ಗಳಿಗೆ ಅತ್ಯುತ್ತಮವಾದ ಪ್ರವಾಸಿ ತಾಣಗಳನ್ನು ಪರಿಚಯಿಸಲಿದೆ. ಅಹ್ಮದಾಬಾದ್, ಬೆಂಗಳೂರಿನ ಮತ್ತು ಚೆನ್ನೈನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಟಿಟಿಎಫ್ ಸಮ್ಮರ್ ನಂತರ ಫೆಬ್ರವರಿ 22-24 ರವರೆಗೆ ಕೊಲ್ಕತ್ತಾದಲ್ಲಿ ನಡೆಯಲಿದೆ.

 ಫೆ.16ರಂದು ಎಲ್ಲರಿಗೂ ಮುಕ್ತ ಅವಕಾಶವಿದೆ

ಫೆ.16ರಂದು ಎಲ್ಲರಿಗೂ ಮುಕ್ತ ಅವಕಾಶವಿದೆ

ಪ್ರದರ್ಶನದ ಮೊದಲ ದಿನ 2019 ನೇ ಸಾಲಿನ ಬೆಂಗಳೂರಿನ ಭಾರತದ ಟಾಪ್ 100 ಟ್ರಾವೆಲ್ ಪ್ರಡ್ಯೂಸರ್ಸ್ ಪ್ರಶಸ್ತಿ ಗೆದ್ದವರನ್ನು ಸನ್ಮಾನಿಸಲಾಗುತ್ತದೆ. ಇದಲ್ಲದೇ, ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಒಟಿಎಂ 2019 ಪ್ರಶಸ್ತಿಗಳನ್ನು ಪಡೆಯದಿರುವವರು ಬೆಂಗಳೂರಿನ ಈ ಟಿಟಿಎಫ್ ಸಮ್ಮರ್ ನಲ್ಲಿ ಪಡೆಯಬಹುದಾಗಿದೆ. ಮೊದಲ ದಿನ ಟ್ರಾವೆಲ್ ಟ್ರೇಡ್ ವೀಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಫೆಬ್ರವರಿ 16 ರಿಂದ ಟಿಟಿಎಫ್ ಸಮ್ಮರ್ ಬೆಂಗಳೂರಿಗೆ ಎಲ್ಲರಿಗೂ ಮುಕ್ತ ಅವಕಾಶವಿದೆ.

English summary
TTF, the biggest travel show network in India since the last 30 years is all set for city's travel trade and tourists to meet exhibitors from all over India and abroad, at Bengaluru's Palace Ground. Travel businesses across India and abroad will connect under one roof at TTF Bengaluru for a face to face interaction at Palace Grounds, Tripuravasini.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X