ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೀಡಾಳುಗಳಿಗೆ ವಿಶೇಷ ರೀತಿಯ ಚಿಕಿತ್ಸೆ ನೀಡಿ: ಅಂಜುಬಾಬಿ ಜಾರ್ಜ್‌ ಮನವಿ

|
Google Oneindia Kannada News

ಬೆಂಗಳೂರು ಮಾರ್ಚ್‌ 04: ಕ್ರೀಡಾಳುಗಳಿಗೆ ವಿಶೇಷ ರೀತಿಯ ಚಿಕಿತ್ಸೆ ಅಗತ್ಯವಿದ್ದು, ವೈದ್ಯರು ವಿಶೇಷ ರೀತಿಯಲ್ಲಿ ಅವರನ್ನು ನೋಡಿಕೊಳ್ಳಬೇಕು ಎಂದು ಪದ್ಮಶ್ರೀ ಮತ್ತು ಅರ್ಜನ ಪ್ರಶಸ್ತಿ ವಿಜೇತ ಕ್ರೀಡಾಪಟು ಅಂಜು ಬಾಬಿ ಜಾರ್ಜ್‌ ಅಭಿಪ್ರಾಯಪಟ್ಟರು.

ಇಂದು ಬೆಂಗಳೂರು ನಗರದಲ್ಲಿ ಟ್ರಸ್ಟ್‌ವೆಲ್‌ ಆಸ್ಪತ್ರೆಯಲ್ಲಿ ಅಸ್ಥಿ ಮತ್ತು ಮೂಳೆ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಟ್ರಸ್ಟ್‌ ವೆಲ್‌ ಇನ್ಸಿಟ್ಯೂಟ್‌ ಫಾರ್‌ ಮುಸ್ಕಲೋ ಸ್ಕೇಲಿಟಲ್‌ ಸೈನ್ಸಸ್‌ (TWIMS) ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕಿತ್ಸಾ ಕೇಂದ್ರದ ಉದ್ಘಾಟನೆಯನ್ನು ಎಡಿಜಿಪಿ ಡಾ. ಎಂ.ಎ. ಸಲೀಮ್‌ - ಐಪಿಎಸ್‌, ವಿಧಾನಪರಿಷತ್‌ ಸದಸ್ಯೆ ತಾರಾ ಅನುರಾಧ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಶ್ರೀಮತಿ ಅಂಜು ಬಾಬಿ ಜಾರ್ಜ್‌ ನಡೆಸಿಕೊಟ್ಟರು.

Trustwell Institute For Musculoskeletal Sciences Innaugurated

ನಂತರ ಮಾತನಾಡಿದ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಅಂಜು ಬಾಬಿ ಜಾರ್ಜ್‌ ನಾನು ನನ್ನ ಕ್ರೀಡಾ ಜೀವನದ ಪ್ರಮುಖ ಘಟ್ಟದಲ್ಲಿ ಇದ್ದಾಗ ಆದ ಅವಘಡದಿಂದ ಒಂದು ವರ್ಷ ಪರಿತಪಿಸಬೇಕಾಯಿತು. ವೈದ್ಯರು ನಾನು ಮತ್ತೊಮ್ಮೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಒಂದು ವರ್ಷದ ನಂತರ ಛಲ ಬಿಡದೆ ನೋವಿನಲ್ಲೂ ಅಭ್ಯಾಸ ಮುಂದುವರೆಸಿದೆ. ಆ ಸಂಧರ್ಭದಲ್ಲಿ ಸ್ಪೋರ್ಟ್ಸ್‌ ಇಂಜುರಿ ರಿಹ್ಯಾಬಲಿಟಿ ಮ್ಯಾನೇಜ್‌ಮೆಂಟ್‌ ಮಾಡುವ ವೈದ್ಯರು ಬೆಂಗಳೂರಿನಲ್ಲಿ ಇರಲಿಲ್ಲ. ಈಗ ಬೆಂಗಳೂರಿನಲ್ಲಿ ಟ್ರಸ್ಟ್‌ವೆಲ್‌ ನಂತಹ ಆಸ್ಪತ್ರೆಗಳು ಸ್ಪೋರ್ಟ್ಸ್‌ ಇಂಜರಿ ಮ್ಯಾನೇಜ್‌ಮೆಂಟ್‌ ಮಾಡುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ವೈದ್ಯರುಗಳೂ ಕೂಡಾ ಕ್ರೀಡಾ ಪಟುಗಳನ್ನು ಜನಸಾಮಾನ್ಯರಂತೆ ಚಿಕಿತ್ಸೆ ಮಾಡದೇ ಸ್ವಲ್ಪ ವಿಶೇಷ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.

Trustwell Institute For Musculoskeletal Sciences Innaugurated

ಈ ಸಂದರ್ಭದಲ್ಲಿ ಟ್ವಿಮ್ಸ್‌ ಚಿಕಿತ್ಸಾ ಕೇಂದ್ರದ ನಿರ್ದೇಶಕರಾದ ಡಾ ಚಂದ್ರಶೇಖರ್‌ ಚಿಕ್ಕಮುನಿಯಪ್ಪ ಮಾತನಾಡಿ, ರೋಗಿಗಳ ಚಿಕಿತ್ಸಾ ಕ್ರಮದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮ ಚಿಕಿತ್ಸೆಯನ್ನು ನೀಡಬೇಕು ಎನ್ನುವ ಗುರಿಯನ್ನು ನಾವು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಇಂದು ಪ್ರಾರಂಭವಾಗುತ್ತಿರುವ ಟ್ವಿಮ್ಸ್‌ ಚಿಕಿತ್ಸಾ ಕೇಂದ್ರದಲ್ಲಿ ಅಸ್ಥಿ ಮತ್ತು ಮೂಳೆ ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಕೇಂದ್ರವಾಗಿದೆ. ಜಾಯಿಂಟ್‌ ರಿಪ್ಲೇಸ್‌ಮೆಂಟ್ಸ್‌, ಅತ್ಯಂತ ಕ್ಲಿಷ್ಟಕರ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳು, ಪ್ಲಾಸ್ಟಿಕ್‌ ಹಾಗೂ ಏಸ್ಥೆಟಿಕ್‌ ಮತ್ತು ರಿಕಂಸ್ಟ್ರಕ್ಟೀವ್‌ ಸರ್ಜರಿಗಳು ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಗೆ ಬೇಕಾದಂತಹ ಅತ್ಯಾಧುನಿಕ ಹಾಗೂ ವಿಶ್ವಗುಣಮಟ್ಟದ ಚಿಕಿತ್ಸಾ ಕ್ರಮಗಳನ್ನು ಈ ಕೇಂದ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಡಯಾಗ್ನೋಸ್ಟಿಕ್‌ ಉಪಕರಣಗಳು, ಅತ್ಯಾಧುನಿಕ ಆಪರೇಶನ್‌ ಥಿಯೇಟರ್‌ ಗಳು ಲಭ್ಯವಿವೆ. ದೇಶ ಹಾಗೂ ವಿದೇಶಗಳಲ್ಲಿ ಚಿಕಿತ್ಸೆಯನ್ನು ನೀಡುವಲ್ಲಿ ದಶಕಗಳ ಪರಿಣಿತಿಯನ್ನು ಹೊಂದಿರುವ ಪರಿಣಿತ ವೈದ್ಯರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

Recommended Video

10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

ಟ್ರಸ್ಟ್‌ವೆಲ್‌ ಹಾಸ್ಪಿಟಲ್‌ ನ ಸಿಎಂಡಿ ಡಾ. ಹೆಚ್‌ ವಿ ಮಧುಸೂಧನ್‌ ಮಾತನಾಡಿ, ಬೆಂಗಳೂರು ನಗರದ ಜೆಸಿ ರಸ್ತೆಯಲ್ಲಿರುವ ಟ್ರಸ್ಟ್‌ ವೆಲ್‌ ಆಸ್ಪತ್ರೆ 250 ಬೆಡ್‌ಗಳನ್ನು ಹೊಂದಿರುವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ಮೂಲಭೂತ ಸೌಕರ್ಯಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದ್ದು, ನ್ಯೂರೋಸೈನ್ಸ್‌ಸ್‌, ಆರ್ಥೋಪಿಡಿಕ್ಸ್‌, ಯುರಾಲಜಿ, ಇಎನ್‌ಟಿ, ಕಾರ್ಡಿಯಾಲಜಿ, ಮೆಡಿಕಲ್‌ & ಸರ್ಜಿಕಲ್‌ ಗ್ಯಾಸ್ಟ್ರೋಎಂಟ್ರೋಲಾಜಿ ಮತ್ತು ಎಮರ್ಜೆನ್ಸಿ ಕೇರ್‌ ಸೌಲಭ್ಯ ಸೇರಿದಂಥೆ 28 ಕ್ಕೂ ಹೆಚ್ಚು ಮಲ್ಟಿಸ್ಪೇಷಾಲಿಟಿ ಚಿಕಿತ್ಸೆಗಳ ಇಲ್ಲಿ ಲಭ್ಯವಿದೆ ಎಂದು ಹೇಳಿದರು.

English summary
Trustwell Institute For Musculoskeletal Sciences Innaugurated by Athlete Anju Bobby George and BJP leader Tara in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X