• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಶವಂತಪುರ ಫ್ಲೈ ಓವರ್‌ ಮೇಲಿಂದ ಬಿದ್ದ ಲಾರಿ, ಕ್ಲೀನರ್ ಸಾವು

|

ಬೆಂಗಳೂರು, ಏಪ್ರಿಲ್ 14 : ಬೆಂಗಳೂರಿನ ಯಶವಂತಪುರ ಫ್ಲೈ ಓವರ್‌ ಮೇಲಿಂದ ಲಾರಿ ಕೆಳಗೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಡ್ರೈವರ್‌ಗೆ ಗಂಭೀರಗಾಯವಾಗಿದೆ.

ಭಾನುವಾರ ಮುಂಜಾನೆ 5.30ರ ಸುಮಾರಿಗೆ ಪುಣೆಯಿಂದ ಬೆಂಗಳೂರಿಗೆ ಅಣಬೆ ಸಾಗಣೆ ಮಾಡುತ್ತಿದ್ದ ಲಾರಿ ಫ್ಲೈ ಓವರ್‌ನಿಂದ ಕೆಳಗೆ ಬಿದ್ದಿದೆ. ಕ್ಲೀನರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಡ್ರೈವರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರ: 'ಹಳ್ಳಿ ಮನುಷ್ಯನ ಪೇಟೆ ಸವಾರಿ'

ಯಶವಂತಪುರ ಫ್ಲೈ ಓವರ್‌ನಲ್ಲಿ ಲಾಂಗ್ ಕರ್ವ್ ಇರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. 2017ರಲ್ಲಿ ಫ್ಲೈ ಓವರ್‌ ಮೇಲಿಂದ ಕೋಳಿ ಸಾಗಣೆ ಮಾಡುತ್ತಿದ್ದ ಲಾರಿ ಕೆಳಗೆ ಬಿದ್ದಿತ್ತು.

ಯುವತಿ ಅಪಹರಣ, ಅರ್ಧಗಂಟೆಯಲ್ಲೇ ರಕ್ಷಿಸಿದ ಯಶವಂತಪುರ ಪೊಲೀಸ್

ಲಾರಿ ಯಶವಂತಪುರ ಫ್ಲೈ ಓವರ್‌ ಮೇಲಿಂದ ಬಿದ್ದ ಕಾರಣ ಕೆಲವು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಲಾರಿಯನ್ನು ಕ್ರೇನ್ ಸಹಾಯದಿಂದ ರಸ್ತೆ ಬದಿಗೆ ತಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಲೋಕಸಭಾ ಚುನಾವಣಾ ಪುಟ

English summary
Truck overturned from Yeshwanthpur flyover, Bengaluru on Sunday morning. Truck cleaner killed and driver injured. Truck carring mushroom from Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X