{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/tribute-to-poet-hs-venkatesh-murthy-birthday-by-upasana-mohan-085503.html" }, "headline": "ಜೀವನ ಉತ್ಸಾಹಿ ಕವಿ ಎಚ್ಚೆಸ್ವಿಗೆ ಹುಟ್ಟುಹಬ್ಬದ ಹಾರೈಕೆ", "url":"https://kannada.oneindia.com/news/bengaluru/tribute-to-poet-hs-venkatesh-murthy-birthday-by-upasana-mohan-085503.html", "image": { "@type": "ImageObject", "url": "http://kannada.oneindia.com/img/1200x60x675/2014/06/23-hs-venkatesh-murthy.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/06/23-hs-venkatesh-murthy.jpg", "datePublished": "2014-06-23T15:02:42+05:30", "dateModified": "2014-06-23T15:13:09+05:30", "author": { "@type": "Person", "name": "* ಉಪಾಸನಾ ಮೋಹನ್,ಬೆಂಗಳೂರು" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Kannada poet, Novelist and Writer HS Venkatesh Murthy's Birthday celebrated today(Jun.23). Here is a tribute to 'Bhavageethe' poet by Musician Upasana Mohan.", "keywords": "Tribute to Kannada poet H.S.Venkatesh Murthy on his Birthday, ಜೀವನ ಉತ್ಸಾಹಿ ಕವಿ ಎಚ್ಚೆಸ್ವಿಗೆ ಹುಟ್ಟುಹಬ್ಬದ ಹಾರೈಕೆ, ಉಪಾಸನಾ ಮೋಹನ್", "articleBody":"ಕನ್ನಡದ ಹೆಸರಾಂತ ಕವಿ ಎಚ್.ಎಸ್ ವೆಂಕಟೇಶ ಮೂರ್ತಿ ಅವರ ಹುಟ್ಟುಹಬ್ಬದ ನಿಮಿತ್ತ ಸಂಗೀತಗಾರ ಉಪಾಸನಾ ಮೋಹನ್ ಅವರು ಬರೆದಿರುವ ಆತ್ಮೀಯ ನುಡಿಗಳು ಇಲ್ಲಿವೆ ತಪ್ಪದೇ ಓದಿ...ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ದಶಕದಿಂದ ನಾನು ಗಮನಿಸುತ್ತಾ ಬಂದಂತೆ ನಮ್ಮಲ್ಲಿ ಬಹುತೇಕ ಕವಿಗಳು ಭಾವಗೀತೆಗಳನ್ನು ಬರೆಯುವಲ್ಲಿ ಯಾಕೋ ಮಂಕಾದಂತೆ ತೋರುತ್ತಾರೆ. ಕೆಲವರಂತೂ ಕವಿತೆ ಬರೆಯುವುದನ್ನೆ ನಿಲ್ಲಿಸಿಬಿಟ್ಟಿದ್ದಾರೆ. ಅವರಿಗೆ ಸಾಕಾಗಿ ಹೋದಂತೆ ತೋರುತ್ತದೆ. ನನ್ನಂತ ಕೆಲವು ಸಂಗೀತ ನಿರ್ದೇಶಕರ ಬಲವಂತಕ್ಕೆ ಒಂದೋ ಎರಡೋ ಕವಿತೆಗಳನ್ನು ಬರೆದದ್ದೂ ಇದೆ.ಅದರೂ ಅವರ ಆರಂಭದ ದಿನಗಳಲ್ಲಿದ್ದ ಆಸಕ್ತಿ ಇಂದು ಕಡಿಮೆಯಾಗಿರುವುದಂತೂ ನಿಜ. ಭಾವಗೀತೆಗಳಿಗಾಗಿ ಹೋರಾಟ ಮಾಡಿ ಶ್ರೇಷ್ಠತೆಯನು ತಂದ ಇಂಥವರೇ ಇಂದು ಸುಮ್ಮನೆ ಇರುವುದು ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಸರಿ.ಕವಿತೆಗಳು ಸುಖಾಸುಮ್ಮನೆ ಹುಟ್ಟುವಂಥದ್ದಲ್ಲ ಇದು ನನಗೂ ತಿಳಿದಿದೆ, ಕವಿತೆಗಳು ಹುಟ್ಟುವುದಕ್ಕೆ ಮುನ್ನ ಮನಸನ್ನು ಹದಗೊಳಿಸಿದರೆ ಖಂಡಿತ ಕವಿತೆಗಳು ಆಕಾರ ಪಡೆಯುತ್ತವೆ. ಇಂದು ಕವಿಗಳು ಜನಮಾನಸದಲ್ಲಿ ನೆಲೆಯೂರಿದ್ದರೆ ಅದರ ಸಿಂಹಪಾಲು ಭಾವಗೀತೆಯದ್ದಾಗಿದೆ.ಈ ಅಪವಾದಕ್ಕೆ ಹೊರತಾಗಿ ನಾನು ಕಂದ ಕ್ರಿಯಾಶೀಲ ಕವಿಗಳಲ್ಲಿ ಬಹು ಮುಖ್ಯರು ಎಚ್ಚೆಸ್ವಿ. ಇವರ ಬತ್ತಳಿಕೆಯಿಂದ ನೂರಾರು ಕವಿತೆಗಳು ನಿರಂತರವಾಗಿ ಹೊರ ಬರುತ್ತಲೇ ಇವೆ. ಬೇರೆ ಪ್ರಕಾರದ ಸಾಹಿತ್ಯದಲ್ಲೂ ತಮ್ಮ ಹಿರಿಮೆಯನ್ನು ಮೆರೆಯುತ್ತಾ ಭಾವಗೀತೆಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುವ ಕೆಲವೇ ಕೆಲವು ಕವಿಗಳಲ್ಲಿ ಎಚ್ಚೆಸ್ವಿ ಮೊದಲಿಗರು.ಸುಗಮ ಸಂಗೀತದ ಸಣ್ಣ ಸಣ್ಣ ಸಮಾರಂಭಗಳಲ್ಲಿ ತಮ್ಮ ಪಾತ್ರವಿಲ್ಲದಿದ್ದರೂ ಕೇಳುಗರಾಗಿ ಭಾಗವಹಿಸಿ ಕಲಾವಿದರನ್ನು ಉತ್ತೇಜಿಸುವವರಲ್ಲೂ ಎಚ್ಚೆಸ್ವಿ ಅಗ್ರೇಸರರು, ಯುವ ಹಾಗೂ ಹಿರಿಯ ಕಲಾವಿದರನ್ನು ಸದಾ ಪ್ರೀತಿಯಿಂದ ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ಸಹೃದಯಿ.ನಾನು ಬಹುತೇಕ ಕವಿಗಳ ಒಡನಾಟದಲ್ಲಿ ಸದಾ ಇರುವ ವ್ಯಕ್ತಿ. ನನಗೆ ಎಚ್ಚೆಸ್ವಿ ಎಲ್ಲರಿಗಿಂತ ಭಿನ್ನರಾಗಿ ತೋರುತ್ತಾರೆ. ಇವರಲ್ಲಿರುವ ಉತ್ಸಾಹ, ಸ್ನೇಹಪರತೆ, ವೃತ್ತಿಪರತೆ, ಸಮಯಪ್ರಜ್ಞೆ ನಮ್ಮಂಥ ಯುವಕರನ್ನೂ ನಾಚಿಸುತ್ತದೆ. ಸದಾ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಂಡೇ ಇರುತ್ತಾರೆ. ನಾವಿಬ್ಬರು ಅದೆಷ್ಟೋ ಬಾರಿ ಸುಗಮ ಸಂಗೀತ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಹಾಗೂ ಮುಂದಿನ ಸವಾಲುಗಳ ಬಗ್ಗೆ ಚಿಂತನೆ ನಡೆಸುವಾಗ ಅವರು ತೋರುವ ಕಾಳಜಿ ನನಗೆ ಆಪ್ತವಾಗುತ್ತದೆ.ಹೊಸ ಹೊಸ ಕವಿತೆಗಳಿಗೆ ರಾಗ ಸಂಯೋಜಿಸಿ, ಪ್ರತಿಭಾನ್ವಿತ ಗಾಯಕ-ಗಾಯಕಿಯರನ್ನು ಪ್ರೋತ್ಸಾಹಿಸುವಂತೆ ಸದಾ ಕಿವಿ ಹಿಂಡಿತ್ತಿರುತ್ತಾರೆ. ಕ್ಷೇತ್ರ ನಿಂತ ನೀರಾಗದಂತೆ ನೋಡಿಕೊಳ್ಳುವುದರ ಬಗ್ಗೆ ಆಗಾಗ ನಮ್ಮನ್ನು ಎಚ್ಚರಿಸುತ್ತಲೆ ಇರುತ್ತಾರೆ. ಇವರೊಂದಿಗೆ ವಿದೇಶ ಪ್ರವಾಸದಲ್ಲಿ ಕಳೆದ ಕ್ಷಣಗಳಂತೂ ಅವಿಸ್ಮರಣೀಯ.ನಾ ಕಂಡಂತೆ ಎಚ್ಚೆಸ್ವಿ ಅವರು ಎಲ್ಲರನ್ನೂ, ಎಲ್ಲವನ್ನೂ ಇಷ್ಟಪಡುವ ಹಾಗೆ ಜೀವನದ ಪ್ರತಿ ಕ್ಷಣವನ್ನು ಅನುಭವಿಸುವಂಥ ಜೀವನೋತ್ಸಾಹಿ. ಪ್ರತಿ ನಿಮಿಷಕ್ಕೆ ಬೆಲೆ ಇರುವ ಹಾಗೆ ಪ್ರತಿ ಜೀವಿಗೂ ಬೆಲೆ ಇದೆ ಎಂಬುದು ಇವರ ಸಿದ್ಧಾಂತ ಆದ್ದರಿಂದಲೇ ಇವರು ಜನ ಪ್ರೀತಿಯ ಕವಿ ಯಾಗಿದ್ದಾರೆ.ಎಚ್ಚೆಸ್ವಿ ಅವರ ರಚನೆಯ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ.. ಹಾಡು ಎಂ.ಡಿ ಪಲ್ಲವಿ ಅವರ ದನಿಯಲ್ಲಿ ಕೇಳಿ..." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವನ ಉತ್ಸಾಹಿ ಕವಿ ಎಚ್ಚೆಸ್ವಿಗೆ ಹುಟ್ಟುಹಬ್ಬದ ಹಾರೈಕೆ

By * ಉಪಾಸನಾ ಮೋಹನ್,ಬೆಂಗಳೂರು
|
Google Oneindia Kannada News

ಕನ್ನಡದ ಹೆಸರಾಂತ ಕವಿ ಎಚ್.ಎಸ್ ವೆಂಕಟೇಶ ಮೂರ್ತಿ ಅವರ ಹುಟ್ಟುಹಬ್ಬದ ನಿಮಿತ್ತ ಸಂಗೀತಗಾರ ಉಪಾಸನಾ ಮೋಹನ್ ಅವರು ಬರೆದಿರುವ ಆತ್ಮೀಯ ನುಡಿಗಳು ಇಲ್ಲಿವೆ ತಪ್ಪದೇ ಓದಿ...

ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ದಶಕದಿಂದ ನಾನು ಗಮನಿಸುತ್ತಾ ಬಂದಂತೆ ನಮ್ಮಲ್ಲಿ ಬಹುತೇಕ ಕವಿಗಳು ಭಾವಗೀತೆಗಳನ್ನು ಬರೆಯುವಲ್ಲಿ ಯಾಕೋ ಮಂಕಾದಂತೆ ತೋರುತ್ತಾರೆ. ಕೆಲವರಂತೂ ಕವಿತೆ ಬರೆಯುವುದನ್ನೆ ನಿಲ್ಲಿಸಿಬಿಟ್ಟಿದ್ದಾರೆ. ಅವರಿಗೆ ಸಾಕಾಗಿ ಹೋದಂತೆ ತೋರುತ್ತದೆ. ನನ್ನಂತ ಕೆಲವು ಸಂಗೀತ ನಿರ್ದೇಶಕರ ಬಲವಂತಕ್ಕೆ ಒಂದೋ ಎರಡೋ ಕವಿತೆಗಳನ್ನು ಬರೆದದ್ದೂ ಇದೆ.

ಅದರೂ ಅವರ ಆರಂಭದ ದಿನಗಳಲ್ಲಿದ್ದ ಆಸಕ್ತಿ ಇಂದು ಕಡಿಮೆಯಾಗಿರುವುದಂತೂ ನಿಜ. ಭಾವಗೀತೆಗಳಿಗಾಗಿ ಹೋರಾಟ ಮಾಡಿ ಶ್ರೇಷ್ಠತೆಯನು ತಂದ ಇಂಥವರೇ ಇಂದು ಸುಮ್ಮನೆ ಇರುವುದು ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಸರಿ.

ಕವಿತೆಗಳು ಸುಖಾಸುಮ್ಮನೆ ಹುಟ್ಟುವಂಥದ್ದಲ್ಲ ಇದು ನನಗೂ ತಿಳಿದಿದೆ, ಕವಿತೆಗಳು ಹುಟ್ಟುವುದಕ್ಕೆ ಮುನ್ನ ಮನಸನ್ನು ಹದಗೊಳಿಸಿದರೆ ಖಂಡಿತ ಕವಿತೆಗಳು ಆಕಾರ ಪಡೆಯುತ್ತವೆ. ಇಂದು ಕವಿಗಳು ಜನಮಾನಸದಲ್ಲಿ ನೆಲೆಯೂರಿದ್ದರೆ ಅದರ ಸಿಂಹಪಾಲು ಭಾವಗೀತೆಯದ್ದಾಗಿದೆ.

Tribute to Kannada poet H.S.Venkatesh Murthy on his Birthday

ಈ ಅಪವಾದಕ್ಕೆ ಹೊರತಾಗಿ ನಾನು ಕಂದ ಕ್ರಿಯಾಶೀಲ ಕವಿಗಳಲ್ಲಿ ಬಹು ಮುಖ್ಯರು ಎಚ್ಚೆಸ್ವಿ. ಇವರ ಬತ್ತಳಿಕೆಯಿಂದ ನೂರಾರು ಕವಿತೆಗಳು ನಿರಂತರವಾಗಿ ಹೊರ ಬರುತ್ತಲೇ ಇವೆ. ಬೇರೆ ಪ್ರಕಾರದ ಸಾಹಿತ್ಯದಲ್ಲೂ ತಮ್ಮ ಹಿರಿಮೆಯನ್ನು ಮೆರೆಯುತ್ತಾ ಭಾವಗೀತೆಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುವ ಕೆಲವೇ ಕೆಲವು ಕವಿಗಳಲ್ಲಿ ಎಚ್ಚೆಸ್ವಿ ಮೊದಲಿಗರು.

ಸುಗಮ ಸಂಗೀತದ ಸಣ್ಣ ಸಣ್ಣ ಸಮಾರಂಭಗಳಲ್ಲಿ ತಮ್ಮ ಪಾತ್ರವಿಲ್ಲದಿದ್ದರೂ ಕೇಳುಗರಾಗಿ ಭಾಗವಹಿಸಿ ಕಲಾವಿದರನ್ನು ಉತ್ತೇಜಿಸುವವರಲ್ಲೂ ಎಚ್ಚೆಸ್ವಿ ಅಗ್ರೇಸರರು, ಯುವ ಹಾಗೂ ಹಿರಿಯ ಕಲಾವಿದರನ್ನು ಸದಾ ಪ್ರೀತಿಯಿಂದ ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ಸಹೃದಯಿ.

ನಾನು ಬಹುತೇಕ ಕವಿಗಳ ಒಡನಾಟದಲ್ಲಿ ಸದಾ ಇರುವ ವ್ಯಕ್ತಿ. ನನಗೆ ಎಚ್ಚೆಸ್ವಿ ಎಲ್ಲರಿಗಿಂತ ಭಿನ್ನರಾಗಿ ತೋರುತ್ತಾರೆ. ಇವರಲ್ಲಿರುವ ಉತ್ಸಾಹ, ಸ್ನೇಹಪರತೆ, ವೃತ್ತಿಪರತೆ, ಸಮಯಪ್ರಜ್ಞೆ ನಮ್ಮಂಥ ಯುವಕರನ್ನೂ ನಾಚಿಸುತ್ತದೆ. ಸದಾ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಂಡೇ ಇರುತ್ತಾರೆ. ನಾವಿಬ್ಬರು ಅದೆಷ್ಟೋ ಬಾರಿ ಸುಗಮ ಸಂಗೀತ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಹಾಗೂ ಮುಂದಿನ ಸವಾಲುಗಳ ಬಗ್ಗೆ ಚಿಂತನೆ ನಡೆಸುವಾಗ ಅವರು ತೋರುವ ಕಾಳಜಿ ನನಗೆ ಆಪ್ತವಾಗುತ್ತದೆ.

ಹೊಸ ಹೊಸ ಕವಿತೆಗಳಿಗೆ ರಾಗ ಸಂಯೋಜಿಸಿ, ಪ್ರತಿಭಾನ್ವಿತ ಗಾಯಕ-ಗಾಯಕಿಯರನ್ನು ಪ್ರೋತ್ಸಾಹಿಸುವಂತೆ ಸದಾ ಕಿವಿ ಹಿಂಡಿತ್ತಿರುತ್ತಾರೆ. ಕ್ಷೇತ್ರ ನಿಂತ ನೀರಾಗದಂತೆ ನೋಡಿಕೊಳ್ಳುವುದರ ಬಗ್ಗೆ ಆಗಾಗ ನಮ್ಮನ್ನು ಎಚ್ಚರಿಸುತ್ತಲೆ ಇರುತ್ತಾರೆ. ಇವರೊಂದಿಗೆ ವಿದೇಶ ಪ್ರವಾಸದಲ್ಲಿ ಕಳೆದ ಕ್ಷಣಗಳಂತೂ ಅವಿಸ್ಮರಣೀಯ.

ನಾ ಕಂಡಂತೆ ಎಚ್ಚೆಸ್ವಿ ಅವರು ಎಲ್ಲರನ್ನೂ, ಎಲ್ಲವನ್ನೂ ಇಷ್ಟಪಡುವ ಹಾಗೆ ಜೀವನದ ಪ್ರತಿ ಕ್ಷಣವನ್ನು ಅನುಭವಿಸುವಂಥ ಜೀವನೋತ್ಸಾಹಿ. "ಪ್ರತಿ ನಿಮಿಷಕ್ಕೆ ಬೆಲೆ ಇರುವ ಹಾಗೆ ಪ್ರತಿ ಜೀವಿಗೂ ಬೆಲೆ ಇದೆ" ಎಂಬುದು ಇವರ ಸಿದ್ಧಾಂತ ಆದ್ದರಿಂದಲೇ ಇವರು 'ಜನ ಪ್ರೀತಿಯ ಕವಿ' ಯಾಗಿದ್ದಾರೆ.

ಎಚ್ಚೆಸ್ವಿ ಅವರ ರಚನೆಯ 'ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ.. ಹಾಡು ಎಂ.ಡಿ ಪಲ್ಲವಿ ಅವರ ದನಿಯಲ್ಲಿ ಕೇಳಿ...

English summary
Kannada poet, Novelist and Writer HS Venkatesh Murthy's Birthday celebrated today(Jun.23). Here is a tribute to 'Bhavageethe' poet by Musician Upasana Mohan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X