ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊರೊನಾ ಮೇಲೆ ಆಯುರ್ವೇದ ಔಷಧ ಪ್ರಯೋಗ

|
Google Oneindia Kannada News

ಬೆಂಗಳೂರು, ಜುಲೈ 14: ನಗರದ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತನ ಮೇಲೆ ಆಯುರ್ವೇದ ಔಷಧ ಪ್ರಯೋಗ ಆರಂಭಿಸಿದ್ದಾರೆ.

ಆಯುಷ್ ಇಲಾಖೆ ಅನುಮೋದನೆ ನಂತರ ಪ್ರಯೋಗ ಆರಂಭವಾಗಲಿದೆ. ಇತ್ತೀಚೆಗೆ, ದ್ಯುತಿ ಬಯೋಸೈನ್ಸ್‌ನ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಅವರು ಮನೆಯ ಪ್ರತ್ಯೇಕತೆಯಡಿಯಲ್ಲಿ ಕೋವಿಡ್ ರೋಗಿಯ ಮೇಲೆ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದ್ದರು.

ಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿ

ಕೊರೋನಾ ರೋಗಿಗೆ ದಿನಕ್ಕೆ ಮೂರು ಬಾರಿ 9 ಆಯುರ್ವೇದ ಔಷಧಿಗಳನ್ನು ನೀಡಲಾಗಿತ್ತು, ಅದರಿಂದ ಉತ್ತಮ ಫಲಿತಾಂಶ ಕೂಡ ಬಂದಿತ್ತು.15 ಕೊರೊನಾ ರೋಗಿಗಳು ಮತ್ತು 15 ಕೊರೊನೇತರ ರೋಗಿಗಳ ಮೇಲೆ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆ ಆರಂಭವಾಗಲಿದೆ. ಎಚ್‌ಸಿಜಿ ಆಸ್ಪತ್ರೆಯಲ್ಲಿ ಪ್ರಯೋಗ ಆರಂಭವಾಗಿದೆ.

Trials To Begin On Ayurvedic Drugs At HCG Hospital

ಸಾಮಾನ್ಯ ಕೊರೊನಾ ಔಷಧ ಜೊತೆಗೆ ಆಯುರ್ವೇದ ಔಷಧಿಯನ್ನು ನೀಡಲಾಗಿದೆ. ರೋಗಿಯು ಉತ್ತಮವಾಗಿ ಸ್ಪಂದಿಸಿದ್ದಾರೆ. ಆಕ್ಸಿಜನ್ ನೀಡಲಾಗುತ್ತಿತ್ತು, 9 ದಿನಗಳಲ್ಲಿ ಉತ್ತಮವಾಗಿ ಗುಣಮುಖರಾದರು ಎಂದು ವೈದ್ಯರು ತಿಳಿಸಿದ್ದಾರೆ.

ನಾವು ಈಗಾಗಲೇ ಆಯುಷ್ ಇಲಾಖೆ ಅನುಮತಿ ಪಡೆದಿದ್ದೇವೆ, ಆದರೆ ಇಲಾಖೆಯ ಶಿಷ್ಟಾಚಾರದ ನೀತಿ ನಿಯಮಗಳಿಗಾಗಿ ಕಾಯುತ್ತಿರುವುದಾಗಿ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ಆಯುರ್ವೇದ ಪ್ರಯೋಗಗಳನ್ನು ತೆಗೆದುಕೊಳ್ಳುವ ನಿರ್ಧಾರವು ವಾರಗಳ ಪರಿಶೀಲನೆ ಮತ್ತು ಸಂಶೋಧನೆಯ ನಂತರ ಕೈಗೊಳ್ಳಲಾಗಿದೆ ಎಂದು ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಹೇಳಿದ್ದಾರೆ.

English summary
Clinical trials on Ayurvedic treatment are set to begin at HCG Hospital on 30 individuals 15 Covid-positive and 15 non-Covid patients with experts from the hospital getting the nod from the Ayush ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X