ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಮಾಲಯನ್ ಬ್ರದರ್ಸ್ ಜೊತೆ ಮಾಕಳಿದುರ್ಗದಲ್ಲಿ ಟ್ರೆಕ್ಕಿಂಗ್!

ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ಮತ್ತು ಒಂದೂವರೆ ಗಂಟೆಯಲ್ಲಿ ಪಯಣಿಸಬಹುದಾಗ ಮಾಕಳಿದುರ್ಗ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗಲು ಚಾರಣಕ್ಕೆ ಫೇಮಸ್ ಆಗಿರುವ 'ಹಿಮಾಲಯನ್ ಬ್ರದರ್ಸ್' ಸಜ್ಜಾಗಿದ್ದಾರೆ.

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 18 : ಟ್ರೆಕ್ಕಿಂಗ್ ಅಂದ ಕೂಡಲೆ ಹಲವು ಸಾಹಸಿಗರ, ಪ್ರಕೃತಿ ಆರಾಧಕರ ಕಿವಿಗಳು ನಿಮಿರುತ್ತವೆ, ಮನಸ್ಸು ಹೊಸ ಅನುಭವಕ್ಕೆ ಅಣಿಯಾಗಲು ಆರಂಭಿಸುತ್ತದೆ. ಅಂತಹದೊಂದು ಅವಕಾಶ ಚಾರಣ ಪ್ರಿಯರಿಗೆ ಕೂಡಿಬಂದಿದೆ.

ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ಮತ್ತು ಒಂದೂವರೆ ಗಂಟೆಯಲ್ಲಿ ಪಯಣಿಸಬಹುದಾಗ ಮಾಕಳಿದುರ್ಗ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗಲು ಚಾರಣಕ್ಕೆ ಫೇಮಸ್ ಆಗಿರುವ 'ಹಿಮಾಲಯನ್ ಬ್ರದರ್ಸ್' ಸಜ್ಜಾಗಿದ್ದಾರೆ. ಈ ನವೆಂಬರ್ ಚಳಿಯಲ್ಲಿ ಚಾರಣ ಮಾಡುವ ಅನುಭವವವೇ ಬೇರೆ.

ನವೆಂಬರ್ 20, ಭಾನುವಾರದಂದು ದೊಡ್ಡಬಳ್ಳಾಪುರ ಬಳಿಯಿರುವ ಮಾಕಳಿದುರ್ಗ ಬೆಟ್ಟದಲ್ಲಿ ಚಾರಣವನ್ನು ಪವರ್ಸ್ ಆಫ್ 10 ಎಂಬ ಸರಕಾರೇತರ ಸಂಸ್ಥೆ ಆಯೋಜಿಸಿದೆ. ಟ್ರೆಕ್ಕಿಂಗ್‌ಗೆ ಸಾಮಾನು ಸರಂಜಾಮುಗಳನ್ನು ಸಿದ್ಧ ಮಾಡಿಕೊಳ್ಳುವ ಮುನ್ನ ಈ ಟ್ರೆಕ್ಕಿಂಗ್ ಹಿಂದಿರುವ ಸಾಮಾಜಿಕ ಕಳಕಳಿಯನ್ನೂ ತಿಳಿದುಕೊಂಡುಬಿಡಿ. [ಮಾಕಳಿದುರ್ಗದ ಬಗ್ಗೆ]

Trekking to Makalidurga - Fundrising to provide books to schools

ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ 50ಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ಓದುವ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಂಡಿದ್ದು, ಪುಸ್ತಕ ಕೊಳ್ಳುವ ಕಾರ್ಯಕ್ರಮದ ಭಾಗವಾಗಿ ಚಾರಣಿಗರಿಂದ ಕೇವಲ ಸಾವಿರ ರುಪಾಯಿ ತೆಗೆದುಕೊಳ್ಳುತ್ತಿದೆ.

ಪವರ್ಸ್ ಆಫ್ 10 ಸಂಸ್ಥೆ ಇತ್ತೀಚೆಗೆ 'ಗಿಫ್ಟ್ ಎ ಲೈಬ್ರರಿ' ಎಂಬ ಅಭಿಯಾನವನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಶಾಲಾ ಮಕ್ಕಳಿಗೆ ಓದುವ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ಕೆ ಕೈಹಾಕಿದೆ. ಗ್ರಾಮೀಣ ಮಕ್ಕಳು ಕೂಡ ಪುಸ್ತಕ ಓದಿ ಖುಷಿ ಪಡಲಿ ಎಂಬುದು ಈ ಅಭಿಯಾನದ ಹಿಂದಿನ ಉದ್ದೇಶ. ಪ್ರತಿ ಶಾಲೆಗೆ 10 ಸಾವಿರ ರು. ನೀಡಲಾಗುತ್ತಿದೆ. [ಚಾರಣಿಗರನ್ನೂ, ಆಸ್ತಿಕರನ್ನೂ ಸೆಳೆಯುವ ಕುಂದಬೆಟ್ಟ]

ಸಾವಿರ ರು. ದೇಣಿಗೆ ನೀಡಿ ಮಕ್ಕಳಿಗೆ ಪುಸ್ತಕ ನೀಡುವ ಖುಷಿಯಲ್ಲಿ ಭಾಗವಾಗಬೇಕು ಎಂದು ಇಚ್ಛಿಸುವವರು ಈ ಟ್ರೆಕ್ಕಿಂಗ್‌ನಲ್ಲಿ ಭಾಗಿಯಾಗಬಹುದು. ಕಾರ್ ಪೂಲಿಂಗ್ ಮುಖಾಂತರ ಚಾರಣಿಗರನ್ನು ಕರೆದುಕೊಂಡು ಹೋಗುವ ಯೋಜನೆ ರೂಪಿಸಲಾಗಿದ್ದು, ಆಹಾರ, ಚಾರಣ ಮತ್ತು ಹಗ್ಗ ಕಟ್ಟಿ ಬೆಟ್ಟ ಇಳಿಯುವ ಕ್ರೀಡೆಯೂ ಇದರಲ್ಲಿ ಒಳಗೊಂಡಿರುತ್ತದೆ.

ಆಸಕ್ತರು ಸಂಪರ್ಕಿಸಿ : [email protected]

English summary
Powers of 10, an NGO is organizing a trek to Makalidurga (Located 60kms from Bangalore) with an experienced Himalayan trek team alongwith a chance to enjoy rappelling. The funds are towards providing 190+ reading books to 50 rural government primary schools in Chikkaballapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X