ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಬಂತು ಮರ ಸ್ಥಳಾಂತರಿಸುವ ಅತ್ಯಾಧುನಿಕ ಯಂತ್ರ

By Sachhidananda Acharya
|
Google Oneindia Kannada News

ಬೆಂಗಳೂರು, ನವೆಂಬರ್ 2: ವಿದೇಶಗಳಲ್ಲಿ ಮರಗಳನ್ನು ಕಾಂಡ ಸಮೇತ ಕಿತ್ತು ಬೇರೆಡೆ ನಾಟಿ ಮಾಡುವ ತಂತ್ರಜ್ಞಾನವನ್ನು ನೋಡಿರಬಹುದು. ಇದೀಗ ಅಂಥಹದ್ದೇ ತಂತ್ರಜ್ಞಾನದ ಟ್ರಕ್ ಬೆಂಗಳೂರು ನಗರಕ್ಕೂ ಆಗಮಿಸಿದೆ.

ಎರಡು ದಿನದಿಂದ ಮುರಿದುಬಿದ್ದ ಟೊಂಗೆಗೆ ಇನ್ನೂ ಇಲ್ಲ ಮುಕ್ತಿಎರಡು ದಿನದಿಂದ ಮುರಿದುಬಿದ್ದ ಟೊಂಗೆಗೆ ಇನ್ನೂ ಇಲ್ಲ ಮುಕ್ತಿ

ವೋಲ್ವೋ ಕಂಪನಿ ಈ ಯಂತ್ರವನ್ನು ತಯಾರಿಸಿದ್ದು 'ಟ್ರೀ ಟ್ರಾನ್ಸ್‌ಪ್ಲಾಂಟರ್' ಎಂಬ ಹೆಸರನ್ನು ಹೊಂದಿದೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಮರಗಳು ಬಲಿಯಾಗುವುದನ್ನು ತಪ್ಪಿಸಲು ಈ ಯಂತ್ರ ಸಹಾಯಕವಾಗಲಿದೆ. ಮಂಗಳವಾರ ಐಐಎಸ್ಸಿ ಆವರಣದಲ್ಲಿ ಈ ಯಂತ್ರವನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

Tree transplanter vehicle reaches Bengaluru

ಈ ಅತ್ಯಾಧುನಿಕ ಯಂತ್ರದ ಸಹಾಯದಿಂದ ಮರಗಳನ್ನು ಬುಡ ಸಮೇತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿ ಮರು ನಾಟಿ ಮಾಡಬಹುದಾಗಿದೆ. ಮರದ ಬೇರಿಗೆ ಅಂಟಿಕೊಂಡ ಮಣ್ಣಿನ ಸಮೇತ ಗಿಡವನ್ನು ತೆರವು ಮಾಡುವುದರಿಂದ ಬೇರಿಗೆ ಹಾನಿಯಾಗುವುದಿಲ್ಲ. ಜತೆಗೆ ಮರಕ್ಕೂ ಹಾನಿಯಾಗುವುದಿಲ್ಲ.

ಹಸಿರ ಉಳಿವಿನತ್ತ ಹೆಜ್ಜೆ: ಹುಬ್ಬಳ್ಳಿಯಲ್ಲಿ 42 ಮರಗಳಿಗೆ ವರ್ಗಾವಣೆ ಭಾಗ್ಯ!ಹಸಿರ ಉಳಿವಿನತ್ತ ಹೆಜ್ಜೆ: ಹುಬ್ಬಳ್ಳಿಯಲ್ಲಿ 42 ಮರಗಳಿಗೆ ವರ್ಗಾವಣೆ ಭಾಗ್ಯ!

ಮರದ ಕಾಂಡದ ಅಳತೆಗೆ ತಕ್ಕಂತೆ ಈ ಯಂತ್ರವನ್ನು ಅಳವಡಿಸಿ, ಮರವನ್ನು ಬುಡ ಸಮೇತ ಕಿತ್ತು ಬೇರೆಡೆ ನೆಡಬಹುದು. ಮರವನ್ನು ಸುಮಾರು 50 ಕಿ.ಮೀ ದೂರದವರೆಗೂ ಸಾಗಿಸಬಹುದು. ಇಂಥಹ ಅತ್ಯಾಧುನಿಕ ಯಂತ್ರದ ಬೆಲೆ ಕೇವಲ 5 ಕೊಟಿ ರೂಪಾಯಿ!

Tree transplanter vehicle reaches Bengaluru

ಈ ಯಂತ್ರವನ್ನು ವೀಕ್ಷಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ಯಂತ್ರದ ಬೆಲೆ ಕಡಿತಗೊಳಿಸುವಂತೆ ಕಂಪನಿಯ ಅಧಿಕಾರಿಗಳ ಬಳಿ ಕೋರಿಕೊಂಡರು. ಜತೆಗೆ ಇಂಥಹ ವಾಹನಗಳಿಗೆ ಜಿಎಸ್ಟಿ ವಿನಾಯಿತಿ ನೀಡುವಂತೆಯೂ ಅವರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.

English summary
The 'Tree Transplanter' machine manufactured by Volvo Company has arrived in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X