• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಅಪರೂಪದ ಮರಗಳನ್ನು ಉಳಿಸಲು ರಾಹುಲ್ ಗೆ ಪತ್ರ

By Sachhidananda Acharya
|

ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಸರಕಾರ ಮರಗಳ ಬುಡಕ್ಕೆ ಕೊಡಲಿಯೇಟು ಇಡಲು ಸಜ್ಜಾಗಿದೆ. 1976ರ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು 50 ಮರಗಳನ್ನು ಈ ಆಕ್ಟ್ ನಿಂದ ಹೊರಗಿಡಲು ಮುಂದಾಗಿದೆ. ಈ ಮಸೂದೆ ಅಂಗೀಕಾರ ಪಡೆದುಕೊಂಡಲ್ಲಿ ಈ 50 ಮರಗಳನ್ನು ಕಡಿಯಲು ಸಾರ್ವಜನಿಕರ ಹಾಗೂ ಇಲಾಖೆಗಳ ಅನುಮತಿ ಬೇಕಾಗಿಲ್ಲ.

ಬೆಂಗಳೂರು ಎಂದಾಗ ಮೊದಲಿಗೆ ನೆನಪಿಗೆ ಬರುವುದು ಮರಗಳು; ಮತ್ತು ಉದ್ಯಾನ ನಗರಿ ಎಂಬ ಹೆಸರು. ಒಂದೊಮ್ಮೆ ಈ ಕಾನೂನು ಜಾರಿಗೆ ಬಂದಿದ್ದೇ ಆದಲ್ಲಿ, ಉದ್ಯಾನ ನಗರಿ ಪಟ್ಟವನ್ನು ತಂದುಕೊಟ್ಟ ಮರಗಳನ್ನು, ಬೆಂಗಳೂರಿನ ನೈಸರ್ಗಿಕ ಸೌಂದರ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ.

ಮ್ಮನಹಳ್ಳಿಯಲ್ಲಿ ನೂರಾರು ಮರಗಳ ಸ್ಥಳಾಂತರ : ಅನಂತಕುಮಾರ್

ಮಸೂದೆ ವಿರೋಧಿಸುವುದು ಯಾಕೆ ಮುಖ್ಯ?

ಈಗಾಗಲೇ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ- 1976ತಿದ್ದುಪಡಿ ಮಸೂದೆಯನ್ನು ಫೆಬ್ರವರಿ 16 ರಂದು ಮಂಡಿಸಲಾಗಿದೆ. ಇದರಲ್ಲಿ ಗುಲ್ ಮೊಹರ್, ಇಂಡಿಯನ್ ಕೋರಲ್, ರೈನ್ ಟ್ರೀ ಮತ್ತು ಸೋಪ್ನಟ್ ನಂಥ 50 ಜಾತಿಯ ಮರಗಳನ್ನು ಕಡಿಯಲು ಯಾರದೇ ಅನುಮತಿ ಬೇಡ ಎಂದು ಹೇಳಲಾಗಿದೆ.

ವಿಶೇಷ ಎಂದರೆ ಇದೇ ರೀತಿಯ ಮರಗಳು ನಮ್ಮ ಬೆಂಗಳೂರಿನ ರಸ್ತೆಗಳ ಬದಿಯಲ್ಲಿ ಹೆಚ್ಚಾಗಿವೆ. ಒಂದೊಮ್ಮೆ ಕಾನೂನು ಜಾರಿಗೆ ಬಂದರೆ ರಸ್ತೆಯ ಅಂಚಿನಲ್ಲಿರುವ ಮರಗಳೆಲ್ಲಾ ಧರೆಗುರುಳಲಿವೆ.

ಇದೀಗ ಈ ತಿದ್ದುಪಡಿ ಮಸೂದೆಯ ವಿರುದ್ಧ ಝಾತ್ಕಾ ಡಾಟ್ ಆರ್ಗ್ (Jhatkaa.org) ಹೋರಾಟ ಆರಂಭಿಸಿದೆ. ಈ ಗಂಡಾಂತರಕಾರಿ ಮಸೂದೆಯನ್ನುಹಿಂತೆಗೆದುಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.

ಮೆಟ್ರೋ ಮಾರ್ಗ: ಬನ್ನೇರುಘಟ್ಟ ರಸ್ತೆಯಲ್ಲಿ 185 ಮರಗಳ ಸ್ಥಳಾಂತರ

ಈಗಾಗಲೇ ಸರಕಾರದ ನಿರ್ಧಾರಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಮಾಜಿ ನ್ಯಾಯಮೂರ್ತಿಗಳಾದ ಎಂ.ಎಫ್ ಸಾಲ್ದಾನಾ ಕೂಡ ಮಸೂದೆ ವಿರುದ್ಧ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಈ ಬಗ್ಗೆ ಟ್ಟಿಟ್ಟರ್ ಮೂಲಕ (office@rahulgandhi.in) ಮನವಿ ಸಲ್ಲಿಸಲು ವೃಕ್ಷ ಪ್ರೇಮಿಗಳು ನಿರ್ಧರಿಸಿದ್ದು ನಾವೆಲ್ಲರೂ ಧ್ವನಿಗೂಡಿಸಿದಾಗ ಮಾತ್ರ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Recently proposed amendments to the Karnataka Tree Protection Act (1976) have devastating consequences for our precious trees. Nearly 50 species of trees will be declassified from requiring prior public consent for them to be cut. Jhatkaa.org members like you were among thousands of Bengalureans who came together to protect our city’s trees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more