ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಜಾ ಮಾರಾಟ ಮಾಡ್ತಿದ್ದ ಟ್ರಾವೆಲ್ ಏಜೆನ್ಸಿ ಮಾಲೀಕ ಸೆರೆ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 1 : ಬೆಂಗಳೂರಿನಲ್ಲಿ ಡ್ರಗ್ ಮಾರಾಟ ಮಾಡುವ ನಾನಾ ಮುಖಗಳು ಹೊರ ಬರುತ್ತಿವೆ. ಆತ ಇಪ್ಪತ್ತೈದು ಕಾರುಗಳ ಮಾಲೀಕ. ಅವನದ್ದೇ ಸ್ವಂತ ಟ್ರಾವೆಲ್ ಏಜೆನ್ಸಿ ಇದೆ. ಆದರೆ ಮಾಡುತ್ತಿದ್ದು ಮಾತ್ರ ಗಾಂಜಾ ಡೀಲಿಂಗ್. ಎಸ್‌.ಜೆ. ಪಾರ್ಕ್ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿ ಮಾಲೀಕನ್ನು ಬಂಧಿಸಿದ್ದಾರೆ. ಆತನಿಂದ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಜಾಮೀನಿಗಾಗಿ ಸುಪ್ರೀಂಕೋರ್ಟ್‌ ಮೊರೆ ಹೋದ ರಾಗಿಣಿ ಜಾಮೀನಿಗಾಗಿ ಸುಪ್ರೀಂಕೋರ್ಟ್‌ ಮೊರೆ ಹೋದ ರಾಗಿಣಿ

ಎನ್‌ಸಿಬಿ ಅಧಿಕಾರಿಗಳು ರಾಷ್ಟ್ರ ಮಟ್ಟದಲ್ಲಿ ಡ್ರಗ್ ಜಾಲ ಪತ್ತೆ ಮಾಡುತ್ತಿದ್ದಂತೆ ಬೆಂಗಳೂರಿನಲ್ಲಿ ಕೂಡ ಪೊಲೀಸರು ಎಚ್ಚೆತ್ತುಕೊಂಡಿದ್ದರು. ಡ್ರಗ್ ಜಾಲದ ವಿರುದ್ಧ ಸತತ ಕಾರ್ಯಾಚರಣೆ ನಡೆಸಿ ಡ್ರಗ್ ಜಾಲದ ನಾನಾ ಮುಖಗಳನ್ನು ಅನಾವರಣಗೊಳಿಸಿದ್ದರು. ಅದರ ಭಾಗವಾಗಿ ನಟಿ ಸಂಜನಾ, ರಾಗಿಣಿ ಸೇರಿದಂತೆ ಡ್ರಗ್ ಡೀಲರ್‌ ಸಾಮ್ರಾಜ್ಯವನ್ನೇ ಸಿಸಿಬಿ ಪತ್ತೆ ಮಾಡಿತ್ತು. ಕುರಿಫಾರಂನಲ್ಲಿ ಹೂತಿಟ್ಟಿದ್ದ ಒಂದು ಸಾವಿರ ಕೆ.ಜಿ ಗಾಂಜಾ ಬೆಂಗಳೂರು ಪೊಲೀಸರು ಪತ್ತೆ ಮಾಡಿದ್ದರು. ಇದೀಗ ಟ್ರಾವೆಲ್ ಏಜೆನ್ಸಿ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುಗತ್ತಿದ್ದ ಆರೋಪಿಯನ್ನು ಎಸ್‌.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 60 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರದೀಪ್ ಬಂಧಿತ ಆರೋಪಿ. ಎಸ್‌.ಜೆ ಪಾರ್ಕ್ ಎಂ.ಎಸ್ ಎಂಟರ್‌ ಪ್ರೈಸಸ್ ನ ಮುಂದೆ ನಿಂತು ವ್ಯಕ್ತಿಯೊಬ್ಬ ಸಾರ್ವಜನಿಕರಿಗೆ ಗಾಂಜಾ ರಾಟ ಮಾಡುತ್ತಿದ್ದ. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಟ್ರಾವೆಲ್ ಏಜೆನ್ಸಿ ಮಾಲೀಕ ಪ್ರದೀಪ್ ಗಾಂಜಾ ಮಾರಾಟ ಮಾಡುತ್ತಿದ್ದ ಸಂಗತಿ ಬಾಯಿ ಬಿಟ್ಟಿದ್ದಾನೆ.

Travel Agency Owner Arrsted for Drug Dealing

ಪ್ರದೀಪ್ ಎಂಬಾತ ಬೆಂಗಳೂರು ಟ್ರಾನ್ಸಪೋರ್ಟ್ ಸಲ್ಯೂಷನ್ ಹೆಸರಿನ ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡಿದ್ದು, ಈತನ ಕಚೇರಿ ಶೋಧ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಇಪ್ಪತ್ತೈದು ಕಾರುಗಳನ್ನು ಹೊಂದಿರುವ ಪ್ರದೀಪ್ ಗೆ ಐದು ವರ್ಷದ ಹಿಂದೆ ಕೋಲಾರ ಮೂಲದ ವಾಸಿಂ ಎಂಬಾತ ಪರಿಚಯವಾಗಿ ಗಾಂಜಾ ನೀಡುತ್ತಿದ್ದ. ಅಂದಿನಿಂದಲೂ ಈತ ಗಾಂಜಾ ತರಿಸಿ ತನ್ನ ಕಾರುಗಳಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಪ್ರದೀಪ್ ಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಸಲೀಂ ತಲೆ ಮರೆಸಿಕೊಂಡಿದ್ದಾನೆ. ಈ ಕುರಿತು ಎಸ್‌.ಜೆ. ಪಾರ್ಕ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
S.J. Park police have arrested a travel agency owner who was selling marijuana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X