ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಿರಿಯರೇ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಮಾಡಿ' : ರಾಮಲಿಂಗಾರೆಡ್ಡಿ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 01: ದೇಶಾದ್ಯಂತ ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳಿಗೆ ಕಿರಿಯರೇ ಪರೋಕ್ಷ ಕಾರಣರಾಗಿದ್ದು, ಕಿರಿಯರು ಹಿರಿಯರ ಮೌಲ್ಯತೆಯನ್ನು ಅರ್ಥಮಾಡಿಕೊಂಡು ಅವರ ಪಾಲನೆ ಪೋಷಣೆಯಲ್ಲಿ ತೊಡಗಬೇಕು. ಆಗ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕ್ಷೀಣವಾಗುತ್ತವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಯಾಗಿದ್ದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯರಿಗೆ ಜೀವಮಾನ ಸಾಧನೆಗೈದ ಹಿರಿಯರಿಗೆ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಹಿರಿಯರಿಗೆ ಸಂಬಂಧಿಸಿದ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು.[ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]

Transport minister Ramalinga reddy inuguarated International Day of Older Persons in Bengaluru

ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕ್ಋತಿಕ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿದ ಇವರು, ರಾಜ್ಯದಲ್ಲಿ ಸುಮಾರು 7 ಲಕ್ಷ ವೃದ್ಧಾಪ್ಯ ವೇತನ ಫಲಾನುಭವಿಗಳಿದ್ದಾರೆ. ಹಿಂದೆ ಜೀವಮಾನ ಸಾಧನೆ ಪ್ರಶಸ್ತಿ ಮೊತ್ತ 10,000 ರೂ ಇತ್ತು. ಇದೀಗ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಮಟ್ಟದ ಹಿರಿಯ ನಾಗರಿಕ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಿಡಲಾಗುತ್ತಿರುವ ಬಹುಮಾನದ ಮೊತ್ತವನ್ನು ಮುಂದಿನ ವರ್ಷದಿಂದ ಹೆಚ್ಚಿಸಲು ನಿರ್ಧಾರ ತೆಗೆದುಕೊಂಡಿದ್ದು, ಪ್ರಥಮ ಬಹುಮಾನದ ಮೊತ್ತವನ್ನು 3,000 ದಿಂದ 15,000 ಕ್ಕೆ, ದ್ವಿತೀಯ ಬಹುಮಾನ ಮೊತ್ತವನ್ನು 2,000 ದಿಂದ 10,000 ಕ್ಕೆ, ತೃತೀಯ ಬಹುಮಾನ ಮೊತ್ತವನ್ನು 1,000 ರೂಗಳಿಂದ 5,000 ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.[ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]

ಈ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಸಮಿತಿಯ ಅಧ್ಯಕ್ಷರಾದ ಹಾಗೂ ಶಾಸಕರಾದ ವೆಂಕಯ್ಯ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

2015ನೇ ಸಾಲಿನಲ್ಲಿ ಪ್ರಶಸ್ತಿ ಬಿಜೇತರಾದ ಹಿರಿಯರ ನಾಗರಿಕ ಪಟ್ಟಿ :

* ಕಲಾ ಕ್ಷೇತ್ರ - ದಾವಣಗೆರೆ ಎಚ್ ಷಡಾಕ್ಷರಪ್ಪ

* ಸಮಾಜ ಸೇವೆ - ಉತ್ತರ ಕನ್ನಡದ ಅಮೀರ ಹುಸೇನ ದೊಡ್ಡಮನಿ

* ಕ್ರೀಡಾ ಕ್ಷೇತ್ರ - ಬೆಂಗಳೂರಿನ ಎಸ್. ಸರೋಜ

* ಸಾಹಿತ್ಯ ಕ್ಷೇತ್ರ - ಮೈಸೂರಿನ ಡಾ|| ಎಚ್. ಜೆ ಲಕ್ಕಪ್ಪಗೌಡ

*ಕಾನೂನು ಕ್ಷೇತ್ರ - ಬೆಂಗಳೂರಿನ ಶಿವಕುಮಾರ್

* ಹಿರಿಯ ನಾಗರಿಕಾ ಸೇವೆ - ಬಳ್ಳಾರಿಯ ಅನ್ನವರ್ಜುಲ ಸುಬ್ರಹ್ಮಣ್ಯ

English summary
Transport minister Ramalinga reddy has inuguarated International Day of Older Persons in Ravindra kala kshetra, Bengaluru on October 2nd and provide many prizes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X