ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಸಾರಿಗೆ ನೌಕರರ ಪ್ರತಿಭಟನೆ, ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ?

|
Google Oneindia Kannada News

ಬೆಂಗಳೂರು,ಫೆಬ್ರವರಿ 10: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಪ್ರತಿಭಟನೆ ನಡೆಸಲಿದ್ದಾರೆ.

ಇಂದು ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಪ್ರತಿಭಟನೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಈ ಪ್ರತಿಭಟನೆಯಿಂದ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಸಿಐಟಿಯು ಸಂಯೋಜಿತ ಬಿಎಂಟಿಸಿ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್‌ಡಿ ರೇವಪ್ಪ ತಿಳಿಸಿದ್ದಾರೆ.

ಈಡೇರದ ಬೇಡಿಕೆ,ಫೆ.10ರಿಂದ ಮತ್ತೆ ಸಾರಿಗೆ ಮುಷ್ಕರಈಡೇರದ ಬೇಡಿಕೆ,ಫೆ.10ರಿಂದ ಮತ್ತೆ ಸಾರಿಗೆ ಮುಷ್ಕರ

ಸಾರಿಗೆ ನೌಕರರಿಗೆ ನಾಲ್ಕು ಪಾಳಿಯಲ್ಲಿ ಬಸ್ ಕಾರ್ಯಾಚರಿಸುವುದು,ಪೂರ್ಣ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.

 Transport Employees Protest In Bengaluru On February 10 Services Will Not Be Hit

ಸಾರಿಗೆ ಮುಷ್ಕರ ಬಳಿಕ ಬಿಎಂಟಿಸಿಯಲ್ಲಿ ನೌಕರ ಸಮಸ್ಯೆಗಳು ಹೆಚ್ಚಾಗಿವೆ, ನಿಗದಿತ ಸಮಯಕ್ಕೆ ವೇತನ ಸಿಗುತ್ತಿಲ್ಲ, ಕಾರ್ಮಿಕರ ಗಳಿಕೆ ರಜೆ ಕಡಿತ, ಬಲವಂತದ ರಜೆ ನೀಡುವುದು, ಕರ್ತವ್ಯ ನೀಡಲು ತಾಸುಗಟ್ಟಲೇ ಕಾಯಿಸುವುದು, ಲಂಚ ಪಡೆದು ಕರ್ತವ್ಯಕ್ಕೆ ನಿಯೋಜಿಸುತ್ತಿರುವುದನ್ನು ನಿಲ್ಲಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಡಲಾಗಿದೆ.

ಬೇಡಿಕೆಗಳೇನು?

  • ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಪಡೆಯುವ ಯೋಜನೆ ಕೈಬಿಡಬೇಕು
  • ಪೂರ್ಣ ಪ್ರಮಾಣದಲ್ಲಿ ನಾಲ್ಕು ಪಾಳಿಯಲ್ಲಿ ಬಸ್ ಕಾರ್ಯಾಚರಿಸಬೇಕು
  • ಸರಿಯಾದ ಸಮಯಕ್ಕೆ ಮಾಸಿಕ ವೇತನ ನೀಡಬೇಕು ಮತ್ತು ಬಾಕಿ ವೇತನ ತಕ್ಷಣವೇ ಬಿಡುಗಡೆ ಮಾಡಬೇಕು
  • ಷರತ್ತುಗಳಿಲ್ಲದೆ ವಾರದ ರಜೆ ನೀಡಬೇಕು,ಕಡಿತ ಮಾಡಿದ ರಜೆಯನ್ನು ಹಿಂದಿರುಗಿಸಬೇಕು
  • ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯ ಕೆಲಸಕ್ಕೆ ಆದ್ಯತೆ ನೀಡಬೇಕು
English summary
Transport Employees Protest In Bengaluru On February 10 , They want to highlight a range of issues, including delay in payment of salaries and alleged harassment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X