ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳ: ಎಚ್ಡಿಕೆ ಅಂಗಳದಲ್ಲಿ ಚೆಂಡು!

|
Google Oneindia Kannada News

Recommended Video

ಸರ್ಕಾರಿ ಬಸ್‌ ಪ್ರಯಾಣ ದರ ಶೇ.18 ರಷ್ಟು ಹೆಚ್ಚಳ | Oneindia Kannada

ಬೆಂಗಳೂರು, ಸೆಪ್ಟೆಂಬರ್ 17: ಸಾರಿಗೆ ಬಸ್ ಪ್ರಯಾಣ ದರವನ್ನು ಶೇ.18ರಷ್ಟು ಏರಿಸಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಷ್ಟದಲ್ಲಿ ಇಲಾಖೆಗಳನ್ನು ನಡೆಸಲು ಕಷ್ಟವಾಗುತ್ತಿದೆ, ಹಾಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ಸಾರಿಗೆ ಇಲಾಖೆಗೆ ಹೊಸದಾಗಿ ಇನ್ನೂ ನಾಲ್ಕು ಸಾವಿರ ಬಸ್ ಗಳು ಸೇರ್ಪಡೆಯಾಗಲಿದೆ. ಈಗಾಗಲೇ ಬಜೆಟ್ ನಲ್ಲಿ ಒಪ್ಪಿಗೆ ಸಿಕ್ಕಿದೆ, ಕರ್ನಾಟಕ ಸಾರಿಗೆ ದೇಶದಲ್ಲೇ ಉತ್ತಮವಾಗಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಾರಿಗೆ ಇಲಾಖೆಯಲ್ಲಿ ಒಟ್ಟು 1.16 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶೇ.95ರಷ್ಟು ಗ್ರಾಮೀಣಭಾಗದವರಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ ಎಂದರು.

Transport dept sent to govt proposal for 18percent bus fare hike

ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಗೆ ಸಿದ್ದರಾಗಿ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಗೆ ಸಿದ್ದರಾಗಿ

ಬಸ್‌ಗಳ ಪ್ರಯಾಣ ದರ ಶೇ.18ರಷ್ಟು ಹೆಚ್ಚಳವಾದರೆ ಮಧ್ಯಮ ವರ್ಗ ಹಾಗೂ ಬಡವರ್ಗದವರಿಗೆ ಎಲ್ಲಾ ಕಡೆಯಿಂದಲೇ ಹೊಡೆತ ಬಿದ್ದಂತಾಗಲಿದೆ. ಒಂದೆಡೆ ಸಣ್ಣ ಪುಟ್ಟ ವಾಹನಗಳನ್ನಿಟ್ಟುಕೊಂಡಿರುವವರು ಪೆಟ್ರೋಲ್ ತುಂಬಿಸಲಾಗದೆ ಗಾಡಿ ಮನೆಯಲ್ಲೇ ಬಿಟ್ಟು ಸಾರ್ವಜನಿಕ ಸಂಪರ್ಕ ಸಾರಿಗೆ ಬಳಸಬೇಕೆಂದುಕೊಂಡಿದ್ದರೆ ಅದರ ಮೂಲಕವೂ ಏಟು ಬೀಳಲಿದೆ. ಏಕೆಂದರೆ ಸರ್ಕಾರ ಸಾರಿಗೆ ಬಸ್‌ಗಳು ಪ್ರಯಾಣ ದರವನ್ನು ಹೆಚ್ಚಿಸಲಿದೆ. ಪ್ರಸ್ತಾವನೆಗೆ ಸರ್ಕಾರ ಒಪ್ಪುತ್ತೋ ಬಿಡುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ.

English summary
Transport minister D.C.Thammanna has said that the proposal has been sent to finance department to seek approval for 18 percent hiking in KSRTC bus fare and chief minister H.D.Kumaraswamy will take final call soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X