ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.5ಕ್ಕೆ ಸಾರಿಗೆ ಇಲಾಖೆಯ ವಾಹನಗಳ ಬಹಿರಂಗ ಹರಾಜು

By Mahesh
|
Google Oneindia Kannada News

ಬೆಂಗಳೂರು ಆಗಸ್ಟ್ 20: ನಗರದ ವಿವಿಧ ಭಾಗಗಳಲ್ಲಿ ತನಿಖೆ ನಡೆಸಿದಾಗಿ ವಶಪಡಿಸಿಕೊಂಡಿರುವ ವಾಹನಗಳನ್ನು ಸೆಪ್ಟೆಂಬರ್ 5 2018 ರಂದು ಬಹಿರಂಗ ಹರಾಜು ಪ್ರಕ್ರಿಯೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

14 ವಾಹನಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಹರಾಜಿಗಿರುವ ವಾಹನಗಳ ಪಟ್ಟಿಯನ್ನು ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಯಶವಂತಪುರ ಸಾರಿಗೆ ಅಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.

ಮುಷ್ಕರಕ್ಕೆ ಕಾರಣವಾದ ಮೋಟಾರು ವಾಹನ ಕಾಯ್ದೆಯಲ್ಲೇನಿದೆ?ಮುಷ್ಕರಕ್ಕೆ ಕಾರಣವಾದ ಮೋಟಾರು ವಾಹನ ಕಾಯ್ದೆಯಲ್ಲೇನಿದೆ?

8 ಟೆಂಪೋ ಟ್ರಾವೆಲರ್, 2 ಟಾಟಾ ಇಂಡಿಕಾ, 2 ಐಷರ್, 1 ಮಾರುತಿ ಆಮ್ನಿ, 1 ಟಯೊಟಾ ಕ್ವಾಲೀಸ್, 1 ಸ್ವರಾಜ್ ಮಜ್ದಾ ಗಾಡಿಗಳನ್ನು ಈ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Transport department Vehicles open auction

ಸದ್ಯ ಬಿಎಂಟಿಸಿ ಡಿಪೋ ಸಂಖ್ಯೆ 26, 28, 3, 22ಗಳಲ್ಲಿ ವಾಹನಗಳನ್ನು ಕಚೇರಿ ಸಮಯದಲ್ಲಿ ಬಂದು ಕಾಣಬಹುದಾಗಿದೆ.

ಹರಾಜು ಪ್ರಕ್ರಿಯೆ ಎರಡು ರೀತಿ ನಡೆಯಲಿದೆ, ಟೆಂಡರ್ ನಲ್ಲಿ ಭಾಗವಹಿಸಲು ಇಚ್ಛಿಸುವವರು ಪ್ರತಿವಾಹನಕ್ಕೆ 5,000/ ರು ನೀಡಿ ಮುಂಗಡವಾಗಿ ಎಂಇಡಿ ಮೊತ್ತವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೆಂಗಳೂರು ಇವರಿಗೆ ಸಂದಾಯವಾಗುವಂತೆ ಡಿಡಿ ಪಡೆದು, ವಾಹನದ ನೋಂದಣಿ ಸಂಖ್ಯೆ, ತಮ್ಮ ಹೆಸರು ವಿವರಗಳನ್ನು ಸೀಲ್ ಮಾಡಿದ ಲಕೋಟೆಯಲ್ಲಿ ದಿನಾಂಕ 05/09/2018 ದಿನಾಂಕ 3 ಗಂಟೆಯೊಳಗೆ ಕಚೇರಿ ಸಲ್ಲಿಸತಕ್ಕದ್ದು.

ಸೆ.05ನೇ ತಾರೀಖು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜಿನಲ್ಲಿ ಖರೀದಿಸಿದ ವಾಹನದ ದಾಖಲಾತಿಗಳ ಶುಲ್ಕ, ತೆರಿಗೆ ಇತ್ಯಾದಿಗಳನ್ನು ಬಿಡ್ಡುದಾರರೇ ಭರಿಸತಕ್ಕದ್ದು.

English summary
Transport department has announced that department vehicles will be openly auctioned on September 05.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X