ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಸಾರಿಗೆ ಇಲಾಖೆ ನಿರಾಸಕ್ತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 16:ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಏ.1ರಿಂದ ದೇಶಾದ್ಯಂತ ಆಟೋ ಹೊರತುಪಡಿಸಿ ಎಲ್ಲ ರೀತಿಯ ಪ್ಯಾಸೆಂಜರ್ ವಾಹನಗಳಿಗೆ ವೆಹಿಕಲ್ ಟ್ರ್ಯಾಕಿಂಗ್ ಯುನಿಟ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಎಂಬ ಆದೇಶವಿದೆ.

ಆದರೆ, ಆದೇಶ ಅನುಷ್ಠಾನ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ. ಕಂಟ್ರೋಲ್ ರೂಂ ಸ್ಥಾಪನೆ ಸೇರಿ ಹಲವು ಕಾರಣಗಳಿಂದ ಈ ಆದೇಶ ಕಾಗದದಲ್ಲೇ ಉಳಿದಿದೆ.

ಸರ್ಕಾರಿ ಸಿಬ್ಬಂದಿ ಕಾವಲಿಗೆ ಬರಲಿದೆ ಜಿಪಿಎಸ್ಸರ್ಕಾರಿ ಸಿಬ್ಬಂದಿ ಕಾವಲಿಗೆ ಬರಲಿದೆ ಜಿಪಿಎಸ್

ನಿರ್ಭಯಾ ಪ್ರಕರಣ ನಂತರ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 23 ಸೀಟಿಗಿಂತ ಅಧಿಕವಿರುವ ಬಸ್ ಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ ಆದೇಶವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿತ್ತು. ಇದಾದ ನಂತರ ಪ್ಯಾಸೆಂಜರ್ ವಾಹನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಜತೆಗೆ 2018 ಏ.1ರಿಂದ ವಿಟಿಯು ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಆದೇಶವನ್ನು 2016-2017ರಲ್ಲಿ ಸಚಿವಾಲಯ ಮಾಡಿದೆ.

Transport department fails to meet women protection initiatives

ಪೂರ್ವ ಸಿದ್ಧತೆ ಇಲ್ಲ: ಕೇಂದ್ರದ ಆದೇಶದಂತೆ ನೋಂದಣಿಯಾಗುವ ಎಲ್ಲ ಪ್ಯಾಸೆಂಜರ್ ವಾಹನ ಮತ್ತು ಅರ್ಹತಾ ಪತ್ರ ಪಡೆಯಲು ಆಗಮಿಸುವ ವಾಹನಗಳಲ್ಲೂ ಇದನ್ನು ಪರಿಶೀಲಿಸಲು ಸಾರಿಗೆ ಆಯುಕ್ತರು ಮಾರ್ಚ್ ಅಂತ್ಯದಲ್ಲಿ ಸೂಚಿಸಿದ್ದರು. ಆದರೆ, ರಾಜ್ಯ ಸಾರಿಗೆ ಇಲಾಖೆ ಪೂರ್ವಸಿದ್ಧತೆ ಇಲ್ಲದೆ ಈ ಆದೇಶ ಅನುಷ್ಠಾನಕ್ಕೆ ಮುಂದಾಗಿತ್ತು. ರಾಜ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಪ್ಯಾಸೆಂಜರ್ ವಾಹನಗಳು ಈ ಆದೇಶ ಪಾಲಿಸಿವೆಯೇ ಎನ್ನುವುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸಮಯವಿಲ್ಲ, ಎಲ್ಲರೂ ಚುನಾವಣಾ ಕೆಲಸಗಳಲ್ಲೇ ತಲ್ಲೀನರಾಗಿದ್ದಾರೆ.

English summary
State transport department has failed to implement some measure in the wake of women safety in public transport vehicles except auto rickshaws. Ministry of Road Transport and Highways given directions to install panic button and vehicle tracking units for public transport vehicles before April 1, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X