ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ

|
Google Oneindia Kannada News

Recommended Video

ಕರ್ನಾಟಕದಲ್ಲಿ 6 ತಿಂಗಳು ಓಲಾ ಬ್ಯಾನ್ | ಗ್ರಾಹಕರಿಗೆ ಆಘಾತಕಾರಿ ಸುದ್ದಿ | Oneindia kananda

ಬೆಂಗಳೂರು, ಮಾರ್ಚ್ 22: ನಗರ ಪ್ರದೇಶಗಳಲ್ಲಿದ್ದು, ನೀವು ಓಡಾಟಕ್ಕೆ ಹೆಚ್ಚಾಗಿ ಓಲಾ ಕ್ಯಾಬ್ ನೆಚ್ಚಿಕೊಂಡಿದ್ದೀರಾ? ಹಾಗಿದ್ದರೆ ಓಲಾ ಕ್ಯಾಬ್ ಗೆ ರಾಜ್ಯ ಸರ್ಕಾರ ನೀಡಿರುವ ಈ ಬಿಗ್ ಶಾಕ್ ಬಗ್ಗೆ ನೀವು ತಿಳಿದುಕೊಳ್ಳಬೇಕು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಆರು ತಿಂಗಳ ಅವಧಿಯವರೆಗೂ ಓಲಾ ಕ್ಯಾಬ್ ಸಂಚಾರಕ್ಕೆ ನೀಡಿರುವ ಪರವಾನಗಿ ರದ್ದುಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

transport department cancelled the license of Ola cabs for 6 months

ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಓಲಾ ಕ್ಯಾಬ್ ಮೇಲೆ ಈ ನಿಷೇಧದ ಕ್ರಮ ತೆಗೆದುಕೊಂಡಿರುವುದಾಗಿ ಸಾರಿಗೆ ಆಯುಕ್ತ ವಿ.ಪಿ. ಇಕ್ಕೇರಿ ತಿಳಿಸಿದ್ದಾರೆ.

ಬಿಳಿ ನಾಮಫಲಕದ ವಾಹನಗಳನ್ನು ಬಾಡಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಓಲಾ ಸಂಸ್ಥೆ ಈ ನಿಯಮವನ್ನು ಕಡೆಗಣಿಸಿ ಬಿಳಿ ನಾಮಫಲಕದ ವಾಹನಗಳನ್ನು ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು.

 ಓಲಾ ಚಾಲಕ ಮಾರ್ಗ ಬದಲಿಸಿದ್ರೂ ಯುವತಿ ಸುರಕ್ಷಿತವಾಗಿ ಮನೆಗೆ ಸೇರಿದ್ದು ಹೇಗೆ? ಓಲಾ ಚಾಲಕ ಮಾರ್ಗ ಬದಲಿಸಿದ್ರೂ ಯುವತಿ ಸುರಕ್ಷಿತವಾಗಿ ಮನೆಗೆ ಸೇರಿದ್ದು ಹೇಗೆ?

ಈ ಬಗ್ಗೆ ಸ್ಪಷ್ಟನೆ ಕೋರಿ ನೋಟಿಸ್ ನೀಡಲಾಗಿದ್ದರೂ, ಅದಕ್ಕೆ ಓಲಾ ಸಂಸ್ಥೆ ಉತ್ತರ ನೀಡಿರಲಿಲ್ಲ. ಹೀಗಾಗಿ ಸಂಸ್ಥೆಗೆ ನೀಡಿರುವ ಪರವಾನಗಿಯನ್ನು ಆರು ತಿಂಗಳವರೆಗೆ ರದ್ದುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
In a big shock to public, Karnatak transport department has cancelled the licensed of Ola cabs for six months for not following the rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X