ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನಗಳ ಮೇಲೆ ಜಾಹೀರಾತು ಹಾಕುವಂತಿಲ್ಲ, ಅನುಮತಿ ಕಡ್ಡಾಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 8: ಆಟೋ ರಿಕ್ಷಾಗಳು, ಬಸ್, ಟ್ಯಾಕ್ಸಿಗಳ ಮೇಲೆ ಜಾಹೀರಾತುಗಳು ರಾರಾಜಿಸುತ್ತಿದ್ದವು ಅದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ನು ಯಾವುದೇ ವಾಹನಗಳ ಮೇಲೆ ಜಾಹೀರಾತು ಅಳವಡಿಸದಂತೆ ಸೂಚನೆ ಹೊರಡಿಸಿದೆ.

ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ ರಸ್ತೆ ಮೇಲೆ ಸಂಚರಿಸುವ ಯಾವುದೇ ಸಾರಿಗೆ ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸುವಂತಿಲ್ಲ. ಬಸ್, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳ ಮಾಲೀಕರು ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸುವಂತಿಲ್ಲ.

ಜಾಹೀರಾತು ಪ್ರದರ್ಶಿಸಬೇಕಾದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಒಂದೊಮ್ಮೆ ಅನುಮತಿ ಪಡೆಯದೆ ಇದ್ದರೆ ಅಂತಹ ವಾಹನಗಳ ವಿರುದ್ಧ ಮೋಟಾರ್ ಕಾಯಿದೆ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

ಅಕ್ಟೋಬರ್ ಅಂತ್ಯದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಡಿಆರ್‌ಟಿಎ ಸಭೆಯಲ್ಲಿ ವಾಹನಗಳ ಮೇಲಿನ ಜಾಹೀರಾತು ಕುರಿತು ಚರ್ಚೆಯಾಗಿತ್ತು. ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ, ಆಟೋ ಸೇರಿ ವಾಣಿಜ್ಯ ವಾಹನಗಳ ಮೇಲೆ ಜಾಹೀರಾತುಗಳಿಗೆ ಕಡಿವಾಣ ಹಾಕಲು ಉಪಸಮಿತಿ ರಚಿಸಲು ಆರ್‌ಟಿಎ ನಿರ್ಧರಿಸಿತ್ತು.

ಚಾಲಕರಿಗೆ ಚಾಲನೆಗೆ ಅಡ್ಡಿ ಪಡಿಸದಂತಹ ಜಾಹೀರಾತು, ಜಾಹೀರಾತು ಗಾತ್ರ ಮುಂತಾದವುಗಳ ಬಗ್ಗೆ ಪ್ರತ್ಯೇಕ ನೀತಿ, ನಿಯಮ ಜಾರಿ ಕುರಿತು ಸಮಿತಿ ನಿರ್ಧರಿಸಲು ಎಂದು ಎನ್ನುವ ನಿರ್ಧಾರ ಮಾಡಲಾಗಿತ್ತು.

ಅಕ್ರಮ ಜಾಹೀರಾತು ತಡೆಗೆ ಪ್ರಯತ್ನ

ಅಕ್ರಮ ಜಾಹೀರಾತು ತಡೆಗೆ ಪ್ರಯತ್ನ

ಅಕ್ರಮ ಜಾಹೀರಾತು ತಡೆಗೆ ಸಾರಿಗೆ ಇಲಾಖೆಯು ನಿರಂತರ ಪ್ರಯತ್ನ ಮಾಡುತ್ತಿದೆ. ಈ ಹಿಂದೆಯೂ ವಾಹನಗಳಲ್ಲಿ ಸಾರಿಗೆ ಇಲಾಖೆಯ ಅನುಮತಿ ಇಲ್ಲದೆ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತಂದಿದ್ದರೂ ಈ ಕುರಿತು ಜಾಗೃತಿ ಮೂಡಿಸಲಾಗಿತ್ತು. ಆದರೆ ಟ್ಯಾಕ್ಸಿ, ಆಟೋಗಳ ಮೇಲಿನ ಜಾಹೀತಾಉಗಳು ಹಾಗೆಯೇ ಇದೆ. ಆದರೆ ಈ ಬಾರಿ ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಬಹುದು ಎಂದು ಕಾದು ನೋಡಬೇಕಿದೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಅನುಮತಿ ಪಡೆಯುವುದು ಕಡ್ಡಾಯ

ಅನುಮತಿ ಪಡೆಯುವುದು ಕಡ್ಡಾಯ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಗಳ ಹೊರ ಕವಚದಲ್ಲಿ ಜಾಹೀರಾತು ತುಂಬಿರುತ್ತವೆ. ಇದಕ್ಕೆ ನಿಯಮ ಅನ್ವಯವಾಗುವುದಿಲ್ಲವೇ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು ಆದರೆ ಇದು ಸಾರಿಗೆ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಒಂದಾಗಿದೆ. ನಿಯಮದ ಪ್ರಕಾರ ಟೆಂಡರ್ ಆಹ್ವಾನಿಸಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ಅಕ್ರಮ ಜಾಹೀರಾತು ಪ್ರದರ್ಶಿಸಿದರೆ ದಂಡ

ಅಕ್ರಮ ಜಾಹೀರಾತು ಪ್ರದರ್ಶಿಸಿದರೆ ದಂಡ

ಸಾರ್ವಜನಿಕ ಸ್ಥಳ ಅಥವಾ ವಾಹನಗಳಲ್ಲಿ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ಹಾಗೂ ನಗರದ ಅಂದಕ್ಕೆ ಧಕ್ಕೆ ಉಂಟು ಮಾಡುವ ಜಾಹೀರಾತು, ಬರಹ ಮತ್ತು ಚಿತ್ರಗಳ ಪ್ರದರ್ಶನಕ್ಕೆ ನಿಷೇಧವಿದೆ. ಸಾರಿಗೆ ವಾಹನಗಳಲ್ಲಿ ಸಿನಿಮಾ, ಕಾರ್ಯಕ್ರಮ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ಹಾಗೂ ಚಿತ್ರಗಳನ್ನು ಪ್ರದರ್ಶಿಸಬೇಕಾದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಲು ಅವಕಾಶವಿದೆ. ಜತೆಗೆ ನ್ಯಾಯಾಲಯದಲ್ಲಿ 5ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

ಟ್ಯಾಕ್ಸಿ, ಆಟೋಗಳಿಗೆ ಅನುಮತಿ ಕಡ್ಡಾಯ

ಟ್ಯಾಕ್ಸಿ, ಆಟೋಗಳಿಗೆ ಅನುಮತಿ ಕಡ್ಡಾಯ

ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ನಿಯಮ 127ರ ಪ್ರಕಾರ ಯಾವುದೇ ಸಾರಿಗೆ ವಾಹನ ಅಂದರೆ ಆಟೋ, ಟ್ಯಾಕ್ಸಿ, ಬಸ್, ಕ್ಯಾಬ್ ಗಳಲ್ಲಿ ಜಾಹೀರಾತು ಪ್ರದರ್ಶಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಆದರೆ ಬೆಂಗಳೂರಲ್ಲಿ ಬಹುತೇಕ ಸಾರಿಗೆ ವಾಹನಗಳು ಅನುಮತಿ ಪಡೆಯದೇ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿವೆ.

English summary
Karnataka transport department banned display of obscene or controversial texts, and advertisements of alcohol and tobacco products on public transport vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X